ಭಾಗವತ ಕಥಾ ನಾಟಕದಲ್ಲಿ ರಾಕ್ಷಸನ ಪಾತ್ರ ಮಾಡಿದ್ದ ಬಾಲಕನ ಕತ್ತು ಸೀಳಿದ ಕಾಳಿದೇವಿ ಪಾತ್ರ ಮಾಡಿದ್ದ ಮತ್ತೊಬ್ಬ ಬಾಲಕ…!

ಕಾನ್ಪುರ : ಉತ್ತರ ಪ್ರದೇಶದ ಕಾನ್ಪುರದ ಹಳ್ಳಿಯೊಂದರಲ್ಲಿ ಭಾಗವತ ಕಥಾ ನಾಟಕದ ಪ್ರದರ್ಶನದ ವೇಳೆ ಕಾಳಿ ದೇವಿ ಪಾತ್ರ ಮಾಡಿದ್ದ 14 ವರ್ಷದ ಬಾಲಕ ಮತ್ತೊಬ್ಬ 11 ವರ್ಷದ ಬಾಲಕನ ಕತ್ತು ಸೀಳಿದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. .
ಬುಧವಾರ ಬಂಭಿಯಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಭಾಷ್ ಸೈನಿ ಎಂಬವರ ಮನೆಯವರು ತಮ್ಮ ಮನೆಯಲ್ಲಿ ಆಯೋಜಿಸಿದ್ದ ಭಾಗವತ ಕತೆಯ ನಾಟಕ ಪ್ರದರ್ಶನದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಅವರ ಮನೆಯಲ್ಲಿ ಹಲವು ದಿನಗಳಿಂದ ಭಾಗವತ ಕಥೆ ನಡೆಯುತ್ತಿತ್ತು.
ಬುಧವಾರ ಸಂಜೆ, ಕಾರ್ಯಕ್ರಮದ ಭಾಗವಾಗಿ, ಮಕ್ಕಳು ವಿವಿಧ ಧಾರ್ಮಿಕ ಪಾತ್ರಗಳನ್ನು ಅಭಿನಯಿಸುವ ಟ್ಯಾಬ್ಲೋವನ್ನು ತೆಗೆಯುತ್ತಿದ್ದರು.

ಕಾಳಿ ದೇವಿಯ ಪಾತ್ರಧಾರಿ 14 ವರ್ಷದ ಬಾಲಕ 11 ವರ್ಷ ವಯಸ್ಸಿನ ‘ರಾಕ್ಷಸ’ವನ್ನು ಅಣಕು-ಸಂಹಾರ ಮಾಡುತ್ತಿದ್ದಾಗ, ಆತನ ಚಾಕು ಕಿರಿಯ ಹುಡುಗನ ಕುತ್ತಿಗೆಗೆ ತಗುಲಿ ಮಾರಣಾಂತಿಕವಾಗಿ ಗಾಯಗೊಳಿಸಿತು.
ಕಾರ್ಯಕ್ರಮವನ್ನು ಆಯೋಜಿಸಿದ್ದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಗಾಯಗೊಂಡ ಹುಡುಗನನ್ನು ತಕ್ಷಣವೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
ಕೃತ್ಯಕ್ಕೆ ಮೊಂಡಾದ ತ್ರಿಶೂಲವನ್ನು ಬಳಸುವಂತೆ ಬಾಲಕನಿಗೆ ಹೇಳಲಾಗಿತ್ತು, ಆದರೆ ಆದರೆ ಅದು ಸಿಗದಿದ್ದ ಕಾರಣ ಕಾಳಿ ಪಾತ್ರ ಮಾಡಿದ್ದ ಬಾಲಕ ತ್ರಿಶೂಲದ ಬದಲಿಗೆ ಬದಲಿಗೆ ಚಾಕು ತಂದಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ ತೊರೆದವರನ್ನು 'ಹೇಡಿಗಳು' ಎಂದು ಕರೆದ ರಾಹುಲ್ ಗಾಂಧಿ ; ಅವರೆಲ್ಲ ನಿಮ್ಮ ಸ್ನೇಹಿತರಾಗಿದ್ರು ಎಂದು ಕಾಲೆಳೆದ ಖರ್ಗೆ !

ಪೊಲೀಸರು 14 ವರ್ಷದ ಬಾಲಕನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮೃತ ಬಾಲಕನ ತಂದೆ ಬಬ್ಲು ಕಶ್ಯಪ ಅವರು ನೀಡಿದ ದೂರಿನ ಮೇರೆಗೆ ಆರೋಪಿ ಬಾಲಕನ ವಿರುದ್ಧ ಐಪಿಸಿಯ ಸೆಕ್ಷನ್ 304 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕಾರ್ಯಕ್ರಮದ ಆಯೋಜಕರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಅಜಯಕುಮಾರ ತ್ರಿವೇದಿ ಶುಕ್ರವಾರ ತಿಳಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement