ಬಾಗಲಕೋಟೆ: ಆಘಾತಕಾರಿ ಘಟನೆಯಲ್ಲಿ ಹೇರ್ ಡ್ರೈಯರ್ ಮೆಷಿನ್ ಸ್ಫೋಟಗೊಂಡು ಮಹಿಳೆಯೊಬ್ಬರ ಎರಡು ಕೈಗಳು ಛಿದ್ರಗೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ಲದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಘಟನೆ ಈ ಘಟನೆ ಇಳಕಲ್ಲ ಪಟ್ಟಣದ ಬಸವನಗರದಲ್ಲಿ ನಡೆದಿದ್ದು, ಗಾಯಗೊಂಡ ಮಹಿಳೆಯನ್ನು ಬಸಮ್ಮ ಯರನಾಳ ಎಂದು ಗುರುತಿಸಲಾಗಿದೆ. ಗಾಯಾಳು ಸದ್ಯ ಆಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಮೃತ ಯೋಧನ ಪತ್ನಿ ಎಂದು ಹೇಳಲಾಗಿದೆ.
ಶಶಿಕಲಾ ಎಂಬವರು ಮನೆಯಲ್ಲಿ ಇಲ್ಲದ ವೇಳೆಯಲ್ಲಿಅವರ ಮನೆಗೆ ಕೊರಿಯರ್ ಬಂದಿತ್ತು. ಪಾರ್ಸಲ್ ಮೇಲೆ ಶಶಿಕಲಾ ಅವರ ಮೊಬೈಲ್ ನಂಬರ್ ಇದ್ದ ಹಿನ್ನೆಲೆಯಲ್ಲಿ ಕೊರಿಯರ್ ಸಿಬ್ಬಂದಿ ಶಶಿಕಲಾ ಅವರಿಗೆ ಫೋನ್ ಮಾಡಿ ಕೊರಿಯರ್ ಬಂದಿದೆ ಎಂದು ತಿಳಿಸಿದ್ದಾನೆ. ಆಗ ಶಶಿಕಲಾ ತಾನು ಬೇರೆ ಊರಿನಲ್ಲಿರುವುದಾಗಿ ತಿಳಿಸಿದ್ದಾರೆ. ನಂತರ ತಮ್ಮ ಸ್ನೇಹಿತೆ ಬಸಮ್ಮಾ ಅವರಿಗೆ ಕರೆ ಮಾಡಿ ‘ ಪಾರ್ಸಲ್ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ನಂತರ ಬಸಮ್ಮಾ ಅವರು ಕೊರಿಯರ್ ಸಿಬ್ಬಂದಿಯಿಂದ ಪಾರ್ಸಲ್ ಪಡೆದಿದ್ದಾರೆ. ಪಾರ್ಸಲ್ ತೆಗೆದು ನೋಡಿದಾಗ ಒಳಗಡೆ ಹೇರ್ ಡ್ರೈಯರ್ ಇತ್ತು ಎನ್ನಲಾಗಿದೆ. ನಂತರ ಅವರು ಸ್ವಿಚ್ ಹಾಕಿ ಹೇರ್ ಡ್ರೈಯರ್ ಆನ್ ಮಾಡಿದ್ದಾರೆ, ಆಗ ಅದು ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಅವರ ಹಸ್ತಗಳು ಛಿದ್ರಗೊಂಡಿದೆ. ಕೂಡಲೇ ಬಸಮ್ಮ ಅವರನ್ನು ಇಳಕಲ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಳಕಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ