ಉತ್ತರಾಖಂಡ ಸಿಎಂ ಸ್ಥಾನಕ್ಕೆ ತಿರಥ್‌ ಸಿಂಗ್ ರಾವತ್ ರಾಜೀನಾಮೆ :ಇಂದು ಮಧ್ಯಾಹ್ನ 3 ಗಂಟೆಗೆ ಡೆಹ್ರಾಡೂನ್‌ನಲ್ಲಿ ಬಿಜೆಪಿ ಶಾಸಕರ ಸಭೆ

ನವದೆಹಲಿ: ಪ್ರಮಾಣವಚನ ಸ್ವೀಕರಿಸಿದ ನಾಲ್ಕು ತಿಂಗಳೊಳಗೆ ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್ ಅವರು ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು ಶುಕ್ರವಾರ ತಡರಾತ್ರಿ ರಾಜ್ ಭವನದಲ್ಲಿ ಉತ್ತರಾಖಂಡ ರಾಜ್ಯಪಾಲ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದರು.ಇದರೊಂದಿಗೆ, ತಿರಥ್ ​​ಸಿಂಗ್ ರಾವತ್ ಉತ್ತರಾಖಂಡದ ಇತಿಹಾಸದಲ್ಲಿ ಕಡಿಮೆ ಅವಧಿಯೊಂದಿಗೆ (84 ದಿನಗಳು) ಮುಖ್ಯಮಂತ್ರಿಯಾಗಿದ್ದಾರೆ. … Continued