ಬೆಳಗಾವಿ : ಬೆಳಗಾವಿ : ಇಂದು, ಶನಿವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಜಿಲ್ಲೆಯ ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದ ಆರೋಪಿಗೆ ಪೊಲೀಸರು ಗುಂಡಿಹಾರಿಸಿದ ವರದಿಯಾಗಿದೆ..
ಪೊಲೀಸರು ಆರೋಪಿ ರಮೇಶ ಕಿಲಾರಿ ಎಂಬಾತನನ್ನು ಹಿಡಿಯಲು ಪ್ರಯತ್ನಿಸಿದಾಗ, ಆತ ಸಿಪಿಸಿ ಷರೀಫ್ ದಫೇದಾರ್ ಅವರನ್ನು ಚಾಕುವಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ. ಆತನಿಗೆ ಎಚ್ಚರಿಕೆ ನೀಡಲು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಆದರೆ ಆರೋಪಿ ಅಲ್ಲಿದ್ದ ಇತರ ಪೊಲೀಸರ ಮೇಲೆ ದಾಳಿ ಮಾಡಲು ಮುಂದಾಗಿದ್ದಾನೆ. ಆತ್ಮರಕ್ಷಣೆಗಾಗಿ, ಪಿಎಸ್ಐ ಪ್ರವೀಣ ಆರೋಪಿಯ ಕಾಲಿಗೆ ಗುಂಡು ಹಾರಿಸಬೇಕಾಯಿತು. ಗಾಯಗೊಂಡ ಇಬ್ಬರನ್ನೂ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸ್ಥಳಾಂತರಿಸಲಾಗಿದೆ. ಆರೋಪಿಯು 4 ಡಕಾಯಿತಿ, 1 ದರೋಡೆ, 1 ಸಾಮೂಹಿಕ ಅತ್ಯಾಚಾರ, 1 ಶಸ್ತ್ರಾಸ್ತ್ರ ಪ್ರಕರಣ ಮತ್ತು ಇತರ 3 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಲಾಗಿದೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ