ಭೂಮಿಯೊಳಗಿಂದ ಭಾರಿ ಸದ್ದು, ಭೂಕಂಪನದ ಅನುಭವ; ಬೆಚ್ಚಿಬಿದ್ದ ಜನರು

ಕಲಬುರಗಿ: ಶುಕ್ರವಾರ ರಾತ್ರಿ ಕಲಬುರಗಿ ಜಿಲ್ಲೆಯ ಕೆಲಗ್ರಾಮಗಳಲ್ಲಿ ಗ್ರಾಮದ ಜನರು ಸದ್ದಿಗೆ ಹಾಗೂ ಭೂಮಿ ಕಂಪಿಸಿದ್ದಕ್ಕೆ ಬೆಚ್ಚಿಬಿದ್ದಿದ್ದಾರೆ. ಗಡಿಕೇಶ್ವರ ಸಮೀಪದ ಕೇರಳ್ಳಿ ಗ್ರಾಮದಲ್ಲೂ ಭೂಮಿಯಿಂದ ಭಾರಿ ಸದ್ದು ಕೇಳಿಬಂದಿದೆ ಎಂದು ವರದಿಯಾಗಿದೆ.

ನೆಲದೊಳಗಿನಿಂದ ಒಂದೇ ದಿನದಲ್ಲಿ ಮೂರು ಸಲ ಭಾರಿ ಸದ್ದು ಕೇಳಿ ಬಂದಿದ್ದು, ಜನರಿಗೆ ಭೂಕಂಪನದ ಅನುಭವ ಕೂಡ ಆಗಿದೆ. ಜಿಲ್ಲೆಯ ಗಡಿಕೇಶ್ವರ ಗ್ರಾಮಸ್ಥರು ಈ ಸದ್ದಿನಿಂದ ಬೆಚ್ಚಿಬಿದ್ದಿದ್ದು,ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಶುಕ್ರವಾರ ರಾತ್ರಿ 7.30ರ ನಂತರ ಕೆಲವೇ ನಿಮಿಷಗಳ ಅಂತರದಲ್ಲಿ ಮುರು ಸಲ ನೆಲದೊಳಗಿನಿಂದ ಭಾರಿ ಸದ್ದು ಕೇಳಿಬಂದಿದ್ದು, ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಮನೆಯೊಳಗಿನ ವಸ್ತುಗಳು, ಪಾತ್ರೆಗಳು ಕಂಪನಕ್ಕೆ ಅಲ್ಲಾಡಿ ಬಿದ್ದಿವೆ. ಕೆಲವೆಡೆ ಬಿರುಕುಗಳೂ ಉಂಟಾಗಿವೆ. ಇದರಿಂದ ಹಳ್ಳಿಯಲ್ಲಿ ರಾತ್ರಿ ಎಲ್ಲರೂ ಜಾಗ್ರತೆಯಿಂದ ಇರಬೇಕು ಎಂದು ಡಂಗುರ ಸಾರಲಾಗಿದೆ.
ಪಾತ್ರೆ ಮತ್ತಿತರ ವಸ್ತುಗಳು ಕೆಳಗೆ ಬಿದ್ದಿದ್ದನ್ನು ನೋಡಿ ಜನರು ಗಾಬರಿಯಿಂದ ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಕಾಳಗಿ ಮತ್ತು ಚಿಂಚೋಳಿ ತಾಲ್ಲೂಕಿನಲ್ಲೂ ಭೂಕಂಪನದ ಅನುಭವ ಆಗಿದೆ ಎಂದು ಜನರು ಹೇಳಿದ್ದಾರೆ. ಚಿಂಚೋಳಿ ತಾಲ್ಲೂಕಿನ ನಿಡಗುಂದಾ, ಶಿರೋಳ್ಳಿ, ಸುಲೆಪೇಟ್, ಕಾಳಗಿ ತಾಲ್ಲೂಕಿನ ಹೊಸಹಳ್ಳಿ ಹಲಚೇರಾದಲ್ಲಿ ಭೂಮಿ ಕಂಪಿಸಿದ್ದು, ಮನೆಮಂದಿ ಎಲ್ಲ ಹೊರಗೆ ಬಂದಿದ್ದಾರೆ.ಈ ನಿಗೂಢ ಸದ್ದು ಯಾವುದು..? ನಿಜವಾಗಿ ಭೂಮಿ ಕಂಪಸಿದ್ದೋ ಅಥವಾ ಬೇರೆ ಯಾವ ಕಾರಣದಿಂದ ಆಗಿದೆ ಎಂಬುದನ್ನು ಕಂಡುಹಿಡಯಬೇಕಿದೆ.

ಪ್ರಮುಖ ಸುದ್ದಿ :-   ಅಂಜಲಿ ಹತ್ಯೆ ಪ್ರಕರಣ : ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಸಹೋದರಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement