ಕೊಚ್ಚಿನ್ : 2017 ರಲ್ಲಿ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಮಲೆಯಾಳಂ ನಟ ದಿಲೀಪ (A8) ಅವರನ್ನು ಎರ್ನಾಕುಲಂನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಸೋಮವಾರ (ಡಿಸೆಂಬರ್ 8) ದೋಷಮುಕ್ತಗೊಳಿಸಿದೆ.
ಎಂಟು ವರ್ಷಗಳ ಕಾಲ ನಡೆದ ಈ ಸುದೀರ್ಘ ವಿಚಾರಣೆಗೆ ತೆರೆಬಿದ್ದಿದ್ದು, ನ್ಯಾಯಾಧೀಶೆ ಶ್ರೀಮತಿ ಹನಿ ಎಂ. ವರ್ಗೀಸ್ ಅವರು ಬಹಿರಂಗ ನ್ಯಾಯಾಲಯದಲ್ಲಿ ತೀರ್ಪನ್ನು ಪ್ರಕಟಿಸಿದರು. ಪ್ರಕರಣದ ಆರೋಪಿಯಾಗಿದ್ದ ದಿಲೀಪ್ (A8) ಅವರನ್ನು ನ್ಯಾಯಾಲಯವು ದೋಷಮುಕ್ತಗೊಳಿಸಿದೆ.
ದಿಲೀಪ ಜೊತೆಗೆ, A7, A9, ಮತ್ತು A15 ಆರೋಪಿಗಳನ್ನೂ ಸಹ ನ್ಯಾಯಾಲಯವು ಬಿಡುಗಡೆ ಮಾಡಿದೆ, ಆದರೆ ನ್ಯಾಯಾಲಯವು ಪ್ರಮುಖ ಆರೋಪಿ ಸುನೀಲ್ ಎನ್‌ಎಸ್ ಅಲಿಯಾಸ್ ಪಲ್ಸರ್ ಸುನಿ ಸೇರಿದಂತೆ ಒಂದರಿಂದ ಆರನೇ ಆರೋಪಿಗಳನ್ನು ತಪ್ಪಿತಸ್ಥರು ಎಂದು ಘೋಷಿಸಿದೆ.
ಇವರು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 120 ಬಿ, 340, 354, 366, 354 ಬಿ, ಮತ್ತು 376 ಡಿ ಅಡಿಯಲ್ಲಿ ಅಪರಾಧ ಎಸಗಿದ್ದಾರೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇವರ ಶಿಕ್ಷೆಯ ಪ್ರಮಾಣವನ್ನು ಡಿಸೆಂಬರ್ 12 ರಂದು ಪ್ರಕಟಿಸಲಾಗುತ್ತದೆ ಎಂದು ಲೈವ್ ಲಾ ವರದಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ
ಈ ನಟಿ ಮೇಲಿನ ಹಲ್ಲೆ ಪ್ರಕರಣವು ಫೆಬ್ರವರಿ 17, 2017 ರಂದು ಕೊಚ್ಚಿನ್ ನಗರದ ಹೊರವಲಯದಲ್ಲಿ ಚಲಿಸುತ್ತಿದ್ದ ವಾಹನದಲ್ಲಿ ನಟಿಯನ್ನು ಅಪಹರಿಸಿ ಲೈಂಗಿಕವಾಗಿ ದೌರ್ಜನ್ಯ ಎಸಗಲಾಗಿತ್ತು. ಆರೋಪಿಗಳು ಇದರ ವೀಡಿಯೊ ಚಿತ್ರೀಕರಣ ಮಾಡಿದ್ದರು ಎನ್ನಲಾಗಿದೆ. ನಟ ದಿಲೀಪ ಅಪರಾಧ ಪಿತೂರಿ ಮಾಡಿದ ಆರೋಪವನ್ನು ಎದುರಿಸುತ್ತಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ