ಆಯುಧದೊಂದಿಗೆ ‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತ ಗೋರಖನಾಥ ದೇಗುಲ ಪ್ರವೇಶಕ್ಕೆ ಯತ್ನಿಸಿದ ವ್ಯಕ್ತಿ, ಪೊಲೀಸರ ಮೇಲೆ ದಾಳಿ, ದೃಶ್ಯ ವೀಡಿಯೊದಲ್ಲಿ ಸೆರೆ

ಲಕ್ನೋ: ಮುಸ್ಲಿಂ ಯುವಕನೊಬ್ಬ ಹರಿತ ಆಯುಧದೊಂದಿಗೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾ ಬಲವಂತವಾಗಿ ಗೋರಖ್‍ನಾಥ ದೇವಸ್ಥಾನದ ದಕ್ಷಿಣ ದ್ವಾರವನ್ನು ಪ್ರವೇಶಿಲು ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಅಹ್ಮದ್ ಮುರ್ತಾಜಾ ಅಬ್ಬಾಸಿ ಎಂದು ಗುರುತಿಸಲಾಗಿದೆ. ಈತ ಗೋರಖ್‍ಪುರದ ನಿವಾಸಿ. ಉತ್ತರ ಪ್ರದೇಶದ ಗೋರಖ್‍ಪುರ ಜಿಲ್ಲೆಯ ಗೋರಖ್‍ನಾಥ ದೇವಸ್ಥಾನದ ದಕ್ಷಿಣ ದ್ವಾರದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಘಟನೆ ವೇಳೆ ಇಬ್ಬರು ಪ್ರಾಂತೀಯ ಸಶಸ್ತ್ರ ಕಾನ್ಸ್‌ಟೇಬಲ್‍ಗಳಿಗೆ ಆಯುಧದಿಂದ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ದೇವಸ್ಥಾನದಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ಭದ್ರತಾ ಸಿಬ್ಬಂದಿಯಿಂದ ಈತ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ.
ದೇವಾಲಯದ ಮುಖ್ಯ ದ್ವಾರವು ಗೋರಖನಾಥ ಪೊಲೀಸ್ ಠಾಣೆಯ ಮುಂಭಾಗದಲ್ಲಿದೆ. ಮುಖ್ಯ ದ್ವಾರದಲ್ಲಿ ಕಾನ್‌ಸ್ಟೆಬಲ್ ಗೋಪಾಲ್ ಗೌರ್‌ ಮತ್ತು ಅನಿಲ ಪಾಸ್ವಾನ್ ಅವರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ರಾತ್ರಿ 7:15ರ ಸುಮಾರಿಗೆ ವ್ಯಕ್ತಿಯೊಬ್ಬ ಆವರಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದನು, ಮತ್ತು ಪೊಲೀಸ್ ಸಿಬ್ಬಂದಿ ಅವರನ್ನು ತಪಾಸಣೆಗೆ ನಿಲ್ಲಿಸಿದರು. ಆಗ ಆಯುಧದಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಅದರ ನಂತರ, ಆತ ‘ಅಲ್ಲಾ-ಹು-ಅಕ್ಬರ್’ ಎಂದು ಕೂಗುತ್ತಾ ದೇವಾಲಯದ ಮುಖ್ಯ ದ್ವಾರದ ಬಳಿಗೆ ಬಂದ. ಕಾನ್‌ಸ್ಟೆಬಲ್ ಅನುರಾಗ್ ರಜಪೂತ್ ಮತ್ತು ಎಐಯು ಅಧಿಕಾರಿ ಅನಿಲ್ ಆತನನ್ನು ತಡೆದಿದ್ದಾರೆ. ಅಬ್ಬಾಸಿ ಅವರನ್ನೂ ಗಾಯಗೊಳಿಸಲು ಯತ್ನಿಸಿದ. ಅಲ್ಲಿಂದ ತಪ್ಪಿಸಿಕೊಂಡು ಬಹುತೇಕ ಗೇಟ್ ಬಳಿ ತಂದಿದ್ದಾನೆ.

https://twitter.com/AntiNaziPandit/status/1510813686222376965?ref_src=twsrc%5Etfw%7Ctwcamp%5Etweetembed%7Ctwterm%5E1510813686222376965%7Ctwgr%5E%7Ctwcon%5Es1_&ref_url=https%3A%2F%2Fenglish.newstracklive.com%2Fnews%2Fmurtaza-entered-gorakhpur-temple-with-weapons-shouting-allahhuakbar-attacked-two-policemen-watch-video-ta303-1220989-1.html

ವಿಷಯ ತಿಳಿದ ಸ್ಥಳೀಯರು ದೇವಸ್ಥಾನದ ಆವರಣಕ್ಕೆ ಧಾವಿಸಿ ಅಬ್ಬಾಸಿಗೆ ಥಳಿಸಿದ್ದಾರೆ. ಗಾಯಗೊಂಡ ಕಾನ್‍ಸ್ಟೆಬಲ್‍ಗಳಾದ ಗೋಪಾಲ್ ಕುಮಾರ್ ಗೌರ್ ಮತ್ತು ಅನಿಲ್ ಪಾಸ್ವಾನ್ ಅವರು ಗುರು ಗೋರಖ್‍ನಾಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುರ್ತಾಜಾ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ. ಬಂಧಿತ ಆರೋಪಿ ಮುಂಬೈ ಐಐಟಿಯಲ್ಲಿ ಕೆಮಿಕಲ್‌ ಎಂಜಿನಿಯರಿಗ್‌ ಓದಿದ್ದಾನೆ. ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.
ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಗೋರಖ್‌ಪುರ ರೇಂಜ್) ಜೆ ರವೀಂದರ್ ಗೌರ, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ತಾಡಾ ಅವರೊಂದಿಗೆ ದೇವಸ್ಥಾನದ ಆವರಣಕ್ಕೆ ಭೇಟಿ ನೀಡಿ ಘಟನೆಯ ಅವಲೋಕನ ನಡೆಸಿದರು. ಘಟನೆಯ ತನಿಖೆ ನಡೆಯುತ್ತಿದ್ದು, ದಾಳಿಯ ಹಿಂದಿನ ಉದ್ದೇಶ ಕಂಡುಹಿಡಯಲು ಪೊಲೀಸರು ಇನ್ನೂ ಪ್ರಯತ್ನಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಚುನಾವಣಾ ಆಯೋಗದಿಂದ 8,889 ಕೋಟಿ ರೂ.ಮೌಲ್ಯದ ವಸ್ತುಗಳ ವಶ

ಗಮನಾರ್ಹವಾಗಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖನಾಥ ದೇವಾಲಯದ ಪ್ರಧಾನ ಅರ್ಚಕ (ಮಹಾಂತ್) ಮತ್ತು ದೇವಾಲಯದ ಆವರಣದಲ್ಲಿ ಅವರ ವೈಯಕ್ತಿಕ ವಸತಿ ಹೊಂದಿದ್ದಾರೆ.  ಆಗಾಗ್ಗೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದರಿಂದ ಘಟನೆ ಗಂಭೀರವಾಗಿದೆ ಎಂದು ವಲಯ ಎಡಿಜಿ ಅಖಿಲ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಎಲ್ಲಾ ಸಂಭಾವ್ಯ ಕೋನಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವೃತ್ತಿಯಲ್ಲಿ ಕೆಮಿಕಲ್ ಇಂಜಿನಿಯರ್ ಆಗಿರುವ ಅಬ್ಬಾಸಿ ಅವರು ಕೌಟುಂಬಿಕ ಸಮಸ್ಯೆಗಳಿಂದ ಮಾನಸಿಕವಾಗಿ ನೊಂದಿರುವುದಾಗಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ ಎಂದು ಕೆಲವು ವರದಿಗಳು ಸೂಚಿಸಿವೆ.

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement