ಬೋರ್ವೆಲ್ ಗೆ ಬಿದ್ದ ಎರಡು ವರ್ಷದ ಮಗು:ರಕ್ಷಣೆಗೆ ಹರಸಾಹಸ

ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಅಲಕನೂರು ಗ್ರಾಮದಲ್ಲಿ ಸುಮಾರು 2 ವರ್ಷದ ಮಗು ಬೋರ್ ವೆಲ್ ಗೆ ಬಿದ್ದ ಘಟನೆ ವರದಿಯಾಗಿದೆ.
ಅಲಕನೂರು ಗ್ರಾಮದ ಶರತ್ ಸಿದ್ಧಪ್ಪ ಹಸಿರೇ ಎಂಬ ಮಗು ನಿನ್ನೆ ಕಾಣೆಯಾಗಿದ್ದು ಈ ಬಗ್ಗೆ ಹಾರೂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಎಲ್ಲಿಯೂ ಹುಡುಕಿದರೂ ಮಗು ಪತ್ತೆಯಾಗಿರಲಿಲ್ಲ. ಕುಟುಂದವರು ತೋಟದ ಮನೆಯಲ್ಲಿ ವಾಸವಾಗಿದ್ದು ಮನೆ ಮುಂದೆ ಮನೆಯಿಂದ 200 ಮೀಟರ್ ದೂರದಲ್ಲಿ ಬೋರ್ವೆಲ್ ಕೊರೆಸಲಾಗಿದೆ. ಮಗು ಆಟವಾಡುತ್ತಿದ್ದಾಗ ಹೊಲದಲ್ಲಿ ಕೊರೆಸಿದ ಬೋರ್ವೆಲ್ ಗೆ ಬಿದ್ದಿದೆ ಎನ್ನುವುದು ಇಂದು (ಶನಿವಾರ) ಸಂಜೆ ಗೊತ್ತಾಗಿದೆ. ಸುಮಾರು ಹದಿನೈದರಿಂದ ಇಪ್ಪತ್ತು ಅಡಿ ಆಳದಲ್ಲಿ ಮಗು ಇದೆ ಎಂದು ಶಂಕಿಸಲಾಗಿದೆ. ಮಗುವಿನ ರಕ್ಷಣೆಗಾಗಿ ಕಾರ್ಯಾಚರಣೆ ಕೈಗೊಳ್ಳಲು ಸ್ಥಳೀಯ ಆಡಳಿತ ಕ್ರಮ ಕೈಗೊಂಡಿದೆ. ಮಾಹಿತಿ ನಿರೀಕ್ಷಿಸಲಾಗಿದೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement