ಕದ್ದುಮುಚ್ಚಿ ಹಾಲು ಕುಡಿದ ಬೆಕ್ಕು ಯಾರೆಂಬುದು ನಮ್ಗೆ ಗೊತ್ತು: ಪಕ್ಷದ್ರೋಹಿಗಳಿಗೆ ಶಾಸಕಿ ರೂಪಾಲಿ ಖಡಕ್ ಎಚ್ಚರಿಕೆ

ಅಂಕೋಲಾ: ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮವರೇ ಕೆಲವರು ಆಟವಾಡಿದ್ದು, ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಜನಕ್ಕೆ ತಿಳಿಯುವುದಿಲ್ಲ ಎಂಬ ಭ್ರಮೆಯಲ್ಲಿದ್ದಾರೆ. ಮುಂದೊಂದು ದಿನ ಇದು ಹೊರಬಂದೇ ಬರುತ್ತದೆ ಎಂದು ಶಾಸಕಿ ರೂಪಾಲಿ ನಾಯ್ಕ ಪಕ್ಷವಿರೋಧಿ ಚಟುವಟಿಕೆ ಮಾಡಿದವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ವಿಧಾನ ಪರಿಷತ್‌ ಚುನಾವಣೆಯಲ್ಲಿ ಗೆದ್ದಿರುವ ಗಣಪತಿ ಉಳ್ವೇಕರ್ ಅವರಿಗೆ ಬಿಜೆಪಿ ಕಾರ್ಯಾಲಯದಲ್ಲಿ ಅಭಿನಂದನೆ … Continued