ಹಾವೇರಿಯಲ್ಲಿ ಹಳೆಯ ಕಾಲದ್ದೆನ್ನಲಾದ ಹ್ಯಾಂಡ್ ಗ್ರೆನೇಡ್ ಪತ್ತೆ

ಹಾವೇರಿ: ಹಳೆಯ ಕಾಲದ್ದು ಎನ್ನಲಾದ ಹ್ಯಾಂಡ್ ಗ್ರೆನೇಡ್ (Hand Granide) ಹಾವೇರಿ ನಗರದ ನೇತಾಜಿ ನಗರದಲ್ಲಿ ಪತ್ತೆಯಾಗಿದೆ.
ಮನೆಕಟ್ಟುವ ಸಲುವಾಗಿ ಖಾಲಿ ಜಾಗ ಸ್ವಚ್ಛ ಮಾಡುತ್ತಿದ್ದಾಗ ತುಕ್ಕು ಹಿಡಿದ ಸ್ಥಿತಿಯಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರವಿ ಮುಷ್ಠಿ ಎಂಬುವವರಿಗೆ ಸೇರಿದ ಜಾಗದಲ್ಲಿ ಹ್ಯಾಂಡ್ ಗ್ರನೇಡ್ ಪತ್ತೆಯಾಗಿದೆ.
ದೊಂಬಿ ನಡೆದಾಗ, ಪೊಲೀಸರು, ಯುದ್ಧದ ಸಂದರ್ಭದಲ್ಲಿ ಬಳಸಲಾಗುವ ಹ್ಯಾಂಡ್ ಗ್ರೆನೇಡ್‌ ಆಗಿರಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಎಸ್​.ಪಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ: 625ಕ್ಕೆ 625 ಅಂಕ ಪಡೆದ ಅಂಕಿತಾ ರಾಜ್ಯಕ್ಕೆ ಟಾಪರ್, ಉಡುಪಿ ಜಿಲ್ಲೆಗೆ ಮೊದಲ ಸ್ಥಾನ

ನಿಮ್ಮ ಕಾಮೆಂಟ್ ಬರೆಯಿರಿ

advertisement