ಬೈಕ್ ಸವಾರನಿಗೆ ಅವಾಚ್ಯ ಶಬ್ದಗಳಿಂದ ಭವಾನಿ ರೇವಣ್ಣ ನಿಂದನೆ: ಎಚ್‌.ಡಿ. ರೇವಣ್ಣ, ಸೂರಜ್ ರೇವಣ್ಣ ಕ್ಷಮೆಯಾಚನೆ

ಬೆಳಗಾವಿ: ಕಾರಿಗೆ ಡಿಕ್ಕಿ ಹೊಡೆದ ಬೈಕ್‌ ಸವಾರನನ್ನು ಅಸಭ್ಯ ಶಬ್ದಗಳಿಂದ ನಿಂದಿಸಿದ ಪತ್ನಿ ಭವಾನಿ ಪರವಾಗಿ ಜೆಡಿಎಸ್‌ ಶಾಸಕ ಎಚ್‌. ಡಿ. ರೇವಣ್ಣ ಮತ್ತು ಮಗ, ವಿಧಾನ ಪರಿಷತ್‌ ಸದಸ್ಯ ಸೂರಜ್ ರೇವಣ್ಣ ಕ್ಷಮೆಯಾಚಿಸಿದ್ದಾರೆ.
ಸುವರ್ಣಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರೇವಣ್ಣ, ‘ಪತ್ನಿಯ ವರ್ತನೆಯ ಬಗ್ಗೆ ಯಾರಿಗಾದರೂ ನೋವಾದರೆ ಕ್ಷಮೆ ಕೋರುತ್ತೇನೆ’ ಎಂದು ಹೇಳಿದ್ದಾರೆ.
‘ಬೈಕ್ ಸವಾರ ಕುಡಿದು ಬೈಕ್ ಓಡಿಸಿದ್ದ. ನಾವೇನು ಅವನ ಬಳಿ ಜಖಂ ಆಗಿರುವುದಕ್ಕೆ ಹಣ ಕೊಡಿ ಎಂದು ಕೇಳಲಿಲ್ಲ. ಆದರೆ ಏನಾದರೂ ಹೆಚ್ಚು ಕಡಿಮೆ ಆಗುತ್ತಿದ್ದರೆ ಯಾರು ಹೊಣೆ? ಎಂದ ಅವರು, ಬೇಕಾದರೆ ಭವಾನಿ ರೇವಣ್ಣ ಅವರಿಂದಲೂ ಕ್ಷಮೆ ಕೇಳಿಸುತ್ತೇನೆ’ ಎಂದು ತಿಳಿಸಿದರು.

ಅವರು ಏನೂ ಅಹಂಕಾರ ಮಾಡಿಲ್ಲ. ಭವಾನಿ ಅವರು ಯಾರದ್ದೋ ಸ್ನೇಹಿತನ ಕಾರಿನಲ್ಲಿ ಹೋಗಿದ್ದರು.‌ ಈ ವೇಳೆ ಕುಡಿದಿದ್ದ ಬೈಕ್‌ ಸವಾರ ಕಾರಿಗೆ ಗುದ್ದಿದ್ದಾನೆ. ನಮ್ಮ‌ ಕುಟುಂಬ ಯಾರಿಗೂ ನೋವಾಗುವ ಕೆಲಸ ಮಾಡುವುದಿಲ್ಲ. ಬೇಕಂತಲೇ ಯಾರೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ’ ಎಂದರು.
ಸೂರಜ ರೇವಣ್ಣ ಮಾತನಾಡಿ, ‘ಅಪಘಾತದಲ್ಲಿ ಬೈಕ್ ಸವಾರನದ್ದೇ ತಪ್ಪಿದೆ. ಇದೊಂದು ಆಕ್ಸಿಡೆಂಟ್. ಇನ್ಸಿಡೆಂಟ್ ಅಲ್ಲ. ಇದನ್ನು ಯಾರೂ ಬೇಕೆಂದೇ ಮಾಡುವುದಿಲ್ಲ. ಈ ವೇಳೆ ನನ್ನ ತಾಯಿ ಬಳಕೆ ಮಾಡಿರುವ ಪದಗಳು ತಪ್ಪಾಗಿವೆ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ’ ಎಂದು ಹೇಳಿದ್ದಾರೆ.
‘ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಇದಕ್ಕಿಂತಲೂ ಹೆಚ್ಚು ಏನು ಮಾಡಬೇಕು? ಇದರಲ್ಲಿ ಬೈಕ್ ಸವಾರನದ್ದೇ ತಪ್ಪಿದೆ’ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಸಂಸದ ಪ್ರಜ್ವಲ್ ರೇವಣ್ಣಗೆ ಎಸ್‍ಐಟಿ ಲುಕೌಟ್ ನೋಟಿಸ್ ಜಾರಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement