ಕಡಲ ಕಿನಾರೆಗೆ ಬಂದ ಬರೋಬ್ಬರಿ 25 ಅಡಿ ಉದ್ದದ ಬೃಹತ್‌ ತಿಮಿಂಗಿಲ; ವೀಡಿಯೋ ವೈರಲ್

ಗುರುವಾರ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಮೇಘಾವರಂ ಕಡಲತೀರದಲ್ಲಿ ನೀಲಿ ತಿಮಿಂಗಿಲವೊಂದು ದಡದಲ್ಲಿ ನಿರ್ಜೀವ ಸ್ಥಿತಿಯಲ್ಲಿ ಕಂಡುಬಂದಿದೆ. ಐದು ಟನ್ ತೂಕದ 25 ಅಡಿ ಉದ್ದದ ಈ ಬೃಹತ್‌ ಜೀವಿಯ ಮೃತದೇಹವನ್ನು ಮರಳಿನ ಮೇಲೆ ನೋಡಿದ ಅಲ್ಲಿನ ಜನರಿಗೆ ಈ ಘಟನೆ ಅಪರೂಪದ ದೃಶ್ಯವಾಗಿತ್ತು.
ಬಂಗಾಳಕೊಲ್ಲಿಯಲ್ಲಿ ಇಂತಹ ತಿಮಿಂಗಿಲಗಳು ಅಪರೂಪವಾಗಿದ್ದು, ಆಂಧ್ರ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಕೆಲವೆಡೆ ಪ್ರವಾಹದ ಏರ್ಪಟ್ಟಿದೆ. ಈ ಸಮಯದಲ್ಲಿ ಮೃತಪಟ್ಟ ನೀಲಿ ತಿಮಿಂಗಿಲ ಬೀಚ್‌ ಬಳಿ ಬಂದು ಬಿದ್ದಿದೆ.
ಕಡಲತೀರದಲ್ಲಿ ತಿಮಿಂಗಿಲದ ಸಾವಿಗೆ ನಿಖರವಾದ ಕಾರಣ ಇನ್ನೂ ಗೊತ್ತಾಗಿಲ್ಲ. ಆಳವಿಲ್ಲದ ನೀರಿನಲ್ಲಿ ಸಿಲುಕಿ ತಿಮಿಂಗಿಲ ಮೃತಪಟ್ಟಿರಬಹುದು ಎಂದು ಸ್ಥಳೀಯ ಮೀನುಗಾರರು ಹೇಳಿದ್ದಾರೆ. ದಕ್ಷಿಣ ರಾಜ್ಯದ ಕಡಲತೀರದಲ್ಲಿ ನೀಲಿ ತಿಮಿಂಗಿಲವು ಸಿಕ್ಕಿಹಾಕಿಕೊಳ್ಳುವುದು ಅಪರೂಪ.
ರೂಪವಿಜ್ಞಾನದ ಗುಣಲಕ್ಷಣಗಳು ಮತ್ತು ಕೆಲವು ಗುರುತುಗಳ ಆಧಾರದ ಮೇಲೆ, ಇದು ಬ್ರೈಡ್‌ನ ತಿಮಿಂಗಿಲ ಎಂದು ನಿರ್ಧರಿಸಲಾಗಿದೆ ಎಂದು ಅರಣ್ಯಗಳ ಹೆಚ್ಚುವರಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಶಾಂತಿ ಪ್ರಿಯಾ ಪಾಂಡೆ ತಿಳಿಸಿದ್ದಾರೆ.

ನೀಲಿ ತಿಮಿಂಗಿಲವು ಭೂಮಿಯ ಮೇಲಿನ ಅತಿ ದೊಡ್ಡ ಪ್ರಾಣಿಯಾಗಿದ್ದು, 200 ಟನ್ನುಗಳಷ್ಟು (ಅಂದಾಜು 33 ಆನೆಗಳು) ತೂಗುತ್ತದೆ. ನೀಲಿ ತಿಮಿಂಗಿಲವು ವೋಕ್ಸ್‌ವ್ಯಾಗನ್ ಬೀಟಲ್ ಗಾತ್ರದ ಹೃದಯವನ್ನು ಹೊಂದಿದೆ. ಇದು ಅಳಿವಿನಂಚಿನಲ್ಲಿರುವ ಜಾತಿ ಎಂದು ಗುರುತಿಸಲಾಗಿದೆ.
ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಶ್ರೀಕಾಕುಳಂ ಸೇರಿದಂತೆ ಆಂಧ್ರಪ್ರದೇಶದ ಎಂಟು ಸ್ಥಳಗಳಲ್ಲಿ ಗಂಟೆಗೆ 45-55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಪಶ್ಚಿಮ-ಮಧ್ಯ ಮತ್ತು ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ಗಂಟೆಗೆ 65 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ತಿಳಿಸಲಾಗಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ, ಇದೇ ಸಂತಬೊಮ್ಮಾಲಿ ಮಂಡಲದ ಸುನ್ನಪಲ್ಲಿ ತೀರದಲ್ಲಿ ಚಿನ್ನದ ಬಣ್ಣದ ರಥವೊಂದು ದಡಕ್ಕೆ ಕೊಚ್ಚಿಬಂದಿತ್ತು, ಅಸಾನಿ ಚಂಡಮಾರುತದಿಂದಾಗಿ ಉಂಟಾದ ಹೆಚ್ಚಿನ ಉಬ್ಬರವಿಳಿತದ ಅಲೆಗಳಿಂದಾಗಿ ಇದು ಥೈಲ್ಯಾಂಡ್ ಅಥವಾ ಮ್ಯಾನ್ಮಾರ್‌ನಿಂದ ಕೊಚ್ಚಿಬಂದಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ ; ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ; ಕಾಶ್ಮೀರದ ಹಲವೆಡೆ ಡ್ರೋಣ್‌ ದಾಳಿ ; ತಿರುಗೇಟು ನೀಡಲು ಸೇನೆಗೆ ಮುಕ್ತ ಅಧಿಕಾರ ನೀಡಿದ ಭಾರತ

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement