ಕರ್ನಾಟಕದಲ್ಲಿ ಸತತ ಎರಡನೇ ದಿನವೂ 40 ಸಾವಿರಕ್ಕಿಂತ ಕಡಿಮೆ ಕೊರೊನಾ ಸೋಂಕು, 480 ಸಾವು

ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ ಉಲ್ಬಣ ಮುಂದುವರೆದಿದ್ದು ಮಂಗಳವಾರ ರಾಜ್ಯದಲ್ಲಿ 480 ಜನರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 39,510 ಹೊಸ ಕೇಸ್ ಪತ್ತೆಯಾಗಿದ್ದು ಸತತ ಎರಡು ದಿನಗಳಿಂದ 40 ಸಾವಿರಕ್ಕಿಂತ ಕಡಿಮೆ ದಾಖಲಾಗಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 20,13,193 ಕ್ಕೆ ಏರಿಕೆಯಾಗಿದೆ, ಒಟ್ಟು ಸಾವಿನ ಸಂಖ್ಯೆ 19852ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಮಂಗಳವಾರ 15879 ಜನರಿಗೆ ಕೊರೊನಾಸೋಂಕು ದಾಖಲಾಗಿದ್ದು ಸೋಮವಾರಕ್ಕಿಂತ ಕಡಿಮೆ ದಾಖಲಾಗಿದೆ. 259 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಬಿಟ್ಟಿದ್ದಾರೆ. ಬೆಂಗಲೂರಿನಲ್ಲಿ ಈವರೆಗೆ 9,83,519 ಜನರಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರಲ್ಲಿ ಈವರೆಗೆ ಒಟ್ಟು 8690 ಜನರು ಮೃತಪಟ್ಟಿದ್ದಾರೆ.
ರಾಜ್ಯಾದ್ಯಂತ ಇದೇ ಸಮಯದಲ್ಲಿ 22584 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು, ಈವರೆಗೆ ಒಟ್ಟು 1405869 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ.
ಜಿಲ್ಲಾವಾರು ಮಾಹಿತಿಯನ್ನು ಪಿಡಿಎಫ್‌ ಫಾರ್ಮಾಟ್‌ನಲ್ಲಿ ಕೊಡಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement