ಈ ಲೋಕಸಭಾ ಚುನಾವಣೆಯಲ್ಲಿ 543 ಸ್ಥಾನಗಳಲ್ಲಿ ಎನ್‌ಡಿಎ (NDA) 293 ಸ್ಥಾನಗಳನ್ನು ಪಡೆಯುವ ಮೂಲಕ ಬಹುಮತ ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ.
ಆದರೆ, 240 ಸ್ಥಾನಗಳನ್ನು ಪಡೆದ ಬಿಜೆಪಿ ತನ್ನದೇ ಆದ ಬಹುಮತ ಸಾಧಿಸಲು ವಿಫಲವಾಗಿದೆ. ಇದು 2014 ಹಾಗೂ 2019ರಲ್ಲಿ ಅದರ ಅದ್ಭುತ ಪ್ರದರ್ಶನಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಮತಗಳ ಅಂಕಿಅಂಶಗಳನ್ನು ವಿಶ್ಲೇಷಿಸಿದಾಗ, ಬಿಜೆಪಿ ಹೆಚ್ಚುವರಿಯಾಗಿ ಕೇವಲ 6,09,639 ಮತಗಳನ್ನು ಪಡೆದಿದ್ದರೆ ಅದು 32 ಸ್ಥಾನಗಳನ್ನು ಹೆಚ್ಚಿಗೆ ಗೆಲ್ಲುವ ಮೂಲಕ ಬಿಜೆಪಿ ಸರಳ ಬಹುಮತ ಪಡೆಯಬಹುದಿತ್ತು ಎಂದು ತೋರುತ್ತದೆ.
ಚಂಡೀಗಢದಲ್ಲಿ ಬಿಜೆಪಿ ಕೇವಲ 2,504 ಮತಗಳ ಅಂತರದಿಂದ ಸೋತಿದೆ. ಉತ್ತರ ಪ್ರದೇಶದ ಹಮೀರಪುರದಲ್ಲಿ ಕೇವಲ 2,629 ಮತಗಳ ಅಂತರದಿಂದ ಸೋತರೆ, . ಅದೇ ರಾಜ್ಯದ ಸೇಲಂಪುರದಲ್ಲಿ 3,573 ಮತಗಳು, ಮಹಾರಾಷ್ಟ್ರದ ಧುಲೆಯಲ್ಲಿ 3,831 ಮತಗಳು, ಮತ್ತು ಉತ್ತರ ಪ್ರದೇಶದ ಧೌರಾಹ್ರಾ (4,449 ಮತಗಳು) ಕ್ಷೇತ್ರಗಳಲ್ಲಿ ಕಡಿಮೆ ಅಂತರದಲ್ಲಿ ಸೋಲುಗಳನ್ನು ಕಂಡಿವೆ. ನಂತರ ಕೆಲವು ಇತರ ಸ್ಥಾನಗಳಲ್ಲಿ ಚಂಡೀಗಢ ಮತ್ತು ಧುಲೆಗಿಂತ ಹೆಚ್ಚಿನ ಅಂತರವಿದ್ದರೂ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಕಡಿಮೆ ಅಂತರದಲ್ಲಿ ಬಿಜೆಪಿ ಸೋತಿದೆ. ದಕ್ಷಿಣ ಗೋವಾ (13,535 ಮತಗಳು), ತಿರುಪತಿ (14,569 ಮತಗಳು), ಮತ್ತು ಕೇರಳದ ತಿರುವನಂತಪುರಂದಲ್ಲಿ (16,077 ಮತಗಳು) ಕಡಿಮೆ ಅಂತರದಿಂದ ಸೋತಿದೆ. ಕಡಿಮೆ ಅಂತರದ ಸೋಲುಗಳಲ್ಲಿ ಅತಿ ಹೆಚ್ಚು ಅಂತರವಿದ್ದ ಕ್ಷೇತ್ರಗಳೆಂದರೆ ಉತ್ತರ ಪ್ರದೇಶದ ಫತೇಪುರ್ (33,199 ಮತಗಳು), ಮತ್ತು ಉತ್ತರ ಪ್ರದೇಶದ ಖೇರಿ (34,329 ಮತಗಳು)ಗಳಾಗಿವೆ.
ಕಡಿಮೆ ಮತಗಳ ಅಂತರದಲ್ಲಿ ಸೋತ ಲೋಕಸಭಾ ಕ್ಷೇತ್ರಗಳು…
1 ಚಂಡೀಗಢ- ಚಂಡೀಗಢ -2,504 ಮತಗಳು
2 ಹಮೀರಪುರ-ಉತ್ತರ ಪ್ರದೇಶ-2,629 ಮತಗಳು
3 ಸೇಲಂಪುರ-ಉತ್ತರ ಪ್ರದೇಶ -3,573 ಮತಗಳು
4 ಧುಲೆ-ಮಹಾರಾಷ್ಟ್ರ 3,831 ಮತಗಳು
5 ಧೌರಾಹ್ರಾ -ಉತ್ತರ ಪ್ರದೇಶ-4,449 ಮತಗಳು
6 ದಮನ್ ಮತ್ತು ದಿಯು – 6,225 ಮತಗಳು
7 ಆರಂಬಾಗ್- ಪಶ್ಚಿಮ ಬಂಗಾಳ- 6,399
8 ಬೀಡ್ -ಮಹಾರಾಷ್ಟ್ರ -6,553 ಮತಗಳು
9 ದಕ್ಷಿಣ ಗೋವಾ -ಗೋವಾ -13,535 ಮತಗಳು
10 ತಿರುಪತಿ-ಆಂಧ್ರ ಪ್ರದೇಶ-14,569 ಮತಗಳು
11 ಅಯೋನ್ಲಾ-ಉತ್ತರ ಪ್ರದೇಶ-15,969 ಮತಗಳು
12 ತಿರುವನಂತಪುರಂ-ಕೇರಳ 16,077 ಮತಗಳು
13 ಮುಂಬೈ ಉತ್ತರ ಮಧ್ಯ-ಮಹಾರಾಷ್ಟ್ರ 16,514 ಮತಗಳು
14 ಜುಂಜುನು ರಾಜಸ್ಥಾನ 18,235-ಮತಗಳು
15 ಸಸಾರಾಮ್-ಬಿಹಾರ-19,157 ಮತಗಳು
16 ಅಮರಾವತಿ ಮಹಾರಾಷ್ಟ್ರ-19,731 ಮತಗಳು
17 ಲುಧಿಯಾನ-ಪಂಜಾಬ್-20,942 ಮತಗಳು
18 ಚಂದೌಲಿ-ಉತ್ತರ ಪ್ರದೇಶ -21,565 ಮತಗಳು
19 ಸೋನಿಪತ್-ಹರಿಯಾಣ-21,816 ಮತಗಳು
20 ದುಮ್ಕಾ-ಜಾರ್ಖಂಡ್-22,527 ಮತಗಳು
21 ಮುಜಫರನಗರ-ಉತ್ತರ ಪ್ರದೇಶ-24,672 ಮತಗಳು
22 ದಾವಣಗೆರೆ-ಕರ್ನಾಟಕ-26,094 ಮತಗಳು
23 ಮೇದಿನಿಪುರ-ಪಶ್ಚಿಮ ಬಂಗಾಳ-27,191 ಮತಗಳು
24 ಗುಲ್ಬರ್ಗ-ಕರ್ನಾಟಕ-27,205 ಮತಗಳು
25 ಎತಾಹ್-ಉತ್ತರ ಪ್ರದೇಶ-28,052 ಮತಗಳು
26 ಅಹಮದ್‌ನಗರ-ಮಹಾರಾಷ್ಟ್ರ 28,929 ಮತಗಳು
27 ಮುಂಬೈ ಈಶಾನ್ಯ-ಮಹಾರಾಷ್ಟ್ರ 29,861 ಮತಗಳು
28 ಬಕ್ಸರ್-ಬಿಹಾರ -30,091 ಮತಗಳು
29 ಬನಸ್ಕಾಂತ-ಗುಜರಾತ್-30,406
30 ಬಂಕುರಾ-ಪಶ್ಚಿಮ ಬಂಗಾಳ-32,778
31 ಫತೇಪುರ-ಉತ್ತರ ಪ್ರದೇಶ-33,199
32 ಖೇರಿ-ಉತ್ತರ ಪ್ರದೇಶ-34,329
ಒಟ್ಟು 6,09,639 ಮತಗಳಿಂದ ಅದು 32 ಕ್ಷೇತ್ರಗಳನ್ನು ಕಳೆದುಕೊಂಡಿದೆ.
ಒಟ್ಟಾರೆಯಾಗಿ, ಬಿಜೆಪಿ ತನ್ನ ಸೀಟು ಪಾಲುದಾರಿಕೆಯಲ್ಲಿ ಶೇಕಡಾ 21 ರಷ್ಟು ಕುಸಿತವನ್ನು ಕಂಡಿದೆ. ಗಮನಾರ್ಹ ಅಂಶವೆಂದರೆ ಬಿಜೆಪಿಯು ಹಾಲಿ ಸಂಸದರನ್ನು ಕಣಕ್ಕಿಳಿಸಿದ 168 ಸ್ಥಾನಗಳಲ್ಲಿ 111 ಸ್ಥಾನಗಳನ್ನು ಗೆಲುವು ಸಾಧಿಸಿದೆ. ಅಂದರೆ ಒಟ್ಟು 66 ಪ್ರತಿಶತದಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮತ್ತೊಂದೆಡೆ, ಹಾಲಿ ಸಂಸದರನ್ನು ಕೈಬಿಟ್ಟು ಹೊಸ ಮುಖಕ್ಕೆ ಟಿಕೆಟ್ ನೀಡಿದ 132 ಸ್ಥಾನಗಳಲ್ಲಿ, ಪಕ್ಷವು 95 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ, ಅಂದರೆ ಗೆಲುವಿನ ಪ್ರಮಾಣ ಶೇಕಡಾ 72 ರಷ್ಟಿದೆ. ಅಭ್ಯರ್ಥಿಗಳನ್ನು ಬದಲಿಸುವ ಮೂಲಕ ಪಕ್ಷವು ಕೆಲವು ಸ್ಥಾನಗಳಲ್ಲಿ ಆಡಳಿತ ವಿರೋಧಿ ಅಲೆಯನ್ನು ತಡೆದಿದೆ ಎಂದು ಇದು ಸೂಚಿಸುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ