75 ಕೋಟಿ ದಾಟಿದ ಭಾರತದ ಕೋವಿಡ್‌-19 ಲಸಿಕೆ ನಿರ್ವಹಣೆ..! :ಅಭೂತಪೂರ್ವ ವೇಗ ಎಂದ ಡಬ್ಲ್ಯೂಎಚ್‌ಒ

ನವದೆಹಲಿ: ಕೋವಿಡ್ -19 ವಿರುದ್ಧದ ಭಾರತದ ಹೋರಾಟದಲ್ಲಿ ಒಂದು ಮಹತ್ವದ ಸಾಧನೆಯಲ್ಲಿ, ದೇಶದ ಕೋವಿಡ್ -19 ಲಸಿಕೆ ಡೋಸ್‌ ನೀಡಿಕೆಯು ಸೋಮವಾರ 75 ಕೋಟಿ ಗಡಿ ದಾಟುವ ಮೂಲಕ ಭಾರತ ಮತ್ತೊಂದು ಮೈಲಿಗಲ್ಲು ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯ ಅವರು ಭಾರತದ 75 ನೇ ಸ್ವಾತಂತ್ರ್ಯದ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಮೈಲಿಗಲ್ಲನ್ನು ಕೂಡ ಇದಕ್ಕೆ ಜೋಡಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮಂತ್ರದೊಂದಿಗೆ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನವು ಹೊಸ ಆಯಾಮಗಳನ್ನು ಸೃಷ್ಟಿಸುತ್ತಿದೆ. #ಆಜಾದಿಕಾ ಅಮೃತ್ ಮಹೋತ್ಸವ, 75 ನೇ ಸ್ವಾತಂತ್ರ್ಯ ದಿನದಲ್ಲಿ, ದೇಶವು 75 ಕೋಟಿ ಡೋಸ್ ಲಸಿಕೆಯನ್ನು ದಾಟಿದೆ” ಎಂದು ಆರೋಗ್ಯ ಸಚಿವ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಅಭೂತಪೂರ್ವ ವೇಗ” ದೊಂದಿಗೆ ಈ ಮೈಲಿಗಲ್ಲು ಸಾಧಿಸಿದ ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಅಭಿನಂದಿಸಿದೆ.
ಅಭೂತಪೂರ್ವ ವೇಗದಲ್ಲಿ ಕೋವಿಡ್ -19 ಲಸಿಕೆಯನ್ನು ಹೆಚ್ಚಿಸಿದ್ದಕ್ಕಾಗಿ ಡಬ್ಲ್ಯುಎಚ್‌ಒ ಭಾರತವನ್ನು ಅಭಿನಂದಿಸಿದೆ. ಮೊದಲ 10 ಕೋಟಿ ಡೋಸ್‌ಗಳನ್ನು ನಿರ್ವಹಿಸಲು 85 ದಿನಗಳನ್ನು ತೆಗೆದುಕೊಂಡರೆ, ಭಾರತ ಕೇವಲ 65 ಕೋಟಿಯಿಂದ 75 ಕೋಟಿ ಡೋಸ್‌ಗಳನ್ನು ತಲುಪಲು ಕೇವಲ 13 ದಿನಗಳನ್ನು ತೆಗೆದುಕೊಂಡಿದೆ ಎಂದು.ವಿಶ್ವ ಆರೋಗ್ಯ ಸಂಸ್ಥೆ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕರಾದ ಡಾ. ಪೂನಂ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement