ಕಾರವಾರ: ಕೇವಲ 35 ಗ್ರಾಂ ಬೆಳ್ಳಿಯಲ್ಲಿ ಸುಂದರವಾಗಿ ನಿರ್ಮಾಣವಾಯ್ತು ಭಾರತದ ಸಂಸತ್ ಭವನ…!

ಕಾರವಾರ : ಯಾವುದಕ್ಕೇ ಆಕೃತಿಯಾದರೂ ಆದರೂ ಅದಕ್ಕೆ ಕಲಾತ್ಮಕ ರೂಪ ಕೊಡುವುದು ಕಲಾವಿದನ ಚಾಣಾಕ್ಷತೆ. ಈಗ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅಕ್ಕಸಾಲಿಗರೊಬ್ಬರು  ಕೇವಲ 35 ಗ್ರಾಂ ಬೆಳ್ಳಿಯಲ್ಲಿ ಭರತದ ಸಂಸತ್ ಭವನ ನಿರ್ಮಾಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಈ ಅಪರೂಪದ ಕಲಾಕೃತಿಯನ್ನು ತಯಾರಿಸಿದವರು ಮಿಲಿಂದ್ ಉದಯಕಾಂತ್ ಅಣ್ವೇಕರ್ ಎಂಬವರು. ಕಾರವಾರ ನಗರದಲ್ಲಿ ಅಕ್ಕಸಾಲಿಗರಾಗಿ ಕೆಲಸ ಮಾಡುತ್ತಿರುವ ಅವರು ಕೇವಲ 35 ಗ್ರಾಂ ಬೆಳ್ಳಿಯಲ್ಲಿ ದೆಹಲಿಯ ಸಂಸತ್‌ ಭವನವನ್ನು ಅತೀ ಸೂಕ್ಷ್ಮವಾಗಿ ಕೆತ್ತುವ ಮೂಲಕ ತಮ್ಮ ಕಲಾತ್ಮಕತೆಯನ್ನು ತೋರಿದ್ದಾರೆ.

ಸ್ವಾತಂತ್ರ್ಯೋತ್ಸವದ ಅಮೃತ್ ಮಹೋತ್ಸವದ ನಿಮಿತ್ತ ಅವರು ದೆಹಲಿಯ ಸಂಸತ್ ಭವನವನ್ನು ಬೆಳ್ಳಿಯಲ್ಲಿ ತಯಾರು ಮಾಡುವ ಸಂಕಲ್ಪ ಮಾಡಿದ್ದರು. ಕೇವಲ 35 ಗ್ರಾಂ ಬೆಳ್ಳಿಯಲ್ಲಿ ಸಂಸತ್‌ ಭವನ ನಿರ್ಮಿಸಲು ಅವರು ಐದು ದಿನ ತೆಗೆದುಕೊಂಡಿದ್ದಾರಂತೆ. 2 ಇಂಚು ಅಗಲ, 1.5 ಇಂಚು ಎತ್ತರ ಇರುವ ಈ ಸಂಸತ್‌ ಭವನದ ಮೇಲೆ ರಾಷ್ಟ್ರಧ್ವಜ ಹಾರಾಡುವ ಕಲಾಕೃತಿ ರೂಪಿಸಿದ್ದಾರೆ.

ಈ ಹಿಂದೆ ಇವರು ಒಂದು ಗ್ರಾಂ ಗಳಿಗಿಂತಲೂ ಕಡಿವೆ (0.960 ಗ್ರಾಂ ಚಿನ್ನದಲ್ಲಿ) ಬಂಗಾರದಲ್ಲಿ 20 ಇಂಚು ಚೈನ್ ನಿರ್ಮಿಸಿ ಲಿಮ್ಕಾ ದಾಖಲೆಗೆ ಸೇರ್ಪಡೆಯಾಗಿದ್ದರು ಎಂಬುದು ಉಲ್ಲೇಖನೀಯ.
54 ಗ್ರಾಂ ತೂಕದಲ್ಲಿ ಬೆಳ್ಳಿ, ಬಂಗಾರ, ತಾಮ್ರ ಮಿಶ್ರಿತ ಕೇದಾರನಾಥ ದೇವಾಲಯದ ಪುಟ್ಟ ಕೃತಿ, ಎಂಟು ಗ್ರಾಂ ಚಿನ್ನದಲ್ಲಿ ಉಂಗುರದ ಮೇಲೆ ತಾಜ್‌ ಮಹಲ್‌, 1.3 ಸೆಂ.ಮೀ.ನ ಚಿನ್ನದ ಫ್ಯಾನ್‌, ಕೇವಲ 12 ಗ್ರಾಂ ಚಿನ್ನದಲ್ಲಿ ಹಂಪಿಯ ಕಲ್ಲಿನ ರಥ, 36 ಗ್ರಾಂ ಬೆಳ್ಳಿ ಬಳಸಿ ವಿಜಯ ರಥ ನಿರ್ಮಿಸಿದ್ದರು.

ಪ್ರಮುಖ ಸುದ್ದಿ :-   ಏರ್ ಇಂಡಿಯಾ ವಿಮಾನದಲ್ಲಿ 7 ಮಂದಿ ಅಸ್ವಸ್ಥ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement