ಭಾರತ vs ದಕ್ಷಿಣ ಆಫ್ರಿಕಾ : ಟೆಸ್ಟ್ ಸರಣಿಯಿಂದ ಹೊರಬಿದ್ದ ಮೊಹಮ್ಮದ್ ಶಮಿ, ಏಕದಿನ ಸರಣಿಯಿಂದ ಹಿಂದೆ ಸರಿದ ದೀಪಕ ಚಹಾರ್

ನವದೆಹಲಿ: ಭಾರತದ ಇಬ್ಬರು ಅನುಭವಿ ವೇಗಿಗಳನ್ನು ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗಿಡಲಾಗಿದೆ. ಮೊಹಮ್ಮದ್ ಶಮಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದು, ದೀಪಕ್ ಚಹಾರ್ ಏಕದಿನ ಸರಣಿಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಡಿಸೆಂಬರ್ 16 ಶನಿವಾರದಂದು ಅಧಿಕೃತ ಪತ್ರಿಕಾ ಪ್ರಕಟಣೆಯ ಮೂಲಕ ಈ ಬೆಳವಣಿಗೆ ಬಗ್ಗೆ ಪ್ರಕಟಿಸಿದೆ. 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶಮಿ ಪಾದದ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.
“ಟೆಸ್ಟ್ ಸರಣಿಯಲ್ಲಿ ಭಾಗವಹಿಸುವಿಕೆಯು ಫಿಟ್ನೆಸ್‌ಗೆ ಒಳಪಟ್ಟಿರು ಮೊಹಮ್ಮದ್ ಶಮಿ ಅವರನ್ನು ಬಿಸಿಸಿಐ ವೈದ್ಯಕೀಯ ತಂಡವು ಓಕೆ ಮಾಡಿಲ್ಲ. ಮತ್ತು ವೇಗದ ಬೌಲರನನ್ನು ಎರಡು ಟೆಸ್ಟ್‌ ಗಳಿಂದ ಹೊರಗಿಡಲಾಗಿದೆ” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಮತ್ತೊಂದೆಡೆ, ದೀಪಕ್ ಚಹಾರ್ ಅವರು ಲಭ್ಯವಿಲ್ಲ ಎಂದು ಬಿಸಿಸಿಐಗೆ ತಿಳಿಸಿದ್ದಾರೆ.
“ಕೌಟುಂಬಿಕ ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಮುಂಬರುವ ಏಕದಿನ ಸರಣಿಗೆ ತಾವು ಲಭ್ಯವಿಲ್ಲ ಎಂದು ದೀಪಕ್ ಚಹಾರ್ ಬಿಸಿಸಿಐಗೆ ತಿಳಿಸಿದ್ದಾರೆ. ಪುರುಷರ ಆಯ್ಕೆ ಸಮಿತಿಯು ಆಕಾಶ್ ದೀಪ್ ಅವರನ್ನು ಅವರ ಬದಲಿಯಾಗಿ ಹೆಸರಿಸಿದೆ” ಎಂದು ಬಿಸಿಸಿಐ ಮಾಹಿತಿ ನೀಡಿದೆ.

ಪ್ರಮುಖ ಸುದ್ದಿ :-   15 ನಗರಗಳ ಮೇಲೆ ಗುರಿಯಿಟ್ಟಿದ್ದ ಪಾಕ್ ಡ್ರೋನ್‌ಗಳು- ಕ್ಷಿಪಣಿಗಳನ್ನು ಹೊಡೆದುರುಳಿಸಿದ ಭಾರತ, ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆ ನಾಶ

ಬ್ಯಾಟರ್ ಶ್ರೇಯಸ್ ಅಯ್ಯರ್ 2 ಮತ್ತು 3 ನೇ ಪಂದ್ಯಗಳಲ್ಲಿ ಏಕದಿನದ ಪಂದ್ಯಗಳ ತಂಡದ ಭಾಗವಾಗಿರುವುದಿಲ್ಲ ಮತ್ತು ಬದಲಿಗೆ ಟೆಸ್ಟ್ ಸರಣಿಯ ತಯಾರಿಯಲ್ಲಿ ಸೇರಿಕೊಳ್ಳುತ್ತಾರೆ ಎಂದು ಬಿಸಿಸಿಐ ಅವರ ಬಿಡುಗಡೆಯಲ್ಲಿ ಉಲ್ಲೇಖಿಸಿದೆ.
ಏಕದಿನದ ವರ್ಲ್ಡ್ ಕಪ್ 2023 ರ ನಂತರ ಮೊದಲ ಬಾರಿಗೆ ಕ್ರಿಕೆಟ್ ಆಕ್ಷನ್‌ಗೆ ಹಿಂತಿರುಗಿದ ಕೆ.ಎಲ್‌. ರಾಹುಲ್ ಅವರು ಭಾರತ ತಂಡದ ನಾಯಕತ್ವ ವಹಿಸುತ್ತಾರೆ. T20I ಸರಣಿಗೆ ಭಾರತದ ತಂಡಕ್ಕೆ ಸೂರ್ಯಕುಮಾರ ಯಾದವ್ ನಾಯಕತ್ವ ವಹಿಸಿದ್ದರು.
ಭಾರತದ ನವೀಕೃತ ಏಕದಿನದ ತಂಡ :
ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಾಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ ಹಾಗೂ ವಿಕೆಟ್‌ ಕೀಪರ್‌), ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್‌), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಮುಖೇಶ್ ಕುಮಾರ್, ಅವೇಶ್ ಖಾನ್ , ಅರ್ಷದೀಪ್ ಸಿಂಗ್, ಆಕಾಶ್ ದೀಪ್

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement