ವೀಡಿಯೊ…| ಬರೋಬ್ಬರಿ 46 ವರ್ಷಗಳ ನಂತರ 500 ವರ್ಷಗಳ ಪುರಾತನ ದೇಗುಲ ಓಪನ್…!
ಲಕ್ನೋ: ಮಹತ್ವದ ಬೆಳವಣಿಗೆಯೊಂದರಲ್ಲಿ, ಉತ್ತರ ಪ್ರದೇಶದ ಸಂಭಾಲ್‌ನ ಖಗ್ಗು ಸರೈ ಪ್ರದೇಶದಲ್ಲಿ 46 ವರ್ಷಗಳ ನಂತರ ಶಿವ ದೇವಾಲಯವನ್ನು ಶನಿವಾರ ಪುನಃ ತೆರೆಯಲಾಗಿದೆ. ದಶಕಗಳಷ್ಟು ಹಳೆಯದಾದ ದೇವಾಲಯವು ಪ್ರಸ್ತುತ ಶಿಥಿಲಗೊಂಡಿದೆ. ಇದು ಅತಿಕ್ರಮಣಕ್ಕೆ ಒಳಗಾಗಿದ್ದು, 1978 ರಿಂದ ಮುಚ್ಚಲಾಗಿದೆ. ಪೊಲೀಸರೊಂದಿಗೆ ನಗರಾಡಳಿತವು ಅತಿಕ್ರಮಣ ವಿರೋಧಿ ಮತ್ತು ವಿದ್ಯುತ್ ಕಳ್ಳತನದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವಾಗ ದೇವಾಲಯ ಕಂಡುಬಂದಿದೆ. … Continued