ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷೆಯಾಗಿ ಆಯೇಷಾ ಖಾನಂ ನೇಮಕ

ಬೆಂಗಳೂರು : ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನೂತನ ಅಧ್ಯಕ್ಷೆಯಾಗಿ ಹಿರಿಯ ಪತ್ರಕರ್ತೆ ಆಯೇಷಾ ಖಾನಂ ನೇಮಕವಾಗಿದ್ದಾರೆ. ಕರ್ನಾಟಕ ಸಾರ್ವಜನಿಕ ಮತ್ತು ಸಂಪರ್ಕ ಇಲಾಖೆ ವ್ಯಾಪ್ತಿಗೆ ಬರುವ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಇದೇ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆಯನ್ನು ರಾಜ್ಯ ಸರ್ಕಾರ ನೇಮಕಗೊಳಿಸಿದೆ. ಜೊತೆಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಿಗೆ ಈ ಹುದ್ದೆ ಲಭಿಸಿದೆ. ಅಕಾಡೆಮಿ ಸದಸ್ಯರಾಗಿ ಹಿರಿಯ … Continued

ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ : ಸಿ.ಟಿ. ರವಿ

ಬೆಂಗಳೂರು : ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಆದರೆ ವರಿಷ್ಠರು ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ನಗರದಲ್ಲಿ ಇಂದು, ಭಾನುವಾರ ಮಾತನಾಡಿದ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಲಿದ್ದಾರೆ ಎನ್ನುವ ವಿಚಾರ ನನಗೆ ಗೊತ್ತಿಲ್ಲ. ಈಗ ನಾನು … Continued

ಧಾರವಾಡ ಐಐಐಟಿಗೆ ಸೆಪ್ಟೆಂಬರ್ 26ರಂದು ರಾಷ್ಟ್ರಪತಿ ಮುರ್ಮು ಭೇಟಿ: ಬುಡಕಟ್ಟು ಭಾಷೆಗಳಿಗೆ ಧ್ವನಿ ಭಾಷಾನುವಾದ ಮಾಡುವ ರೋಬೋಟ್ ಅಭಿವೃದ್ಧಿ…!

ಧಾರವಾಡ: ಇಲ್ಲಿನ ಪ್ರತಿಷ್ಠಿತ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗೆ (ಐಐಐಟಿ) ರಾಷ್ಟ್ರಪತಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿರಾಷ್ಟ್ರಪತಿಗಳ ಮೂಲ ರಾಜ್ಯವಾದ ಒಡಿಸ್ಸಾ ಹಾಗೂ ಕರ್ನಾಟಕದ ಬುಡಕಟ್ಟು ನಿವಾಸಿಗಳಿಗಾಗಿ ಬಹುಭಾಷಾ ಧ್ವನಿ ಅನುವಾದ ಮಾಡುವ ರೋಬೋಟ್ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 26ರಂದು ಐಐಐಟಿ ಸಂಸ್ಥೆಯನ್ನು ನಾಡಿಗೆ ಸಮರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿಯೇ ಈ ಸಂಸ್ಥೆ ಉನ್ನತ … Continued

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ ಅಶೋಕ್‌ ಹಾರನಹಳ್ಳಿ ಆಯ್ಕೆ

ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷರಾಗಿ ಅಶೋಕ್‌ ಹಾರನಹಳ್ಳಿ ಆಯ್ಕೆಯಾಗಿದ್ದಾರೆ. ಅಶೋಕ ಹಾರನಹಳ್ಳಿ ಅವರು 455 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಶೋಕ್‌ ಹಾರನಹಳ್ಳಿ, ಎಸ್‌. ರಘುನಾಥ್ ಮತ್ತು ಆರ್‌. ಲಕ್ಷ್ಮೀಕಾಂತ್ ಸ್ಪರ್ಧಿಸಿದ್ದರು. ಅಶೋಕ್‌ ಹಾರನಹಳ್ಳಿ 4,424 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿಗಳಾದ ಎಸ್‌. ರಘುನಾಥ್ 3,969 ಮತಗಳು … Continued

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ಗೆ ಮಾ.೩೦ರಂದು ಬೈಪಾಸ್‌ ಸರ್ಜರಿ

ಹೊಸದಿಲ್ಲಿ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರನ್ನು ಶನಿವಾರ ದಿಲ್ಲಿಯಲ್ಲಿರುವ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್‌)ಗೆ ದಾಖಲಿಸಲಾಗಿದ್ದು, ಬೈಪಾಸ್‌ ಸರ್ಜರಿಗೆ ಸಿದ್ಧತೆ ನಡೆಯುತ್ತಿದೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ. ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಶನಿವಾರ ದೆಹಲಿಯ ಏಮ್ಸ್‌ಗೆ ಸ್ಥಳಾಂತರಿಸಲಾಗಿದೆ. ತನಿಖೆಯ ನಂತರ, ಮಾರ್ಚ್ 30, ಮಂಗಳವಾರ ಬೆಳಿಗ್ಗೆ ಯೋಜಿತ ಬೈಪಾಸ್ ಸರ್ಜರಿಗೆ … Continued

ರಕ್ಷಣಾ ವಲಯದಲ್ಲಿ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಸಹಕಾರಿ

ಬೆಂಗಳೂರು: ರಕ್ಷಣಾ ವಲಯದಲ್ಲಿ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಏರೋ ಏಂಡಿಯಾ ವೈಮಾನಿಕ ಪ್ರದರ್ಶನ ಸಹಕಾರಿಯಾಗಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 13ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ರಕ್ಷಣೆ ಮತ್ತು ವೈಮಾನಿಕ ವಲಯದಲ್ಲಿ ಭಾರತದ ಶಕ್ತಿ ಸಾಮರ್ಥ್ಯವನ್ನು ಜಗತ್ತಿನ ಮುಂದೆ ತೆರೆದಿಡಲು … Continued

ಇಂದಿನಿಂದ ರಾಷ್ಟ್ರಪತಿಗಳ  ೪ ದಿನಗಳ ಕರ್ನಾಟಕ ಪ್ರವಾಸ

ಬೆಂಗಳೂರು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ. ನಾಲ್ಕು ದಿನಗಳ ಕಾಲ ಅನೇಕ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ವಿಶೇಷ ವಿಮಾನದ ಮೂಲಕ ಗುರುವಾರ ರಾತ್ರಿ ಬೆಂಗಳೂರಿಗೆ ಆಗಮಿಸುವ ರಾಷ್ಟ್ರಪತಿ ಅವರು ಶುಕ್ರವಾರ (ಫೆ.೫) ಮಧ್ಯಾಹ್ನ ಏರೋ ಇಂಡಿಯಾ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆ.6ರಂದು ತಲಕಾವೇರಿಗೆ ಭೇಟಿ ನೀಡಲಿದ್ದು, ಅಂದು ಮಧ್ಯಾಹ್ನ ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ … Continued