ವಕೀಲರ ಉಡುಪಿನಲ್ಲಿ ಕೋರ್ಟ್‌ಗೆ ಮಮತಾ ಬ್ಯಾನರ್ಜಿ ಹಾಜರು : ವಕೀಲ ವೃತ್ತಿಯ ವಿವರ ಕೇಳಿದ ಬಾರ್ ಕೌನ್ಸಿಲ್

ನವದೆಹಲಿ : ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಕಲ್ಕತ್ತಾ ಹೈಕೋರ್ಟ್‌ಗೆ ವಕೀಲರ ಗೌನ್ ಮತ್ತು ಬಿಳಿ ಬ್ಯಾಂಡ್ ಧರಿಸಿ ಹಾಜರಾದ ಬೆನ್ನಲ್ಲೇ, ಭಾರತೀಯ ವಕೀಲರ ಪರಿಷತ್ತು (Bar Council of India) ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಬ್ಯಾನರ್ಜಿ ಅವರ ದಾಖಲಾತಿ ಮತ್ತು ವಕೀಲ ವೃತ್ತಿಯ ಸ್ಥಿತಿಗತಿಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುವಂತೆ ಪಶ್ಚಿಮ ಬಂಗಾಳದ ರಾಜ್ಯ ವಕೀಲರ ಪರಿಷತ್ತಿಗೆ ಅದು ಸೂಚಿಸಿದೆ.
ಮೇ 14, 2026 ರಂದು ಬಿಸಿಐ ಪ್ರಧಾನ ಕಾರ್ಯದರ್ಶಿ ಶ್ರೀಮಂತೋ ಸೇನ್ ಅವರು ರಾಜ್ಯ ವಕೀಲರ ಪರಿಷತ್ತಿನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ವಿವಿಧ ಮಾಧ್ಯಮ ವರದಿಗಳ ಆಧಾರದ ಮೇಲೆ ಬಿಸಿಐ ಈ ಕ್ರಮ ಕೈಗೊಂಡಿದ್ದು, ಮಮತಾ ಬ್ಯಾನರ್ಜಿ ಅವರು ಕಾನೂನು ಉಡುಪಿನಲ್ಲಿ ನ್ಯಾಯಾಲಯಕ್ಕೆ ಹಾಜರಾಗಿರುವುದನ್ನು ಗಮನಿಸಿದೆ ಎಂದು ಹೇಳಿದೆ.

ರಾಜ್ಯ ವಕೀಲರ ಪರಿಷತ್ತಿನಿಂದ ಪ್ರಮುಖ ಮಾಹಿತಿಗಳನ್ನು ಕೋರಿದೆ. 2011 ರಿಂದ 2026 ರವರೆಗೆ ಮುಖ್ಯಮಂತ್ರಿಯಾಗಿ ಸಾಂವಿಧಾನಿಕ ಹುದ್ದೆಯಲ್ಲಿದ್ದ ಅವಧಿಯಲ್ಲಿ ಅವರ ವಕೀಲ ವೃತ್ತಿಯ ಪರವಾನಗಿ ರದ್ದಾಗಿತ್ತೇ ಅಥವಾ ಅಮಾನತ್ತಿನಲ್ಲಿತ್ತೇ ಎಂಬ ಬಗ್ಗೆ ಮಾಹಿತಿ ಕೇಳಲಾಗಿದೆ. ಮಮತಾ ಬ್ಯಾನರ್ಜಿ ಅವರ ದಾಖಲಾತಿ ಸಂಖ್ಯೆ ಮತ್ತು ನೋಂದಣಿಯಾದ ದಿನಾಂಕ, ಅವರ ಹೆಸರು ಪ್ರಸ್ತುತ ರಾಜ್ಯ ವಕೀಲರ ಪಟ್ಟಿಯಲ್ಲಿ ಮುಂದುವರಿದಿದೆಯೇ?, ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಅಥವಾ ನಂತರ ಅವರ ವೃತ್ತಿ ಪರವಾನಗಿ ಅಮಾನತು, ಸ್ಥಗಿತ ಅಥವಾ ಪುನರಾರಂಭದ ಬಗ್ಗೆ ಮಾಹಿತಿ ನೀಡಿದ್ದಾರೆಯೇ? ಅವರ ಪರವಾಗಿ ಪ್ರಸ್ತುತ ಯಾವುದೇ ವೃತ್ತಿಪರ ಪ್ರಮಾಣಪತ್ರ (Certificate of Practice) ಅಸ್ತಿತ್ವದಲ್ಲಿದೆಯೇ? ಅದು ಸಕ್ರಿಯವಾಗಿದೆಯೇ ಅಥವಾ ಅಮಾನತುಗೊಂಡಿದೆಯೇ? ಎಂಬಿತ್ಯಾದಿ ಮಾಹಿತಿಗಳನ್ನು ಕೋರಿದೆ.
“ಈ ಹಂತದಲ್ಲಿ ಇಂತಹ ಉಡುಪು ಧರಿಸಿ ಹಾಜರಾಗುವುದು ಸರಿಯೇ ಅಥವಾ ತಪ್ಪೇ ಎಂಬ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಆದರೆ ಅಧಿಕೃತ ದಾಖಲೆಗಳ ಮೂಲಕ ಅವರ ದಾಖಲಾತಿ ಮತ್ತು ವೃತ್ತಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ ಎಂದು ಭಾರತೀಯ ವಕೀಲರ ಪರಿಷತ್ತು (BCI)

ಪ್ರಮುಖ ಸುದ್ದಿ :-   ಮುಂಗಾರು ಮತ್ತೆ ಚುರುಕು ; ಬಲಗೊಳ್ಳುತ್ತಿರುವ ಮಳೆ ಮೋಡಗಳು ; ಜೂ. 21ರಿಂದ ಕರ್ನಾಟಕದ ಹಲವೆಡೆ ಭಾರಿ ಮಳೆ ಸಾಧ್ಯತೆ

ಮಮತಾ ಬ್ಯಾನರ್ಜಿ ಅವರು 2011 ರಿಂದ 2026 ರವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು ಎಂಬ ಅಂಶವನ್ನು ಬಿಸಿಐ ಪ್ರಸ್ತಾಪಿಸಿದೆ. ವಕೀಲರ ವೃತ್ತಿಪರ ನಡವಳಿಕೆ ಮತ್ತು ನ್ಯಾಯಾಲಯಕ್ಕೆ ಹಾಜರಾಗುವಾಗ ಪಾಲಿಸಬೇಕಾದ ವಸ್ತ್ರಸಂಹಿತೆಯ ನಿಯಮಗಳನ್ನು ಉಲ್ಲೇಖಿಸಿ ದಾಖಲಾತಿ ರಿಜಿಸ್ಟರ್, ವರ ವೃತ್ತಿಪರವಾನಗಿ ಅಮಾನತು ಅಥವಾ ಪುನರಾರಂಭದ ದಾಖಲೆಗಳು ಮತ್ತು ಪತ್ರವ್ಯವಹಾರದ ಕಡತಗಳ ಪ್ರಮಾಣೀಕೃತ ಪ್ರತಿಗಳನ್ನು ಎರಡು ದಿನಗಳ ಒಳಗಾಗಿ ಸಲ್ಲಿಸಬೇಕು ಎಂದು ಹೇಳಿದೆ.
ಮೂಲ ದಾಖಲೆಗಳನ್ನು ಈಗಿರುವ ರೂಪದಲ್ಲೇ ಸಂರಕ್ಷಿಸಿಡಬೇಕು. ಕಾನೂನುಬದ್ಧ ಪ್ರಕ್ರಿಯೆ ಮತ್ತು ಬಿಸಿಐಗೆ ಮಾಹಿತಿ ನೀಡದೆ ದಾಖಲೆಗಳಲ್ಲಿ ಯಾವುದೇ ಬದಲಾವಣೆ, ತಿದ್ದುಪಡಿ ಅಥವಾ ಪುನರ್ ನಿರ್ಮಾಣ ಮಾಡಬಾರದು ಎಂದು ಎಚ್ಚರಿಸಲಾಗಿದೆ. ಈ ವಿಷಯವನ್ನು ಅತ್ಯಂತ ತುರ್ತು ಎಂದು ಪರಿಗಣಿಸುವಂತೆ ಬಿಸಿಐ ಸೂಚಿಸಿದೆ.

ಟಿಎಂಸಿ ಪರವಾಗಿ ವಕೀಲ ಶೀರ್ಷಣ್ಯ ಬಂದ್ಯೋಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯ ಪರವಾಗಿ ಮಮತಾ ಬ್ಯಾನರ್ಜಿ ವಾದ ಮಂಡಿಸಲು ಬಂದಿದ್ದರು. ಮೇ 12 ರಂದು ದಾಖಲಾದ ಈ ಅರ್ಜಿಯಲ್ಲಿ, ಚುನಾವಣೋತ್ತರ ಹಿಂಸಾಚಾರದಿಂದಾಗಿ ಹಲವು ಟಿಎಂಸಿ ನಾಯಕರು ಮತ್ತು ಕಾರ್ಯಕರ್ತರು ಮನೆಬಿಟ್ಟು ಓಡಿಹೋಗುವಂತಾಗಿದೆ ಮತ್ತು ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಸುಜಯ ಪಾಲ್ ಮತ್ತು ನ್ಯಾಯಮೂರ್ತಿ ಪಾರ್ಥಸಾರಥಿ ಸೇನ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ಈ ಪ್ರಕರಣದ ವಿಚಾರಣೆ ನಡೆಯಿತು.

ಪ್ರಮುಖ ಸುದ್ದಿ :-   ಗ್ರಿಲ್‌ಗೆ ಕೈಗಳನ್ನು ಕಟ್ಟಿದ್ದರು...ಬಾಯಿಗೆ ಬಟ್ಟೆ ತುರುಕಿದ್ದರು..: ಕಿಡ್ನ್ಯಾಪ್ ಪ್ರಕರಣ ಬೆನ್ನತ್ತಿದ ಪೊಲೀಸರು-ಕುಟುಂಬಸ್ಥರೇ ಬೆಸ್ತುಬಿದ್ದರು...!

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement