ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಕಾಂಗ್ರೆಸ್ ಮುಖಂಡ ರಾಜಾ ಪಟೇರಿಯಾ ಬಂಧನ

ದಾಮೋಹ್: ಪ್ರಧಾನಿ ಕುರಿತು `ಸಂವಿಧಾನವನ್ನು ಉಳಿಸಲು ಮೋದಿಯನ್ನು ಕೊಲ್ಲಲು ಸಿದ್ಧರಾಗಿರಿ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಸಚಿವ ರಾಜಾ ಪಟೇರಿಯಾ ಅವರನ್ನು ಮಂಗಳವಾರ ಬೆಳಿಗ್ಗೆ ಬಂಧಿಸಲಾಗಿದೆ.
ಮಧ್ಯಪ್ರದೇಶ ರಾಜ್ಯದ ದಾಮೋಹ್ ಜಿಲ್ಲೆಯ ಹಟಾ ಪಟ್ಟಣದಲ್ಲಿರುವ ಅವರ ನಿವಾಸದಿಂದ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸ್ ತಂಡವು ಬಂಧನದ ಬಗ್ಗೆ ತಿಳಿಸಲು ಬೆಳಿಗ್ಗೆ 5:30 ರ ಸುಮಾರಿಗೆ ಅವರ ಮನೆಗೆ ತೆರಳಿತು. ಅವರನ್ನು ಬೆಳಿಗ್ಗೆ 7ರ ಸುಮಾರಿಗೆ ಪವಾಯ್ (ಪನ್ನಾ ಜಿಲ್ಲೆಯ) ಗೆ ಕರೆದೊಯ್ದರು” ಎಂದು ಪೊಲೀಸ್ ಹಟಾ ಉಪವಿಭಾಗಾಧಿಕಾರಿ ವೀರೇಂದ್ರ ಬಹದ್ದೂರ್ ಸಿಂಗ್ ತಿಳಿಸಿದರು.
ರಾಜಾ ಪಟೇರಿಯಾ ಅವರು, ಪನ್ನಾದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಈ ಕಾಮೆಂಟುಗಳನ್ನು ಮಾಡಿದ್ದರು.ಸೋಮವಾರ ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವ ವೀಡಿಯೊದಲ್ಲಿ ಪವಾಯಿಯಲ್ಲಿ ನಡೆದ ಸಮಾವೇಶದಲ್ಲಿ ಪಟೇರಿಯಾ ಕಾಂಗ್ರೆಸ್ ಕಾರ್ಯಕರ್ತರಿಗೆ ಮೋದಿ ಚುನಾವಣೆಯನ್ನು ಮುಗಿಸುತ್ತಾರೆ. ಮೋದಿಯವರು ಧರ್ಮ, ಜಾತಿ, ಭಾಷೆಯ ಆಧಾರದಲ್ಲಿ ಒಡೆಯುತ್ತಾರೆ. ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಭವಿಷ್ಯ ಅಪಾಯದಲ್ಲಿದೆ. ಸಂವಿಧಾನವನ್ನು ಉಳಿಸಬೇಕಾದರೆ ಮೋದಿಯನ್ನು ಕೊಲ್ಲಲು ಸಿದ್ಧರಾಗಿರಿ. ಅವರನ್ನು ಕೊಲ್ಲುವುದು ಅಂದರೆ ಸೋಲಿ ಎಂಬ ಅರ್ಥದಲ್ಲಿ ಎಂದು ಹೇಳಿದ್ದರು. ಬಳಿಕ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಲಾಗಿತ್ತು.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

ವೀಡಿಯೊ ವೈರಲ್‌ ಆಗಿ ಇದು ವಿವಾದಕ್ಕೆ ಕಾರಣವಾದ ನಂತರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದ ಪಟೇರಿಯಾ ಅವರು, ತಾನು ಗಾಂಧಿವಾದಿ ಎಂದು ಹೇಳಿಕೊಂಡಿದ್ದಾರೆ.”ನಾನು ಗಾಂಧೀಜಿಯ ಸಿದ್ಧಾಂತದಲ್ಲಿ ನಂಬಿಕೆಯುಳ್ಳವನು. ಆ ರೀತಿಯ ವ್ಯಕ್ತಿ ಕೊಲೆ ಅಥವಾ ಹಿಂಸೆಯ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ನನ್ನ ಟೀಕೆಗಳನ್ನು ವೀಡಿಯೊದಲ್ಲಿ ಸಂದರ್ಭಾನುಸಾರವಾಗಿ ಪ್ರಸ್ತುತಪಡಿಸಲಾಗಿದೆ. ನಾನು ಹೇಳಲು ಉದ್ದೇಶಿಸಿದ್ದು ಅವರನ್ನು ರಾಜಕೀಯವಾಗಿ ಸೋಲಿಸಬೇಕು ಎಂಬ ಅರ್ಥದಲ್ಲಿ ಮತ್ತು ಆ ಮೂಲಕ ಸಂವಿಧಾನವನ್ನು ರಕ್ಷಿಸಬೇಕು. ಆದಿವಾಸಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ನಿರುದ್ಯೋಗವನ್ನು ಕಡಿಮೆ ಮಾಡಲು, ಮೋದಿಯನ್ನು ಸೋಲಿಸುವುದು ಅಗತ್ಯವಾಗಿದೆ, ಅವರನ್ನು ಕೊಲ್ಲುವುದರ ಬಗ್ಗೆ ನನಗೆ ಯಾವುದೇ ಆಸಕ್ತಿ ಇಲ್ಲ; ಟೀಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ” ಎಂದು ಪಟೇರಿಯಾ ಅವರು ಸ್ಪಷ್ಟೆ ನೀಡಿದ್ದರು.

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement