ಕರ್ನಾಟಕದಲ್ಲಿ ಮತ್ತೆ ಐವರಿಗೆ ಓಮಿಕ್ರಾನ್ ಸೋಂಕು ದೃಢ : ರಾಜ್ಯದಲ್ಲಿ 19ಕ್ಕೆ ಏರಿದ ಸೋಂಕಿತರ ಸಂಖ್ಯೆ
ಬೆಂಗಳೂರು : ರಾಜ್ಯವನ್ನು ನಿಧಾನವಾಗಿ ಓಮಿಕ್ರಾನ್ ಸೋಂಕು ಹೆಚ್ಚುತ್ತಿದೆ. ಇಂದು, ಸೋಮವಾರ ಮತ್ತೆ ಐವರಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19ಕ್ಕೆ ಏರಿದೆ. ಮೊನ್ನೆಯಷ್ಟೇ 5 ಮಂದಿಗೆ ಸೋಂಕು ಹರಡಿತ್ತು, ಇದೀಗ ಧಾರವಾಡ, ಉಡುಪಿ, ಭದ್ರಾವತಿ, ಮಂಗಳೂರಿನಲ್ಲಿ ಸೋಂಕು ದೃಢಪಟ್ಟಿದೆ. ಈ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ ಅವರು ಟ್ವೀಟ್ ಮಾಡಿದ್ದಾರೆ. … Continued