ಐಐಟಿ ಜಂಟಿ ಪ್ರವೇಶ ಪರೀಕ್ಷೆಯಲ್ಲಿ (ಜೆಎಎಂ) ರಾಷ್ಟ್ರ ಮಟ್ಟದಲ್ಲಿ 54 ನೇ ರ‍್ಯಾಂಕ್‌ ಪಡೆದ ವಿಚಾರಣಾಧೀನ ಖೈದಿ…!

ನವದೆಹಲಿ: ಬಿಹಾರದ ನವಾಡ ಜೈಲಿನಲ್ಲಿರುವ ವಿಚಾರಣಾಧೀನ ಖೈದಿಯೊಬ್ಬ ಐಐಟಿ ಜಂಟಿ ಪ್ರವೇಶ ಪರೀಕ್ಷೆಯಲ್ಲಿ ಮಾಸ್ಟರ್ಸ್ (ಜೆಎಎಂ) 2022 ರಲ್ಲಿ ರಾಷ್ಟ್ರ ಮಟ್ಟದಲ್ಲಿ 54 ನೇ ರ್ಯಾಂಕ್‌ ಪಡೆದು ಉತ್ತೀರ್ಣರಾಗಿದ್ದಾನೆ…!
JAM ಎಂಬುದು ಭಾರತೀಯ ತಂತ್ರಜ್ಞಾನ ಸಂಸ್ಥೆ ಐಐಟಿ)ಗಳಲ್ಲಿ ಮಾಸ್ಟರ್ ಆಫ್ ಸೈನ್ಸ್ ಮತ್ತು ಬೆಂಗಳೂರಿನ ಐಐಎಸ್‌ಸಿ( IISc)ನಲ್ಲಿ ಇಂಟಿಗ್ರೇಟೆಡ್ ಪಿಎಚ್‌ಡಿ ಇತರ ಸ್ನಾತಕೋತ್ತರ ವಿಜ್ಞಾನ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಫೆಬ್ರವರಿಯಲ್ಲಿ ಪ್ರತಿ ವರ್ಷ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಯಾಗಿದೆ.

ಬಿಹಾರದ ನವಾಡ ವಿಭಾಗೀಯ ಜೈಲಿನಲ್ಲಿ ವಿಚಾರಣೆಗೆ ಕಾಯುತ್ತಿರುವ ಕೊಲೆ ಆರೋಪಿ ಸೂರಜಕುಮಾರ ಯಾದವ್, ತನ್ನ ಯಶಸ್ಸಿಗೆ ನಾವಡ ಜೈಲು ಅಧೀಕ್ಷಕ ಅಭಿಷೇಕ್ ಪಾಂಡೆ ಕಾರಣ ಎಂದು ಹೇಳುತ್ತಾನೆ. ಅವರು ಪರೀಕ್ಷೆಗೆ ತಯಾರಿ ಮಾಡಲು ಅಗತ್ಯವಾದ ಪಠ್ಯಪುಸ್ತಕಗಳನ್ನು ಒದಗಿಸಿದರು ಮತ್ತು ಪೌಷ್ಟಿಕ ಆಹಾರವನ್ನು ಒದಗಿಸಿದರು ಮತ್ತು ಸಮಯಪೂರ್ತಿ ಪ್ರೇರೇಪಿಸಿದರು ಎಂದು ಹೇಳುತ್ತಾನೆ.
ವಾರ್ಸಾಲಿಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯ ಮೊಸ್ಮಾ ಗ್ರಾಮದ ಸೂರಜ್, ಏಪ್ರಿಲ್ 17, 2021 ರಿಂದ ತನ್ನ ಹಿರಿಯ ಸಹೋದರ ಬೀರೇಂದ್ರ ಜೊತೆ ಜೈಲಿನಲ್ಲಿದ್ದಾನೆ. ಆದರೆ ಉನ್ನತ ಶಿಕ್ಷಣದ ಕನಸನ್ನು ಮುಂದುವರಿಸುವ ಸಲುವಾಗಿ, ಆತ ಜೈಲಿನೊಳಗೆ ತಮ್ಮ ಅಧ್ಯಯನವನ್ನು ಮುಂದುವರೆಸಿದ ಹಾಗೂ ಗಣಿತ ಮತ್ತು ಇತರ ವಿಷಯಗಳನ್ನು ಕಲಿಯಲು ವಿದ್ಯಾವಂತ ಕೈದಿಗಳು ಮತ್ತು ಜೈಲು ಅಧಿಕಾರಿಗಳಿಂದ ಸಹಾಯ ಪಡೆದಿದ್ದಾನೆ.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

ಫೆಬ್ರವರಿ 13 ರಂದು ದೆಹಲಿಯಲ್ಲಿ ಪರೀಕ್ಷೆ ಬರೆಯಲು ಸೂರಜ್‌ಗೆ ಒಂದು ತಿಂಗಳ ಪೆರೋಲ್ ನೀಡಲಾಯಿತು.
ಕೊಲೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸೂರಜ್ ಜೈಲು ಸೇರುವ ಮೊದಲು, ಇಂಜಿನಿಯರಿಂಗ್ ಪರೀಕ್ಷೆಗೆ ತಯಾರಾಗಲು ರಾಜಸ್ಥಾನದ ಕೋಟಾದಲ್ಲಿರುವ ಇನ್‌ಸ್ಟಿಟ್ಯೂಟ್‌ನಲ್ಲಿ ಐಐಟಿ-ಜೆಎಎಂ ಓದುತ್ತಿದ್ದ. ಆದರೆ, ಮಾರ್ಚ್ 2021 ರಲ್ಲಿ, ಮೋಸ್ಮಾ ಗ್ರಾಮದಲ್ಲಿ ಚರಂಡಿ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಸಂಜಯ ಯಾದವಎಂಬ ವ್ಯಕ್ತಿಯ ಸಾವಿಗೀಡಾದ ಮತ್ತು ಘಟನೆಗೆ ಸಂಬಂಧಿಸಿದಂತೆ ಸೂರಜ ಸೇರಿದಂತೆ ಮೃತನ ತಂದೆ ಹೇಳಿಕೆ ಆಧಾರದ ಮೇಲೆ 11 ಜನರ ಮೇಲೆ ಪ್ರಕರಣವನ್ನು ದಾಖಲಿಸಲಾಯಿತು. .ಈ ಸಂಬಂಧ ಬಂಧಿತ ನಾಲ್ವರು ಆರೋಪಿಗಳ ಪೈಕಿ ಸೂರಜ್‌ನನ್ನು ಜೈಲಿಗೆ ಕಳುಹಿಸಲಾಗಿತ್ತು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement