ಸ್ವಲ್ಪ ತಡವಾಗಿದ್ರೂ ತಾಯಿ-ಮಗು ಭೋರ್ಗರೆವ ಜಲಪಾತದಲ್ಲಿ ಕೊಚ್ಚಿ ಹೋಗ್ತಿದ್ರು ; ಬಚಾವ್‌ ಮಾಡಿದ ಮೈನವಿರೇಳಿಸುವ ದೃಶ್ಯ ವಿಡಿಯೊದಲ್ಲಿ ಸೆರೆಯಾಯ್ತು..!

ಚೆನ್ನೈ: ಜಲಪಾತದಲ್ಲಿ ನೀರಿನ ರಭಸದ ಮಧ್ಯೆ ಸಿಲುಕಿಕೊಂಡಿದ್ದ ತಾಯಿ ಮತ್ತು ಮಗುವನ್ನು ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ತಮಿಳುನಾಡಿನ ಅರಣ್ಯಾಧಿಕಾರಿಗಳು ಜಲಪಾತದಿಂದ ಹಗ್ಗದ ಸಹಾಯದಿಂದ ತಾಯಿ ಮತ್ತು ಮಗುವನ್ನು ರಕ್ಷಿಸುತ್ತಿರುವ ಈ ವಿಡಿಯೊವನ್ನು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಕೂಡ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು ಈ ಸಾಹಸಕ್ಕೆ ಕೊಂಡಾಡಿದ್ದಾರೆ. … Continued