ಮಹಿಳೆಯರು ಹಿಜಾಬ್, ಪರ್ದಾ ಧರಿಸದಿರುವುದರಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗ್ತಿದೆ: ಜಮೀರ್ ಅಹ್ಮದ್ ​ಖಾನ್​

ಹುಬ್ಬಳ್ಳಿ : ಹಿಜಾಬ್ ವಿವಾದ ದೇಶಾದ್ಯಂತ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಹಿಜಾಬ್ ಧರಿಸದ ಕಾರಣಕ್ಕೇ ಮಹಿಳೆಯರು ಅತ್ಯಾಚಾರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮಾಜಿ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯುವತಿಯರ ಸೌಂದರ್ಯ ರಕ್ಷಣೆಗೆ ಬುರ್ಖಾ, ಹಿಜಾಬ್ ಪದ್ಧತಿ ಇದೆ ಎಂದು ಹೇಳಿದ್ದಾರೆ. ಹಿಜಾಬ್ ಎಂದರೆ ಇಸ್ಲಾಂನಲ್ಲಿ ‘ಪರ್ದಾ’, ಮಹಿಳೆಯರು ತಮ್ಮ ಸೌಂದರ್ಯವನ್ನು ಮರೆಮಾಡಲು ಮುಖವನ್ನು ಮರೆ ಮಾಚಲು ಹಿಜಾಬ್​ ಅನ್ನು ಬಳಸುತ್ತಾರೆ. ದೇಶದಲ್ಲಿ ಅತ್ಯಾಚಾರ ಪ್ರಮಾಣ ಏಕೆ ಹೆಚ್ಚಾಗಿದೆ. ಏಕೆಂದರೆ, ಹೆಣ್ಣು ಮಕ್ಕಳು ಪರದೆಯ ಹಿಂದೆ ಇಲ್ಲ. ಹೀಗಾಗಿ, ಮಹಿಳೆಯರು ತಮ್ಮ ಸೌಂದರ್ಯ ಮರೆಮಾಚಲು ಹಿಜಾಬ್ ಧರಿಸುತ್ತಾರೆ ಎಂದು ಜಮೀರ್ ಹೇಳಿದ್ದಾರೆ.

ಹಿಜಾಬ್ ಹಾಕುವುದು ಮುಸ್ಲಿಂ ಮಹಿಳೆಯರ ಹಕ್ಕು. ನೂರಾರು ವರ್ಷದಿಂದ ಅವರು ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಹಿಜಾಬ್ ಹಾಗೂ ಬುರ್ಖಾ ಧರಿಸುವುದು ಕಡ್ಡಾಯ ಎಂದಿಲ್ಲ. ಆದರೆ, ಇಷ್ಟ ಇದ್ದವರು ಹಾಕಬಹುದು, ಇಷ್ಟ ಇಲ್ಲದವರು ಬಿಡಬಹುದು. ಇದು ಒಂದು ವಿವಾದವೇ ಅಲ್ಲ, ಆದರೆ ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರು ಅಧಿಕಾರಕ್ಕಾಗಿ ಯಾರನ್ನಾದರೂ ಬಲಿ ಕೊಡಲು ಮುಂದಾಗಿದ್ದಾರೆ. ವಿದ್ಯಾರ್ಥಿಗಳು ದೇಶದ ಆಸ್ತಿ. ಆದರೆ, ಬಿಜೆಪಿಯವರು ತಮ್ಮ ಲಾಭಕ್ಕಾಗಿ ಮಕ್ಕಳನ್ನು ಬಲಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ದೇಹದಲ್ಲಿ ಜಿನ್ನಾ ಭೂತ ಇದೆ ಎಂಬ ಅಸ್ಸಾಂ ಮುಖ್ಯಮಂತ್ರಿ ಟೀಕೆಗೆ ಪ್ರತಿಕ್ರಿಯಿಸಿದ ಅವರು ಈ ಕಾಲದಲ್ಲಿ ಎಲ್ಲರ ಬಗ್ಗೆಯೂ ಎಲ್ಲರೂ ಮಾತನಾಡುತ್ತಾರೆ. ರಾಹುಲ್​​ ಗಾಂಧಿಯವರ ಬಗ್ಗೆ ದೇಶದ ಜನತೆಗೆ ತಿಳಿದಿದೆ. ಬಡವರ ಹಿತ ಕಾಪಾಡಲೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಜನರು ಆಯ್ಕೆ ಮಾಡಿದರು. ಆದರೆ, ಮೋದಿಯವರು ಅಧಿಕಾರಾವಧಿಯಲ್ಲಿ ಬಡವರ, ಯುವಕರ ಸಮಸ್ಯೆ ಪರಿಹರಿಸಿಲ್ಲ. ಕೇವಲ ಹಿಂದೂ-ಮುಸ್ಲಿಂ ನಡುವೆ ಬಿರುಕು ತರುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ರಪಡಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರಿನ ಹಲವೆಡೆ ಜೋರಾಗಿ ಮಳೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement