ಮ್ಯಾನ್ಮಾರ್‌ ಸೈನಿಕ ದಂಗೆ ವಿರೋಧಿಸಿ ಪ್ರತಿಭಟನೆ: ಪೊಲೀಸರ ಗುಂಡಿಗೆ ಇಬ್ಬರು ಸಾವು

ಫೆಬ್ರವರಿ 1 ರ ಮಿಲಿಟರಿ ದಂಗೆ ವಿರೋಧಿಸಿದವರನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದಾಗ ಮ್ಯಾನ್ಮಾರ್‌ನ ಎರಡನೇ ನಗರ ಮಾಂಡಲೆ ಎಂಬಲ್ಲಿ ಶನಿವಾರ ಇಬ್ಬರು ಮೃತಪಟ್ಟಿದ್ದಾರೆ.
ಇಪ್ಪತ್ತು ಜನರು ಗಾಯಗೊಂಡಿದ್ದಾರೆ ಎಂದು ನಗರದ ಪರಾಹಿತಾ ದರ್ಹಿ ಸ್ವಯಂಸೇವಕ ತುರ್ತು ಸೇವಾ ಸಂಸ್ಥೆಯ ಮುಖಂಡ ಕೋ ಆಂಗ್ ಹೇಳಿದ್ದಾರೆ.
ದಂಗೆಯ ವಿರೋಧಿಗಳು ಹಲವಾರು ಮ್ಯಾನ್ಮಾರ್ ನಗರಗಳು ಮತ್ತು ಪಟ್ಟಣಗಳಲ್ಲಿ ಜನಾಂಗೀಯ ಅಲ್ಪಸಂಖ್ಯಾತರು, ಕವಿಗಳು ಮತ್ತು ಸಾರಿಗೆ ಕಾರ್ಮಿಕರೊಂದಿಗೆ ಮಿಲಿಟರಿ ಆಡಳಿತವನ್ನು ಕೊನೆಗೊಳಿಸಬೇಕೆಂದು ಮತ್ತು ಚುನಾಯಿತ ನಾಯಕಿ ಆಂಗ್ ಸಾನ್ ಸೂಕಿ ಮತ್ತು ಇತರರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಕೆಲವು ಪ್ರತಿಭಟನಾಕಾರರ ಮೇಲೆ ಪೊಲೀಸರ ಮೇಲೆ ಕಣ್ಣೀರಿನ ಟಿಯರ್‌ ಗ್ಯಾಸ್‌ ಪ್ರಯೋಗಿಸಿದರು. ಆ ಮೇಲೆ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲಾಯಿತು. ಪೊಲೀಸರು ಲೈವ್ ಮದ್ದುಗುಂಡು ಅಥವಾ ರಬ್ಬರ್ ಗುಂಡುಗಳನ್ನು ಬಳಸಿದ್ದಾರೆಯೇ ಎಂಬುದು ಷ್ಟವಾಗಿಲ್ಲ.
ತಲೆಗೆ ಪೆಟ್ಟಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ, ನಗರದ ವಾಯ್ಸ್ ಆಫ್ ಮ್ಯಾನ್ಮಾರ್ ಮಾಧ್ಯಮ ಸಂಸ್ಥೆಯ ಸಹಾಯಕ ಸಂಪಾದಕ ಲಿನ್ ಖೈಂಗ್ ಸೇರಿದಂತೆ ಮಾಧ್ಯಮದವರು ತಿಳಿಸಿದ್ದಾರೆ. ಸ್ವಯಂಸೇವಕ ವೈದ್ಯರೊಬ್ಬರು ಎರಡು ಸಾವುಗಳು ಸಂಭವಿಸಿವೆ ಎಂದು ದೃಢಪಡಿಸಿದರು. ಪೊಲೀಸರು ಪ್ರತಿಕ್ರಿಯೆಗೆ ಸಿಗಲಿಲ್ಲ.
ಹಿರಿಯ ಪ್ರಜಾಪ್ರಭುತ್ವ ಪ್ರಚಾರಕಿ ಸೂಕಿ ಅವರ ಸರ್ಕಾರವನ್ನು ಉರುಳಿಸಿದ ಸೈನಿಕ ದಂಗೆಯ ವಿರುದ್ಧದ ಪ್ರತಿಭಟನೆಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement