ರೈಲುಗಳಲ್ಲಿ ಇನ್ಮುಂದೆ ಸಿಗಲಿದೆ ಸ್ಥಳೀಯ ಆಹಾರ: ಪ್ರಾದೇಶಿಕ ಖಾದ್ಯಗಳಿಗೆ ಆದ್ಯತೆ ನೀಡಲು ಐಆರ್‌ಸಿಟಿಸಿಗೆ ಅಧಿಕಾರ

ಹುಬ್ಬಳ್ಳಿ: ರೈಲುಗಳಲ್ಲಿ ಏಕರೂಪದ ಆಹಾರ ಖಾದ್ಯಗಳ ಬದಲು ಭಾರತದ ಪ್ರಾದೇಶಕ ಖಾದ್ಯವೈವಿಧ್ಯಗಳಿಗೆ ಆದ್ಯತೆ ನೀಡಲು ರೈಲ್ವೆ ಸಚಿವಾಲಯವು ಐಆರ್‌ಸಿಟಿಸಿ (ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್)ಗೆ ಅಧಿಕಾರ ನೀಡಿ ಸುತ್ತೋಲೆ ಹೊರಡಿಸಿದೆ. ಈ ಮೂಲಕ ಸಿರಿಧಾನ್ಯ ಆಧಾರಿತ ಆಹಾರ, ಹಬ್ಬ-ಹರಿದಿನಗಳಂದು ಪ್ರಯಾಣಿಸುವ ರೈಲು ಯಾತ್ರಿಕರಿಗೆ ವಿವಿಧ ಬಗೆಯ ಪಾಕ ವೈವಿಧ್ಯ ಭಕ್ಷ್ಯಗಳನ್ನು ಸವಿಯಲು ಸಾಧ್ಯವಾಗಲಿದೆ. … Continued