ಭಾರತೀಯ ಮೂಲದ ಪ್ರತಿಷ್ಠಾನದ ಬಳಿ ಇದೆ ವಿಶ್ವದ ಅತ್ಯಂತ ದುಬಾರಿ ಚಹಾ ಮಗ್… ಬೆಲೆ ಕೇವಲ 24 ಕೋಟಿ ರೂ…!

ಪ್ರಪಂಚದಾದ್ಯಂತದ ಚಹಾ ಪ್ರೇಮಿಗಳು ಟೀಪಾಟ್‌ಗಳು ಸೇರಿದಂತೆ ಸುಂದರವಾದ ಕಪ್‌ಗಳು ಮತ್ತು ಸಾಸರ್‌ಗಳಲ್ಲಿ ತಮ್ಮ ನೆಚ್ಚಿನ ಪಾನೀಯವನ್ನು ಕುಡಿಯಲು ಇಷ್ಟಪಡುತ್ತಾರೆ. ಈ ಪಾತ್ರೆಗಳಲ್ಲಿ ಕೆಲವು ನಿಜವಾಗಿಯೂ ದುಬಾರಿಯಾಗಿರಬಹುದು. ಆದರೆ ನೀವು ಎಂದಾದರೂ ಒಂದು ಟೀಪಾಟ್‌ನ ಬೆಲೆ $3,000,000, ಅಂದಾಜು 24 ಕೋಟಿ ರೂಪಾಯಿಗಳು ಇರುವುದನ್ನು ಕೇಳಿದ್ದೀರಾ? ಹೌದು, ನೀವು ಕೇಳಿದ್ದು ಸರಿ. “ದಿ ಇಗೋಯಿಸ್ಟ್” ಎಂದು ಹೆಸರಿಸಲಾದ, ಹೊಳೆಯುವ ಚಹಾ ಮಗ್‌ 2016 ರಲ್ಲಿ ಅತ್ಯಂತ ಬೆಲೆಬಾಳುವ ಚಹಾ ಮಗ್‌ ಆಗಿ ವಿಶ್ವದಾಖಲೆಯನ್ನು ಸ್ಥಾಪಿಸಿತು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಆಗಸ್ಟ್ 9 ರಂದು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ಇದರ ಚಿತ್ರಗಳನ್ನು ಹಂಚಿಕೊಂಡ ನಂತರ ಅದು ವೈರಲ್ ಆಯಿತು.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಟ್ವೀಟ್ ಪ್ರಕಾರ, ಟೀ ಪಾಟ್ ಅಥವಾ ಚಹಾ ಮಗ್‌ ಬ್ರಿಟನ್ನಿನ ಎನ್.ಸೇಥಿಯಾ ಫೌಂಡೇಶನ್ ಒಡೆತನದಲ್ಲಿದೆ ಮತ್ತು ಅದು 18-ಕ್ಯಾರೆಟ್ ಹಳದಿ ಚಿನ್ನ ಹಾಗೂ ಕಟ್ ಡೈಮಂಡ್ ನಿಂದ ತಯಾರಿಸಲ್ಪಟ್ಟಿದೆ. ಮತ್ತು ಮಧ್ಯದಲ್ಲಿ 6.67-ಕ್ಯಾರೆಟ್ ಮಾಣಿಕ್ಯವಿದೆ. ಚಿನ್ನವು 1658 ವಜ್ರಗಳು ಮತ್ತು 386 ಅಧಿಕೃತ ಥಾಯ್ ಮತ್ತು ಬರ್ಮೀಸ್ ಮಾಣಿಕ್ಯಗಳೊಂದಿಗೆ ತಯಾರಾಗಿದೆ. ಕೆಟಲ್‌ನ ಹಿಡಿಕೆಯನ್ನು ಆನೆಯೊಂದರ ಪಳೆಯುಳಿಕೆ ದಂತದಿಂದ ಮಾಡಲಾಗಿದೆ. ಇಟಲಿಯ ಆಭರಣ ವ್ಯಾಪಾರಿ ಫುಲ್ವಿಯೊ ಸ್ಕಾವಿಯಾ ಅವರು 24 ಕೋಟಿ ರೂಪಾಯಿ ವೆಚ್ಚದ ಈ ಚಹಾ ಮಗ್‌ ಅನ್ನು ತಯಾರಿಸಿದ್ದಾರೆ.

ಪ್ರಮುಖ ಸುದ್ದಿ :-   ಪಹಲ್ಗಾಮ್‌ ದಾಳಿ | ಪಾಕ್ ಬೆಂಬಲಿಸಿದ್ದ ಟರ್ಕಿಗೆ ದೊಡ್ಡ ಹೊಡೆತ ನೀಡಿದ ಭಾರತ : ಸೆಲೆಬಿ ಏರ್‌ಪೋರ್ಟ್‌ ಸರ್ವೀಸಸ್‌ ಗೆ ಭದ್ರತಾ ಅನುಮತಿ ರದ್ದು...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement