ಅಫ್ಘಾನಿಸ್ತಾನದಲ್ಲಿ ಶಾಲಾ ಬಾಂಬ್ ದಾಳಿಯಲ್ಲಿ ಕನಿಷ್ಠ 15 ಮಂದಿ ಸಾವು

ಕಾಬೂಲ್‌: ಉತ್ತರ ಅಫ್ಘಾನಿಸ್ತಾನದ ಸಮಂಗನ್ ಪ್ರಾಂತ್ಯದ ಧಾರ್ಮಿಕ ಶಾಲೆಯೊಂದರಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 15 ಜನರು ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಾಂತೀಯ ವಕ್ತಾರ ಎಮ್ದಾದುಲ್ಲಾ ಮುಹಾಜಿರ್ ಅವರು ಸಮಂಗನ್ ರಾಜಧಾನಿ ಅಯ್ಬಕ್‌ನಲ್ಲಿರುವ ಶಾಲೆಯಲ್ಲಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದರು. “ನಗರದ ಮಧ್ಯಭಾಗದಲ್ಲಿರುವ ಜಹದಿಯಾ ಮದರಸಾದಲ್ಲಿ … Continued

ಮಂಕಿಪಾಕ್ಸ್ ಪರೀಕ್ಷೆಗೆ 5 ವರ್ಷದ ಬಾಲಕಿ ಮಾದರಿ ಸಂಗ್ರಹ

ಲಕ್ನೋ: 5 ವರ್ಷದ ಬಾಲಕಿಯ ಮಾದರಿಯನ್ನು ಮಂಕಿಪಾಕ್ಸ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ ಎಂದು ಗಾಜಿಯಾಬಾದ್‌ನ ಮುಖ್ಯ ವೈದ್ಯಕೀಯ ಅಧಿಕಾರಿ (CMO) ತಿಳಿಸಿದ್ದಾರೆ. ಆಕೆಯ ದೇಹದಲ್ಲಿ ತುರಿಕೆ ಮತ್ತು ದದ್ದುಗಳ ಕಂಡುಬಂದಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮುಂಜಾಗ್ರತೆ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಆಕೆಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ ಮತ್ತು ಕಳೆದ 1 ತಿಂಗಳಲ್ಲಿ ಅವಳು ಅಥವಾ ಅವಳ … Continued

ರಷ್ಯಾ ಸೈನಿಕರಿಂದ ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳುತ್ತಿರುವ ಉಕ್ರೇನಿಯನ್ ಯುವತಿಯರು: ಅಧಿಕಾರಿ

ಕೀವ್‌ (ಉಕ್ರೇನ್)‌ : ರಾಜಧಾನಿ ಕೀವ್‌ನಿಂದ ಸುಮಾರು 50 ಮೈಲುಗಳಷ್ಟು ದೂರದಲ್ಲಿರುವ ಉಕ್ರೇನಿಯನ್ ಪಟ್ಟಣವಾದ ಇವಾನ್‌ಕಿವ್‌ನಲ್ಲಿ, ಯುವತಿಯರು ರಷ್ಯಾದ ಸೈನಿಕರಿಂದ ಅತ್ಯಾಚಾರಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳಲು ತಮ್ಮ ಕೂದಲನ್ನು ಕತ್ತರಿಸಿಕೊಳ್ಳುತ್ತಿದ್ದಾರೆ..! ತಾವು ಆಕರ್ಷಕವಾಗಿ ಕಾಣದಿರುವಂತೆ ಮಾಡಲು ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸಿ ರಷ್ಯಾದ ಸೈನಿಕರಿಂದ ಅತ್ಯಾಚಾರಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಉಪ ಮೇಯರ್ ಮರಿನಾ ಬೆಸ್ಚಾಸ್ಟ್ನಾ ಹೇಳಿದ್ದಾರೆ. ಮಾರ್ಚ್ … Continued