ನನ್ನ 3ನೇ ಅವಧಿಯಲ್ಲಿ, ವಿಶ್ವದ ಅಗ್ರ ಮೂರು ʼಆರ್ಥಿಕ ಶಕ್ತಿʼಗಳಲ್ಲಿ ಒಂದಾಗಲಿದೆ ಭಾರತ : ಯೇ ಮೋದಿ ಕಿ ಗ್ಯಾರಂಟಿ ಹೈ…

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆದ್ದು ಮೂರನೇ ಅವಧಿಗೆ ಪ್ರಧಾನಿಯಾಗಿ ಮರಳಿದರೆ, ಭಾರತವು ವಿಶ್ವದ ಅಗ್ರ ಮೂರು ʼಆರ್ಥಿಕ ಶಕ್ತಿʼಗಳಲ್ಲಿ ಒಂದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಬುಧವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ನವೀಕರಿಸಿದ ಐಟಿಪಿಒ ಸಂಕೀರ್ಣವನ್ನು ಉದ್ಘಾಟಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನನ್ನ ಮೂರನೇ ಅವಧಿಯಲ್ಲಿ ಭಾರತವು ಇತರ ಎರಡು ರಾಷ್ಟ್ರಗಳೊಂದಿಗೆ ಅಗ್ರ ಮೂರು ʼಆರ್ಥಿಕ ಶಕ್ತಿʼಯಾಗಿ ಹೆಮ್ಮೆಯಿಂದ ನಿಲ್ಲುತ್ತದೆ…ಯೇ ಮೋದಿ ಕಿ ಗ್ಯಾರಂಟಿ ಹೈ. (ಇದು ಮೋದಿಯವರ ಗ್ಯಾರಂಟಿ) ಎಂದು ವಾಗ್ದಾನ ಮಾಡಿದ್ದಾರೆ.
“2024 ರ ನಂತರ ಭಾರತದ ಅಭಿವೃದ್ಧಿಯ ನಡಿಗೆಯನ್ನು ತ್ವರಿತಗೊಳಿಸಲಾಗುವುದು ಎಂದು ನಾನು ಈ ದೇಶದ ಜನರಿಗೆ ಭರವಸೆ ನೀಡಲು ಬಯಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದರು. ಇದೇ ವೇಳೆ ಪ್ರಧಾನಿ ಮೋದಿ, ಕೆಲವರು ಒಳ್ಳೆಯ ಕೆಲಸಕ್ಕೂ ಕಾಮೆಂಟ್ ಮಾಡುವ ಮತ್ತು ಅದನ್ನು ನಿಲ್ಲಿಸುವ ಪ್ರವೃತ್ತಿ ಹೊಂದಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ವ್ಯಂಗ್ಯವಾಡಿದರು.

“ಕರ್ತವ್ಯ ಪಥ’ ನಿರ್ಮಾಣವಾಗುವಾಗ ಪತ್ರಿಕೆಗಳ ಮುಖಪುಟದಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಹಲವು ವಿಷಯಗಳು ಹರಿದಾಡುತ್ತಿದ್ದವು, ನ್ಯಾಯಾಲಯಗಳಲ್ಲಿಯೂ ಪ್ರಶ್ನೆಗಳನ್ನು ಎತ್ತಿದರು, ಆದರೆ ನಿರ್ಮಾಣವಾದಾಗ ಅದೇ ಜನ ಚೆನ್ನಾಗಿದೆ ಎಂದು ಹೇಳಿದರು. ಇದೇ ಟೋಳಿ ‘ಭಾರತ ಮಂಟಪ’ದಲ್ಲಿ ನಡೆಯುವ ಸೆಮಿನಾರ್‌ನಲ್ಲಿ ಉಪನ್ಯಾಸ ನೀಡಲು ಇಲ್ಲಿಗೆ ಬರುವ ಸಾಧ್ಯತೆಯೂ ಇದೆ ಎಂದು ಪ್ರಧಾನಿ ಹೇಳಿದರು.
ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ, ಭಾರತದ ಮೂಲಸೌಕರ್ಯವು ಬದಲಾಗುತ್ತಿದೆ… ಭಾರತದಲ್ಲಿ ವಿಶ್ವದ ಅತಿ ಎತ್ತರದ ರೈಲು ಸೇತುವೆ, ಅತಿ ಎತ್ತರದ ಹಾಗೂ ಉದ್ದದ ಸುರಂಗ ಭಾರತದಲ್ಲಿದೆ, ಅತಿ ಎತ್ತರದ ಮೋಟಾರು ರಸ್ತೆ, ಅತಿದೊಡ್ಡ ಕ್ರೀಡಾಂಗಣ, ಅತಿದೊಡ್ಡ ಪ್ರತಿಮೆ — ಇವೆಲ್ಲವೂ ಭಾರತದಲ್ಲಿದೆ ಎಂದು ಅವರು ಹೇಳಿದರು.

ಆರ್ಥಿಕ ಬೆಳವಣಿಗೆಯು ದೇಶದ ಆಕಾಂಕ್ಷೆಗಳಿಗೆ ಅನುಗುಣವಾಗಿದೆ ಎಂದು ಹೇಳಿದ ಪ್ರಧಾನಿ ಮೋದಿ, ನಮ್ಮ ಮೊದಲ ಅವಧಿಯಲ್ಲಿ, ಭಾರತವು ಆರ್ಥಿಕತೆಯಲ್ಲಿ ಜಾಗತಿಕವಾಗಿ 10ನೇ ಸ್ಥಾನದಲ್ಲಿತ್ತು, ನನ್ನ ಎರಡನೇ ಅವಧಿಯಲ್ಲಿ, ಇದು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಟ್ರ್ಯಾಕ್ ರೆಕಾರ್ಡ್ ಆಧಾರದ ಮೇಲೆ, ನಾನು ಮೂರನೇ ಅವಧಿಯಲ್ಲಿ ಭಾರತದ ಆರ್ಥಿಕತೆಯನ್ನು ವಿಶ್ವದ ಅಗ್ರ ಮೂರು ಸ್ಥಾನಗಳಲ್ಲಿ ಇರುವಂತೆ ಮಾಡುತ್ತೇನೆ ಎಂದು ಹೇಳಿದರು. ನನ್ನ ಮೂರನೇ ಅವಧಿಯಲ್ಲಿ, ಭಾರತವು ಅಗ್ರ ಮೂರು ಆರ್ಥಿಕತೆ ಶಕ್ತಿಯಾಗಿ ನಿಲ್ಲುತ್ತದೆ. ಮತ್ತು ಇದು ಮೋದಿಯವರ ಗ್ಯಾರಂಟಿಯಾಗಿದೆ ಎಂದು ಹೇಳಿದರು.
ಕಳೆದ ಒಂಬತ್ತು ವರ್ಷಗಳಲ್ಲಿ ತಮ್ಮ ಸರ್ಕಾರವು ಸಾಧಿಸಿದ 40,000 ಕಿಮೀ ರೈಲ್ವೆ ಮಾರ್ಗ ವಿದ್ಯುದ್ದೀಕರಿಸಿದ್ದಕ್ಕೆ ಹೋಲಿಸಿದರೆ ಕಳೆದ 60 ವರ್ಷಗಳಲ್ಲಿ ಭಾರತವು ಕೇವಲ 20,000 ಕಿಮೀ ರೈಲು ಮಾರ್ಗಗಳನ್ನು ವಿದ್ಯುದ್ದೀಕರಿಸುವಲ್ಲಿ ಯಶಸ್ವಿಯಾಗಿದೆ… ಈಗ ನಾವು ಪ್ರತಿ ತಿಂಗಳು 6 ಕಿಮೀ ಮೆಟ್ರೋ ಮಾರ್ಗವನ್ನು ಪೂರ್ಣಗೊಳಿಸುತ್ತಿದ್ದೇವೆ, ಸುಮಾರು 4 ಲಕ್ಷ ಕಿಮೀ ಸಮೀಪ ಗ್ರಾಮದ ರಸ್ತೆಗಳು ನಿರ್ಮಾಣವಾಗಿದೆ. 2014ರಲ್ಲಿ ದೆಹಲಿ ವಿಮಾನ ನಿಲ್ದಾಣದ ಸಾಮರ್ಥ್ಯ ವರ್ಷಕ್ಕೆ ಸುಮಾರು 5 ಕೋಟಿ ಇತ್ತು. ಈಗ 7.5 ಕೋಟಿಗೆ ಏರಿದೆ…ವಿಮಾನ ನಿಲ್ದಾಣಗಳ ಸಂಖ್ಯೆ 150ಕ್ಕೆ ತಲುಪಿದೆ ಎಂದು ಹೇಳಿದರು..

ಪ್ರಮುಖ ಸುದ್ದಿ :-   ಮನೆ ಮುಂದೆಯೇ ಗುಂಡು ಹಾರಿಸಿ ಬಿಜೆಪಿ ನಾಯಕ-ಖ್ಯಾತ ಉದ್ಯಮಿ ಗೋಪಾಲ ಖೇಮ್ಕಾ ಹತ್ಯೆ

ಇದಕ್ಕೂ ಮೊದಲು, ದೆಹಲಿಯಲ್ಲಿ ಡ್ರೋನ್ ಮೂಲಕ ಹೊಸ ಐಟಿಪಿಒ ಸಂಕೀರ್ಣ ‘ಭಾರತ್ ಮಂಟಪ’ವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಅವರು ಸೆಪ್ಟೆಂಬರ್‌ನಲ್ಲಿ ಜಿ 20 ನಾಯಕರ ಶೃಂಗಸಭೆಯನ್ನು ಆಯೋಜಿಸಲಿರುವ ಪುನರುಜ್ಜೀವನ ಮಾಡಿದ ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ (ಐಟಿಪಿಒ) ಸಂಕೀರ್ಣದಲ್ಲಿ ಪೂಜೆ ಸಲ್ಲಿಸಿದರು.
ಪ್ರಧಾನ ಮಂತ್ರಿಗಳ ಕಚೇರಿ (PMO) ಪ್ರಕಾರ, ಇಂಟರ್ನ್ಯಾಷನಲ್ ಎಕ್ಸಿಬಿಷನ್-ಕಮ್-ಕನ್ವೆನ್ಷನ್ ಸೆಂಟರ್ (IECC) ವಿಶ್ವದ ಪ್ರಮುಖ ಪ್ರದರ್ಶನ ಮತ್ತು ಸಮಾವೇಶ ಸಂಕೀರ್ಣಗಳಲ್ಲಿ ಒಂದಾಗಿದೆ.
ಪ್ರಗತಿ ಮೈದಾನದಲ್ಲಿ ನಿರ್ಮಿಸಲಾದ ಈ ಸೌಲಭ್ಯವನ್ನು ಸುಮಾರು 2,700 ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಯೋಜನೆಯಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಸುಮಾರು 123 ಎಕರೆ ಕ್ಯಾಂಪಸ್ ಹೊಂದಿದೆ. IECC ಸಂಕೀರ್ಣವನ್ನು ಭಾರತದ ಅತಿದೊಡ್ಡ ಮೈಸ್‌ (MICE, Meetings, Incentives, Conferences, and Exhibitions) ಗಮ್ಯಸ್ಥಾನವಾಗಿ ಅಭಿವೃದ್ಧಿಪಡಿಸಲಾಗಿದೆ.
ಇದು ಸಮಾವೇಶ ಕೇಂದ್ರ, ಪ್ರದರ್ಶನ ಸಭಾಂಗಣಗಳು ಮತ್ತು ಆಂಫಿಥಿಯೇಟರ್‌ಗಳು ಸೇರಿದಂತೆ ಅನೇಕ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ, ಸಭೆಗಳನ್ನು ಆಯೋಜಿಸಲು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಹೊಂದುವ ಮೋದಿಯವರ ದೃಷ್ಟಿಗೆ ಅನುಗುಣವಾಗಿ ಹೊಸ ಸೌಲಭ್ಯವನ್ನು ಸೇರಿಸಲಾಗಿದೆ ಎಂದು ಪಿಎಂಒ ಹೇಳಿದೆ.

ಪ್ರಮುಖ ಸುದ್ದಿ :-   ಇದೆಂಥ ಪವಾಡ...| ಒಂದೇ ಗೋಡೆ, 4 ಲೀಟರ್ ಬಣ್ಣ ಬಳಿಯಲು 233 ಕೆಲಸಗಾರರ ಬಳಕೆ...! ಶಾಲೆಯ ಗುತ್ತಿಗೆದಾರನ ಬಿಲ್ ವೈರಲ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement