ಮೇಘಾಲಯ: ಸಿಎಂ ಕಚೇರಿ ಮೇಲೆ ಕಲ್ಲು ತೂರಾಟ, ಐವರು ಸಿಬ್ಬಂದಿಗೆ ಗಾಯ, ಪೊಲೀಸರಿಂದ ಅಶ್ರುವಾಯು | ವೀಕ್ಷಿಸಿ

ತುರಾ : ತುರಾದಲ್ಲಿರುವ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ಕಚೇರಿ ಮೇಲೆ ಗುಂಪೊಂದು ಸೋಮವಾರ ಕಲ್ಲು ತೂರಾಟ ನಡೆಸಿದ್ದು, ಐವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಕಚೇರಿಯಲ್ಲಿದ್ದ ಸಂಗ್ಮಾ ಅವರು ತಮ್ಮ ಕಚೇರಿಯೊಳಗೆ ಸಿಲುಕಿಕೊಂಡಿದ್ದಾರೆ.
ಮುಖ್ಯಮಂತ್ರಿ ಕಚೇರಿ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಾರ, ತುರಾದಲ್ಲಿನ ಸಿಎಂಒದಲ್ಲಿ ಗುಂಪು (ಆಂದೋಲನದ ಗುಂಪುಗಳನ್ನು ಹೊರತುಪಡಿಸಿ) ಜಮಾಯಿಸಿ ಕಲ್ಲು ತೂರಾಟವನ್ನು ಪ್ರಾರಂಭಿಸಿತು. ಆಗ ಪೊಲೀಸರು ಗುಂಪನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು.
ಐವರು ಪೊಲೀಸ್ ಸಿಬ್ಬಂದಿಗೆ ಗಾಯ
ಈ ವೇಳೆ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಮುಖ್ಯಮಂತ್ರಿ ಮತ್ತು ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್ (ಪಿಎಚ್‌ಇ) ಸಚಿವರು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಗಲಾಟೆ ಇನ್ನೂ ಮುಂದುವರಿದಿದೆ.
ರಾತ್ರಿ ಕರ್ಫ್ಯೂ
ಘಟನೆಯ ನಂತರ ತುರಾ ಪಟ್ಟಣದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಗಾಯಗೊಂಡ ಸಿಬ್ಬಂದಿಗೆ 50,000 ರೂ. ಪರಿಹಾರ ಪ್ರಕಟಿಸಿದ್ದಾರೆ. ಗಾಯಗೊಂಡ ಪೊಲೀಸರ ಚಿಕಿತ್ಸಾ ವೆಚ್ಚವನ್ನೂ ರಾಜ್ಯ ಸರ್ಕಾರವೇ ಭರಿಸಲಿದೆ.

ಪ್ರಮುಖ ಸುದ್ದಿ :-   ನಮ್ಮ ಗಾಯದ ಮೇಲೆ ಉಪ್ಪು ಸವರಬೇಡಿ, ಕಸಬ್ ಹೊಗಳುವುದಿದ್ದರೆ ಪಾಕಿಸ್ತಾನಕ್ಕೆ ಹೋಗಿ": 26/11 ದಾಳಿ ಬಗ್ಗೆ ಕಾಂಗ್ರೆಸ್‌ ನಾಯಕನ ಹೇಳಿಕೆಗೆ ಕಸಬ್ ವಿಚಾರಣೆ ಸಾಕ್ಷಿಯ ಆಕ್ಷೇಪ

ಮಂಗಳವಾರ ಸಂಜೆ ತುರಾದಲ್ಲಿರುವ ಸಿಎಂ ಸೆಕ್ರೆಟರಿಯೇಟ್ ಮೇಲೆ ಜನಸಮೂಹ ದಾಳಿ ನಡೆಸಿದಾಗ ಕನಿಷ್ಠ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಲಭೆಯಲ್ಲಿ, ಜನಸಂದಣಿಯನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಬೇಕಾಯಿತು” ಎಂದು ಮುಖ್ಯಮಂತ್ರಿ ಸೆಕ್ರೆಟರಿಯಟ್‌ನ ಅಧಿಕಾರಿಯೊಬ್ಬರು ತಿಳಿಸಿದರು.
ಪೊಲೀಸ್ ಅಧಿಕಾರಿಗಳ ಪ್ರಕಾರ, ಪ್ರತಿಭಟನಾಕಾರರು ಮೇಲ್ನೋಟಕ್ಕೆ ಚಳಿಗಾಲದ ರಾಜಧಾನಿಗಾಗಿ ಒತ್ತಾಯಿಸುತ್ತಿರುವಾಗ ಈ ಘಟನೆ ಸಂಭವಿಸಿದೆ. ಹೆಚ್ಚಿನ ಸಂಖ್ಯೆಯ ಹೊರಗಿನವರು ಅವರೊಂದಿಗೆ ಬೆರೆತು ಕಚೇರಿಗೆ ಕಲ್ಲು ಎಸೆಯಲು ಪ್ರಾರಂಭಿಸಿದರು. ಗುಂಪಿನ ವೀಡಿಯೊ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ನಂತರ ಆರೋಪಿಗಳನ್ನು ಗುರುತಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಟ್ಟಣದ ಹಲವೆಡೆ ಟೈರ್‌ಗಳಿಗೆ ಬೆಂಕಿ ಹಚ್ಚಿದ ಘಟನೆಯೂ ವರದಿಯಾಗಿದೆ. ಮುಖ್ಯಮಂತ್ರಿ ಕಾನ್ರಾಡ್‌ ಸಾಂಗ್ಮಾ ಅವರು, “ತುರಾದಲ್ಲಿ ಸುಮಾರು 3 ಗಂಟೆಗಳ ಕಾಲ ಧರಣಿ ನಿರತ ಸಂಘಟನೆಗಳ ಜೊತೆ ಚರ್ಚೆ” ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಆಂದೋಲನ ನಿರತ ಗುಂಪುಗಳೊಂದಿಗೆ ಮುಖ್ಯಮಂತ್ರಿ ಸಂಗ್ಮಾ ಅವರು ಸಭೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಗಾರೋ ಹಿಲ್ಸ್‌ನಲ್ಲಿ ನೆಲೆಗೊಂಡಿರುವ ಗುಂಪುಗಳು ತುರಾವನ್ನು ಚಳಿಗಾಲದ ರಾಜಧಾನಿ ಮಾಡಬೇಕು ಎಂದು ಒತ್ತಾಯಿಸುತ್ತಿವೆ.
ಸಂಗ್ಮಾ ಅವರು ಆಗಸ್ಟ್ 8 ಅಥವಾ 9 ರಂದು ತಾತ್ಕಾಲಿಕವಾಗಿ ನಿಗದಿಪಡಿಸಲಾದ ಸ್ಥಳವಾದ ಶಿಲ್ಲಾಂಗ್‌ನಲ್ಲಿ ಚರ್ಚೆಗೆ ಆಂದೋಲನ ಮಾಡುತ್ತಿರುವ ಗುಂಪುಗಳನ್ನು ಆಹ್ವಾನಿಸಿದರು.

ಪ್ರಮುಖ ಸುದ್ದಿ :-   ಸಿಬಿಐ ಜಂಟಿ ನಿರ್ದೇಶಕರಾಗಿ ಐವರು ಡಿಐಜಿಗಳನ್ನು ನೇಮಕ ಮಾಡಿದ ಕೇಂದ್ರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement