ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನ ತ್ಯಜಿಸಲು ಮುಂದಾದ ಅಜಿತ ಪವಾರ್ …!

ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಮತ್ತು ಶರದ್ ಪವಾರ್ ಅವರ ಅಣ್ಣನ ಮಗ ಅಜಿತ ಪವಾರ್ ಅವರು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಸ್ಥಾನ ತ್ಯಜಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಬಾರಾಮತಿ ಕ್ಷೇತ್ರದ ಶಾಸಕರಾದ ಅಜಿತ ಪವಾರ್‌ ಅವರು, ಪಕ್ಷಕ್ಕಾಗಿ ದುಡಿಯುತ್ತೇನೆ ಮತ್ತು ನನಗೆ ನೀಡಿದ ಜವಾಬ್ದಾರಿಯನ್ನು ಪೂರೈಸುತ್ತೇನೆ ಎಂದು ಬುಧವಾರ ಹೇಳಿದ್ದಾರೆ.
ನನ್ನನ್ನು ವಿಪಕ್ಷ ನಾಯಕನ ಸ್ಥಾನದಿಂದ ಬಿಡುಗಡೆ ಮಾಡುವಂತೆ ಪಕ್ಷವನ್ನು ಕೇಳಿದ್ದೇನೆ. ನಾನು ಪಕ್ಷಕ್ಕಾಗಿ ಕೆಲಸ ಮಾಡಲು ಮತ್ತು ಅದು ನೀಡಿದ ಜವಾಬ್ದಾರಿಗಳನ್ನು ನಿಭಾಯಿಸಲು ಬಯಸುತ್ತೇನೆ ಎಂದು ಅಜಿತ್ ಪವಾರ್ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಎನ್‌ಸಿಪಿ ಮುಖ್ಯಸ್ಥ ಶರದ ಪವಾರ್ ಅವರು ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಘೋಷಿಸಿದ ವಾರಗಳ ನಂತರ ಅಜಿತ್ ಪವಾರ್ ಈ ಹೇಳಿಕೆ ಬಂದಿದೆ.
ಅಜಿತ ಪವಾರ್ ನೇತೃತ್ವದ ಅತೃಪ್ತ ಬಣ ಬಿಜೆಪಿಯೊಂದಿಗೆ ಕೈಜೋಡಿಸಲು ಪಕ್ಷದಿಂದ ದೂರವಾಗಲು ಬಯಸುತ್ತಿದೆ ಎಂಬ ಊಹಾಪೋಹಗಳ ನಡುವೆ ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಅವರಿಗೆ ಕಾರ್ಯಾಧ್ಯಕ್ಷರ ಜವಾಬ್ದಾರಿ ನೀಡಲಾಯಿತು. ಶರದ್ ಪವಾರ್ ಅವರ ನಿರ್ಧಾರವು ಪಕ್ಷದ ಕಾರ್ಯಕರ್ತರಿಗೆ ಅವರ ಮಗಳು ಎನ್‌ಸಿಪಿಯ ಮುಂದಿನ ಉತ್ತರಾಧಿಕಾರಿಯಾಗುತ್ತಾರೆ ಎಂಬ ಸ್ಪಷ್ಟ ಸಂದೇಶ ಎಂದು ಪರಿಗಣಿಸಲಾಗಿದೆ.
ಏತನ್ಮಧ್ಯೆ, ಶರದ್ ಪವಾರ್ ಅವರು ಹಿರಿಯ ನಾಯಕ ಮತ್ತು ಸಂಸದ ಪ್ರಫುಲ್ ಪಟೇಲ್ ಮತ್ತು ಸುನಿ ತತ್ಕರೆ ಅವರಿಗೆ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮೂಲಕ ಅಜಿತ್ ಪವಾರ್ ನೇತೃತ್ವದ ಅತೃಪ್ತ ಬಣದೊಂದಿಗೆ ಸಮತೋಲನ ಸಾಧಿಸಲು ಪ್ರಯತ್ನಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| "ನಮಗೆ ಪ್ರತಿಕ್ರಿಯಿಸಲು 30-45 ಸೆಕೆಂಡುಗಳು ಮಾತ್ರ ಸಮಯ ಇತ್ತು": ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿ ಬಗ್ಗೆ ಪಾಕ್ ಪ್ರಧಾನಿ ಸಲಹೆಗಾರ

ಆದರೆ, ಪಕ್ಷದ ಸಂಸ್ಥಾಪನಾ ದಿನಾಚರಣೆಯ ರಜತ ಮಹೋತ್ಸವದಂದು ಅಜಿತ್ ಪವಾರ್‌ ಅವರಿಗೆ ಹೊಸ ಹುದ್ದೆಯ ಪ್ರಸ್ತಾಪ ಅಥವಾ ಹಂಚಿಕೆಯ ಮಾಡದಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿಯ ಜೊತೆ ನಿಕಟತನಕ್ಕೆ ಹೆಸರುವಾಸಿಯಾಗಿರುವ ಅಜಿತ್ ಪವಾರ್ ಅವರು ಮುಂದಿನ ಮುಖ್ಯಮಂತ್ರಿಯಾಗಲು ಮತ್ತು ರಾಜ್ಯದ ರಾಜಕೀಯ ಪಕ್ಷದ ಪ್ರಮುಖ ಮುಖವಾಗಲು ಬಯಸುತ್ತಿದ್ದಾರೆ. 2019 ರಲ್ಲಿ ಅಂದಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬಿಜೆಪಿಯೊಂದಿಗೆ ಕೈಜೋಡಿಸುವ ಅವರ ಪ್ರಯತ್ನ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿತು. ಅಂದಿನಿಂದ, ಅವರು ಬಿಜೆಪಿ ಸೇರಲು ತಮ್ಮ ಚಿಕ್ಕಪ್ಪನಿಂದ ದೂರವಾಗುತ್ತಾರೆ ಎಂಬ ಊಹಾಪೋಹಗಳು ಇದ್ದವು.
ಆದರೆ ಪಕ್ಷದ ಮೂಲಗಳ ಪ್ರಕಾರ ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಅವರನ್ನು ಪಕ್ಷದಲ್ಲಿ ಎರಡನೇ ಸ್ಥಾನಕ್ಕೆ ನೇಮಿಸುವ ಶರದ್ ಪವಾರ್ ಅವರ ನಿರ್ಧಾರವು ಅಜಿತ ಪವಾರ್‌ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರರು ಎಂಬ ಬಲವಾದ ಸಂದೇಶವನ್ನು ರವಾನಿಸಿದೆ ಎಂದು ವಿಶ್ಲೇಷಿಸುತ್ತದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement