ವೀಡಿಯೊ..| ಇದು ವಿಶ್ವದ ಅತಿದೊಡ್ಡ ಗುಹೆ ; ಇದರೊಳಗೆ ನದಿ ಇದೆ, ಮೋಡ ರೂಪುಗೊಳ್ಳುತ್ತದೆ, ಕಾಡು ಇದೆ, 40 ಅಂತಸ್ತಿನ ಕಟ್ಟಡ ಕಟ್ಟಬಹುದು…

ಕಾಡಿನಿಂದ ಹಿಡಿದು ನದಿ-ಸಾಗರಗಳಿಂದ ಪರ್ವತಗಳ ವರೆಗೆ ಭೂಮಿಯ ಮೇಲೆ ಇನ್ನೂ ಅನ್ವೇಷಿಸದ ಅನೇಕ ನೈಸರ್ಗಿಕ ಪ್ರದೇಶಗಳಿವೆ. ಅಂತಹ ಒಂದು ಪ್ರದೇಶವೆಂದರೆ ಜಗತ್ತನ್ನು ದಿಗ್ಭ್ರಮೆಗೊಳಿಸಿರುವ ಹ್ಯಾಂಗ್ ಸನ್ ಡೂಂಗ್ ಗುಹೆ. ಇದನ್ನು ಸನ್ ಡೂಂಗ್ ಗುಹೆ ಎಂದೂ ಕರೆಯುತ್ತಾರೆ. ಇದನ್ನು ಅತ್ಯಂತ ನಿಗೂಢ ಗುಹೆ ಎಂದೂ ಕರೆಯುತ್ತಾರೆ. ಈ ಗುಹೆಯು ಎಷ್ಟು ದೊಡ್ಡದಾಗಿದೆ ಎಂದರೆ ಅದರೊಳಗೆ ಇಡೀ ನಗರವನ್ನು ನಿರ್ಮಿಸಬಹುದು. ಅಷ್ಟೇ ಅಲ್ಲ ಇದರೊಳಗೆ 40 ಅಂತಸ್ತಿನ ಕಟ್ಟಡ ನಿರ್ಮಿಸಬಹುದಾದಷ್ಟು ಇದು ವಿಶಾಲವಾಗಿದೆ.
ಪ್ರತೀತಿಯ ಪ್ರಕಾರ, ಸನ್ ಡೂಂಗ್‌ ಗುಹೆಯನ್ನು 1991 ರಲ್ಲಿ ವಿಯೆಟ್ನಾಂನಲ್ಲಿ ಸ್ಥಳೀಯ ಮರಕಡಿಯುವವನು ಪತ್ತೆ ಮಾಡಿದ್ದಾನೆ. ಅದರ ನಂತರ ವಿಜ್ಞಾನಿಗಳು 2009 ರಲ್ಲಿ ಸನ್‌ಡೋಂಗ್‌ ಗುಹೆಯನ್ನು ಮತ್ತಷ್ಟು ಅನ್ವೇಷಿಸಿದರು. ಇದರಲ್ಲಿ ಅವರು ಈ ಗುಹೆಯನ್ನು ವಿಶ್ವದ ಆಳವಾದ ಮತ್ತು ನಿಗೂಢ ಗುಹೆ ಎಂದು ವಿವರಿಸಿದರು. ಇದಾದ ನಂತರ 2013ರಲ್ಲಿ ಪ್ರವಾಸಿ ತಾಣವಾಯಿತು.

ವಿಯೆಟ್ನಾಂನ ಮಹಾಗೋಡೆ
ಸನ್‌ ಡೂಂಗ್‌ ಗುಹೆ 5 ಕಿಲೋಮೀಟರ್ (3.1 ಮೈಲಿ) ಗಿಂತ ಹೆಚ್ಚು ಉದ್ದವಾಗಿದೆ, 200 ಮೀಟರ್ (660 ಅಡಿ) ಎತ್ತರ ಮತ್ತು 150 ಮೀಟರ್ (490 ಅಡಿ) ಅಗಲವಿದೆ.ಈ ಗುಹೆಯಲ್ಲಿ ಅನೇಕ ದಟ್ಟವಾದ ಕಾಡುಗಳು ಮತ್ತು ಕಂದಕಗಳಿವೆ. ಇದಲ್ಲದೇ ಹರಿಯುವ ನದಿಗಳು ಈ ಗುಹೆಯ ವಿಶೇಷತೆ. ಸನ್‌ ಡೂಂಗ್‌ ಗುಹೆಯನ್ನು ವಿಯೆಟ್ನಾಂನ ಮಹಾ ಗೋಡೆ ಎಂದೂ ಕರೆಯುತ್ತಾರೆ. ಇದು ಕಾರ್ಬೊನಿಫೆರಸ್ ಮತ್ತು ಪರ್ಮಿಯನ್ ಸುಣ್ಣದ ಕಲ್ಲುಗಳಿಂದ ಮಾಡಲ್ಪಟ್ಟಿದೆ. ಅದರೊಳಗಿನ ಸಂಪೂರ್ಣ ಗುಹೆ ವ್ಯವಸ್ಥೆಯ ಎತ್ತರ 656 ಅಡಿಗಳು. ಸನ್ ಡಾಂಗ್ ನ ಕಾರಿಡಾರ್ ನ ಪರಿಮಾಣವು 3.84 ಕೋಟಿ ಘನ ಮೀಟರ್, ಅಂದರೆ ಇದರ ಕಾರಿಡಾರ್‌ 9 ಕಿಲೋಮೀಟರ್ ಉದ್ದ ಮತ್ತು 650 ಅಡಿ ಅಗಲವಿದೆ. ವಾಸ್ತವವಾಗಿ, ಇದು ಎಷ್ಟು ವಿಶಾಲವಾಗಿದೆ ಎಂದರೆ ಬೋಯಿಂಗ್ 747 ಅದರ ಮೂಲಕ ನೇರವಾಗಿ ಹಾದುಹೋಗುತ್ತದೆ. ಈ ಗುಹೆಯೊಳಗೆ ನದಿ ವೇಗವಾಗಿ ಹರಿಯುತ್ತದೆ, ಇದರಿಂದಾಗಿ ಗುಹೆಯು ರೂಪುಗೊಂಡಿತು.

https://x.com/i/status/1797443599023350180

ಪ್ರವೇಶಿಸಲು ಮತ್ತು ನಿರ್ಗಮಿಸಲು ಎರಡು ಮಾರ್ಗಗಳು
ಈ ಗುಹೆಯೊಳಗೆ ಪ್ರತಿಧ್ವನಿಸುವ ಗಾಳಿ ಮತ್ತು ಸದ್ದು ಹೊರ ದ್ವಾರದವರೆಗೂ ಕೇಳಿಸುತ್ತದೆ. ಗುಹೆ ಎಷ್ಟು ದೊಡ್ಡದಾಗಿದೆ ಎಂದರೆ ತನ್ನದೇ ಆದ ಮೋಡಗಳು ರೂಪುಗೊಳ್ಳುತ್ತವೆ ಮತ್ತು ಗುಹೆಯೊಳಗೆ ಮಳೆಯಾಗುತ್ತದೆ. 20 ರಿಂದ 50 ಲಕ್ಷ ವರ್ಷಗಳ ಹಿಂದಿನದು ಎಂದು ನಂಬಲಾಗಿದೆ. ಗುಹೆಯ 200 ಮೀಟರ್ ಗೋಡೆಯನ್ನು ದಾಟಿ ಒಳಗೆ ಪ್ರವೇಶಿಸಲು ಮತ್ತು ಹೊರಬರಲು ವಿಜ್ಞಾನಿಗಳು ಎರಡು ಮಾರ್ಗಗಳನ್ನು ಪತ್ತೆ ಮಾಡಿದ್ದಾರೆ.

ಮಳೆಗಾಲದಲ್ಲಿ ಈ ಗುಹೆಯಲ್ಲಿ ನೀರು ತುಂಬಿದ್ದು, ಒಳಗೆ ಹೋಗಲು ಕಷ್ಟವಾಗುತ್ತದೆ. ಈ ಗುಹೆಯಲ್ಲಿ ಎರಡು ದೊಡ್ಡ ಸಿಂಕ್‌ಹೋಲ್‌ಗಳಿವೆ, ಅದು ಸ್ಕೈಲೈಟ್‌ಗಳಂತೆ ಕೆಲಸ ಮಾಡುತ್ತದೆ. ಈ ಎರಡು ಸಿಂಕ್‌ಹೋಲ್‌ಗಳ ಕೆಳಗೆ ಅರಣ್ಯವಿದೆ, ಈ ಕಾಡಿನ ಮರಗಳು 30 ಮೀಟರ್‌ಗಿಂತ ಹೆಚ್ಚು ಎತ್ತರವಿದೆ.
2010 ರಲ್ಲಿ, ಈ ಗುಹೆಯನ್ನು ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಪ್ ಮಾಡಿತು. ಈವರೆಗೆ ಈ ಗುಹೆಯ 30% ಮಾತ್ರ ಪರಿಶೋಧಿಸಲಾಗಿದೆ ಎಂದು ನಂಬಲಾಗಿದೆ. ಪ್ರತಿ ಋತುವಿನಲ್ಲಿ 1000 ಜನರಿಗೆ ಮಾತ್ರ ಇಲ್ಲಿಗೆ ಬರಲು ಅವಕಾಶವಿದೆ ಮತ್ತು ಇದಕ್ಕಾಗಿ ಅವರು 3000 ಡಾಲರ್‌ಗಳನ್ನು ಪಾವತಿಸಬೇಕಾಗುತ್ತದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement