ಸತ್ಯ ಬಹಿರಂಗಪಡಿಸಿದ 36 ವರ್ಷಗಳಿಂದ ಪುರುಷ ವೇಷದಲ್ಲಿದ್ದ ಈ ಮಹಿಳೆ…!

ತೂತುಕುಡಿ: ತಮಿಳುನಾಡಿನ ತೂತುಕುಡಿ ಜಿಲ್ಲೆಯ ವಿಧವೆ ಮಹಿಳೆಯೊಬ್ಬರು ತಮ್ಮ ಮಗಳನ್ನು ಬೆಳೆಸಲು 30 ವರ್ಷಗಳ ಕಾಲ ಪುರುಷ ವೇಷ ಧರಿಸಿ ಜೀವನ ಮಾಡಿದರು ಎಂಬ ಅಂಶ ಬೆಳಕಿಗೆ ಬಂದಿದೆ.
ತೂತುಕುಡಿ ಪಟ್ಟಣದಿಂದ 30 ಕಿಮೀ ದೂರದಲ್ಲಿರುವ ಕಟ್ಟುನಾಯಕನಪಟ್ಟಿ ಗ್ರಾಮದ ಎಸ್ ಪೇಚಿಯಮ್ಮಾಳ್, ತನ್ನ ಪತಿಯ ಹಠಾತ್ ನಿಧನದ ನಂತರ ತಾನು ‘ಮುತ್ತು’ ಆಗಬೇಕಾಯಿತು ಎಂದು ಹೇಳಿದ್ದಾರೆ.
ಮೂರು ದಶಕಗಳ ಹಿಂದೆ, ತೂತುಕುಡಿಯ ಕಾಟುನಾಯಕನಪಟ್ಟಿ ಗ್ರಾಮದ 20 ವರ್ಷದ ಪೇಚಿಯಮ್ಮಾಳ್ ತಮ್ಮ ಮದುವೆಯಾದ 15 ದಿನಗಳ ನಂತರ ಹೃದಯಾಘಾತದಿಂದ ಪತಿಯನ್ನು ಕಳೆದುಕೊಂಡರು. ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ, ಪೇಚಿಯಮ್ಮಾಳ್ ಕೆಲಸ ಮಾಡಲು ಪ್ರಾರಂಭಿಸಿದರು, ಆದರೆ ಕಿರುಕುಳವನ್ನು ಎದುರಿಸಬೇಕಾಯಿತು. ಹೀಗಾಗಿ ಮರುಮದುವೆಯಾಗದೆ ತನ್ನ ಒಬ್ಬಳೇ ಮಗಳನ್ನು ಬೆಳೆಸಲು ನಿರ್ಧರಿಸಿದ ಪೇಚಿಯಮ್ಮಾಳ್ ಗಂಡು ವೇಷ ಹಾಕಲು ನಿರ್ಧರಿಸಿ ಮುತ್ತು ಆದಳು.

ಕಿರುಕುಳ, ನಿಂದನೆ ಮತ್ತು ಕಷ್ಟಗಳನ್ನು ಎದುರಿಸಿದ ಪೇಚಿಯಮ್ಮಾಳ್, ತಿರುಚೆಂದೂರ್ ಮುರುಗನ್ ದೇವಸ್ಥಾನಕ್ಕೆ ಹೋಗಿ ತನ್ನ ಉಡುಪನ್ನು ಅಂಗಿ ಮತ್ತು ಲುಂಗಿಗೆ ಬದಲಾಯಿಸಿಕೊಂಡರು ಮತ್ತು ಮುತ್ತು ಎಂದು ಮರುನಾಮಕರಣ ಮಾಡಿಕೊಂಡಳು. “ನಾವು 20 ವರ್ಷಗಳ ಹಿಂದೆ ಕಟ್ಟುನಾಯಕನಪಟ್ಟಿಯಲ್ಲಿ ಪುನರ್ವಸತಿ ಹೊಂದಿದ್ದೇವೆ. ನನ್ನ ಹತ್ತಿರದ ಸಂಬಂಧಿಕರು ಮತ್ತು ನನ್ನ ಮಗಳಿಗೆ ಮಾತ್ರ ನಾನು ಮಹಿಳೆ ಎಂದು ತಿಳಿದಿತ್ತು, ”ಎಂದು ಅವಳು ಹೇಳಿದ್ದಾಳೆ.
ತನ್ನ ಕೂದಲನ್ನು ಕ್ರಾಪ್ ಮಾಡಿ ಲುಂಗಿ ಮತ್ತು ಶರ್ಟ್ ಧರಿಸಿ ಪುರುಷನಂತೆ ಕಾಣಲು ಪ್ರಾರಂಭಿಸಿದಳು. ಕಳೆದ ಮೂರು ದಶಕಗಳಲ್ಲಿ ಮುತ್ತು ಅವಳು ಚೆನ್ನೈ ಮತ್ತು ತೂತುಕುಡಿಯ ಹೋಟೆಲ್‌ಗಳು, ಟೀ ಅಂಗಡಿಗಳು ಮುಂತಾದ ಅನೇಕ ಸ್ಥಳಗಳಲ್ಲಿ ಕೆಲಸ ಮಾಡಿದ್ದಾಳೆ. ಕೆಲಸ ಮಾಡಿದಲ್ಲೆಲ್ಲ ಅವಳನ್ನು ‘ಅವಳ ವೇಷ ನೋಡಿ ಅಣ್ಣಾಚಿ’ (ಪುರುಷನ ಸಾಂಪ್ರದಾಯಿಕ ಹೆಸರು) ಎಂದು ಕರೆಯಲಾಗುತ್ತಿತ್ತು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಮುತ್ತು  ಪರೋಟಾ ಮತ್ತು ಟೀ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರಣ ನಂತರ ‘ಮುತ್ತು ಮಾಸ್ಟರ್’ ಎಂದು ಕರೆಯಲಾಯಿತು.  “ನಾನು ಪೇಂಟರ್, ಟೀ ಮಾಸ್ಟರ್, ಪರೋಟಾ ಮಾಸ್ಟರ್ ಕೆಲಸದಿಂದ ಹಿಡಿದು ಎಲ್ಲ ರೀತಿಯ ಕೆಲಸಗಳನ್ನು ಮಾಡಿದ್ದೇನೆ. ನನ್ನ ಮಗಳಿಗೆ ಸುರಕ್ಷಿತ ಜೀವನವನ್ನು ಖಚಿತಪಡಿಸಿಕೊಳ್ಳಲು ನಾನು ಪ್ರತಿ ಪೈಸೆಯನ್ನೂ ಉಳಿಸಿದೆ. ದಿನಗಳ ನಂತರ, ಮುತ್ತು ಎಂಬುದೇ ನನ್ನ ಗುರುತಾಗಿ ಬದಲಾಯಿತು, ಅದು ಆಧಾರ್, ವೋಟರ್ ಐಡಿ ಮತ್ತು ಬ್ಯಾಂಕ್ ಖಾತೆ ಸೇರಿದಂತೆ ಎಲ್ಲಾ ದಾಖಲೆಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಆರಂಭದಲ್ಲಿ ಇದು ಕಠಿಣವಾಗಿತ್ತು ಎಂದು ಪೇಚಿಯಮ್ಮಾಳ್ ಹೇಳಿದ್ದಾಳೆ.
“ನನ್ನ ಮಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ನಾನು ಈ ರಿಸ್ಕ್‌ ಮೂಲಕ ಹೋಗಲು ನಿರ್ಧರಿಸಿದೆ. ಪುರುಷ ವೇಷವು ನನ್ನ ಕೆಲಸದ ಸ್ಥಳದಲ್ಲಿ ನನ್ನನ್ನು ಸುರಕ್ಷಿತವಾಗಿರಿಸಿತು. ನನ್ನ ಗುರುತನ್ನು ನಿಜವಾಗಿಸಲು, ನಾನು ಯಾವಾಗಲೂ ಬಸ್‌ಗಳಲ್ಲಿ ಪುರುಷರ ಬದಿ ಸೀಟಿನಲ್ಲಿ ಮಾತ್ರ ಕುಳಿತುಕಳ್ಳುತ್ತಿದ್ದೆ. ನಾನು ಪುರುಷರ ಶೌಚಾಲಯವನ್ನು ಬಳಸಿದ್ದೇನೆ. ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಸರ್ಕಾರ ಘೋಷಿಸಿದ್ದರೂ, ನಾನು ಪೂರ್ತಿ ಪ್ರಯಾಣ ದರವನ್ನು ಪಾವತಿಸಿದ್ದೇನೆ ಎಂದು ಅವಳು ಹೇಳುತ್ತಾಳೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

57ರ ಹರೆಯದ ಪೇಚಿಯಮ್ಮಾಳ್ ಈಗ ನೆಮ್ಮದಿಯಾಗಿದ್ದಾಳೆ. ನನ್ನ ಮಗಳು ಮದುವೆಯಾಗಿದ್ದಾಳೆ ಮತ್ತು ನನ್ನ ಎಲ್ಲ ಆಸೆಗಳನ್ನು ನಾನು ಪೂರೈಸಿದ್ದೇನೆ ಎಂದು ನಾನು ಭಾವಿಸುತ್ತೇನೆ. ನನ್ನ ಸಾವಿನ ನಂತರವೂ ನಾನು ಹೀಗೆ ನೆನಪಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಸರ್ಕಾರದಿಂದ ಪಿಂಚಣಿ ಸಿಕ್ಕರೆ ನನ್ನ ಉಳಿದ ಜೀವನವನ್ನು ಕಳೆಯುತ್ತೇನೆ. ನಾನು ಪುರುಷ ವೇಷ ಧರಿಸಿದ್ದರಿಂದ ಅನೇಕ ಯೋಜನೆಗಳಿಗೆ ಅನರ್ಹಳಾಗಿದ್ದೇನೆ ಎಂದು ಹೇಳಿದಳು. ಮಗಳು ಷಣ್ಮುಗಸುಂದರಿಗೆ ಮದುವೆಯಾಗಿದ್ದರೂ ಪೇಚಿಯಮ್ಮಾಳ್‌ ತನ್ನ ವೇಷ ಬದಲಾಯಿಸಲು ಸಿದ್ಧಳಿಲ್ಲ. “ಈ ಗುರುತು ನನ್ನ ಮಗಳಿಗೆ ಸುರಕ್ಷಿತ ಜೀವನವನ್ನು ಖಾತ್ರಿಪಡಿಸಿದೆ. ಸಾಯುವವರೆಗೂ ಮುತ್ತು ಆಗಿಯೇ ಇರುತ್ತೇನೆ” ಎಂದು ಹೇಳುತ್ತಾಳೆ.
ತನ್ನ ಕಷ್ಟಗಳ ಬಗ್ಗೆ ಒಂದೆರಡು ಜನರಿಗೆ ಮತ್ತು ಮಗಳು ಷಣ್ಮುಗಸುಂದರಿಗೆ ಮಾತ್ರ ತಿಳಿದಿತ್ತು. “ನನ್ನ ತಾಯಿ ತನ್ನ ಜೀವನವನ್ನು ನನಗೆ ಮುಡಿಪಾಗಿಟ್ಟಳು. ಅವಳು ಮಾಸಾಶನ ಪಡೆಯುತ್ತಾಳೆ ಎಂದು ನಾನು ಭಾವಿಸುತ್ತೇನೆ ಎಂದು ”ಷಣ್ಮುಗಸುಂದರಿ ಹೇಳಿದ್ದಾಳೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement