ನಾಸಿಕ್‌ : ಮನೆಗೆ ನುಗ್ಗಿ ನಾಯಿ ಮೇಲೆ ದಾಳಿ ಮಾಡಿದ ಚಿರತೆ ; ಪ್ರತಿದಾಳಿ ಮಾಡಿ ಚಿರತೆಯನ್ನೇ ಹೆದರಿಸಿ ಓಡಿಸಿದ ಎರಡು ನಾಯಿಗಳು | ವೀಕ್ಷಿಸಿ

ನಾಸಿಕ್: ನಾಸಿಕ್‌ನ ಅಡ್ಗಾಂವ್ ಶಿವಾರ್ ಪ್ರದೇಶದಲ್ಲಿ ಚಿರತೆಯೊಂದು ನಾಯಿಯ ಮೇಲೆ ದಾಳಿ ಮಾಡಲು ಯತ್ನಿಸಿದೆ. ಆದರೆ ನಾಯಿಗಳೇ ಅದನ್ನು ಓಡಿಸಿದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮನೆಯೊಂದರ ಹುಲ್ಲುಹಾಸಿನ ಪ್ರದೇಶಕ್ಕೆ ಚಿರತೆಯೊಂದು ನಿಧಾನವಾಗಿ ನುಗ್ಗಿ ಮನೆಯ ಮುಖ್ಯ ಬಾಗಿಲಿನ ಹೊರಗೆ ಮಲಗಿದ್ದ ನಾಯಿಯ ಮೇಲೆ ದಾಳಿ ಮಾಡಲು ಯತ್ನಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಆದರೆ, ಮತ್ತೊಂದು ನಾಯಿ ಎಚ್ಚೆತ್ತುಕೊಂಡು ಚಿರತೆ ಮೇಲೆ ದಾಳಿ ಮಾಡಿದೆ. ಎರಡೂ ನಾಯಿಗಳು ಸೇರಿ ಚಿರತೆಯನ್ನು ಓಡಿಸಿವೆ. ಆದರೆ ಸ್ವಲ್ಪ ಹೊತ್ತಿನ ನಂತರ ನಂತರ ಚಿರತೆ ಮತ್ತೆ ಬರಳಿ ಬಂದಿದೆ. ಆದರೆ ನಾಯಿಗಳು ಮತ್ತೆ ಅದನ್ನು ಓಡಿಸಿವೆ. ಅದು ಪುನಃ ಬಂದಿದೆ, ಆದರೆ ಪುನಃ ನಾಯಿಗಳನ್ನು ಅದನ್ನು ಅಟ್ಟಿವೆ.
ಅಡಗಾಂವ್ ಶಿವಾರ್ ಪ್ರದೇಶದಲ್ಲಿ ಚಿರತೆ ನುಗ್ಗಿದ ಬಂಗಲೆಯ ಕಾಂಪೌಂಡ್ ಪ್ರದೇಶ ಪ್ರಭಾಕರ ಮಾವುಡೆ ಎಂಬುವವರಿಗೆ ಸೇರಿದ್ದು, ಚಿರತೆ ಬಂಗಲೆಯ ಕಾಂಪೌಂಡ್‌ಗೆ ನುಗ್ಗಿರುವುದನ್ನು ತೋರಿಸಲಾಗಿದೆ. ಚಿರತೆ ನಾಯಿಯ ಮೇಲೆ ದಾಳಿ ಮಾಡಿದೆ. ಆದರೆ ನಾಯಿಗಳು ಚಿರತೆಯ ಮೇಲೆ ದಾಳಿ ಮಾಡಿ ಓಡಿಸಿವೆ ಎಂದು ಅರಣ್ಯ ಇಲಾಖೆ ಅಧಿಕಾರಿ ವೃಶಾಲಿ ಗಾದೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಹೈದರಾಬಾದ್ ಮಳೆ: ಗೋಡೆ ಕುಸಿದು 7 ಕಾರ್ಮಿಕರು ಸಾವು
https://twitter.com/i/status/1684120580742848512

ಚಿರತೆ ನಿವಾಸದ ಸಮೀಪದ ಹೊಲ ಪ್ರದೇಶದಿಂದ ಬಂದಿರುವ ಸಾಧ್ಯತೆ ಇದೆ, ಅರಣ್ಯ ಇಲಾಖೆ ಸಹಕಾರದಲ್ಲಿ ಬೋನು ಹಾಕುವ ಪ್ರಕ್ರಿಯೆ ಆರಂಭಿಸಿದ್ದೇವೆ. ಆದರೆ, ಚಿರತೆ ಈ ಪ್ರದೇಶದಲ್ಲಿ ಯಾವುದೇ ನಾಗರಿಕರಿಗೆ ಹಾನಿ ಮಾಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ವೃಶಾಲಿ ಗಾದೆ ಹೇಳಿದ್ದಾರೆ.
ಮತ್ತೊಂದು ಘಟನೆಯಲ್ಲಿ ಬುಧವಾರ ಸಂಜೆ ಚಿರತೆಯೊಂದು ಮುಂಬೈನ ಗೋರೆಗಾಂವ್ ಜಿಲ್ಲೆಯ ಫಿಲ್ಮ್ ಸಿಟಿಯಲ್ಲಿ ಮರಾಠಿ ಟಿವಿ ಧಾರಾವಾಹಿ “ಸುಖ್ ಮ್ಹಂಜೆ ನಕ್ಕಿ ಕೇ ಆಸ್ತಾ” ಸೆಟ್‌ಗೆ ನುಗ್ಗಿ ಭೀತಿ ಉಂಟುಮಾಡಿತ್ತು.
ಭಯಭೀತರಾದ ಜನರು ಸುರಕ್ಷತೆಗಾಗಿ ಓಡುತ್ತಿರುವಾಗ ಕಾಡು ಬೆಕ್ಕು ಸೆಟ್‌ನ ಒಂದು ನಿರ್ಮಾಣದ ಮೇಲೆ ನಡೆದಾಡುತ್ತಿರುವುದನ್ನು ವೈರಲ್ ವೀಡಿಯೊ ತೋರಿಸಿದೆ. ಕೆಲವರು ಈ ದೃಶ್ಯಗಳನ್ನು ರೆಕಾರ್ಡ್ ಮಾಡಿದ್ದಾರೆ.

2.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement