ವಾಯುಪಡೆಯ ಫೈಟರ್ ಪೈಲಟ್ ಆಗಿ ಸಾನಿಯಾ ಮಿರ್ಜಾ ಆಯ್ಕೆ : ಈ ಹುದ್ದೆಗೆ ಆಯ್ಕೆಯಾದ ದೇಶದ ಮೊದಲ ಮುಸ್ಲಿಂ ಮಹಿಳೆ

ನವದೆಹಲಿ: ಭಾರತೀಯ ವಾಯುಪಡೆಯಲ್ಲಿ (ಐಎಎಫ್) ಫೈಟರ್ ಪೈಲಟ್ ಆಗಲು ಆಯ್ಕೆಯಾಗಿರುವ ಉತ್ತರಪ್ರದೇಶದ ಮಿರ್ಜಾಪುರದ ಟಿವಿ ಮೆಕ್ಯಾನಿಕ್ ಪುತ್ರಿ ಸಾನಿಯಾ ಮಿರ್ಜಾ ಅವರು ದೇಶದ ಮೊದಲ ಮುಸ್ಲಿಂ ಮಹಿಳಾ ಫೈಟರ್ ಪೈಲಟ್ ಮತ್ತು ರಾಜ್ಯದ ಮೊದಲ ಐಎಎಫ್ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.
ಮಿರ್ಜಾಪುರ ದೇಹತ್ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಜಸೋವರ್ ಗ್ರಾಮದ ನಿವಾಸಿಯಾಗಿರುವ ಸಾನಿಯಾ ಮಿರ್ಜಾ ಅವರು ಎನ್‌ಡಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಈ ಸ್ಥಾನ ಪಡೆದುಕೊಂಡಿದ್ದಾರೆ. ಹಿಂದಿ ಮಾಧ್ಯಮ ಶಾಲೆಯಲ್ಲಿ ಓದಿರುವ ಮಿರ್ಜಾ ಅವರು ಡಿಸೆಂಬರ್ 27 ರಂದು ಪುಣೆಯ ಎನ್‌ಡಿಎ ಖಡಕ್ವಾಸ್ಲಾಗೆ ಸೇರಲಿದ್ದಾರೆ.
ಆಕೆಯ ತಂದೆ ಶಾಹಿದ್ ಅಲಿ ಪ್ರಕಾರ, ಮಿರ್ಜಾ ಅವರು ದೇಶದ ಮೊದಲ ಫೈಟರ್ ಪೈಲಟ್ ಅವ್ನಿ ಚತುರ್ವೇದಿ ಅವರನ್ನು ತನ್ನ ರೋಲ್ ಮಾಡೆಲ್ ಎಂದು ಪರಿಗಣಿಸುತ್ತಾರೆ. ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆಯಾದ ದೇಶದ ಎರಡನೇ ಹುಡುಗಿ ಸಾನಿಯಾ” ಎಂದು ಆಕೆಯ ತಂದೆ ತಿಳಿಸಿದ್ದಾರೆ.

ಮಿರ್ಜಾ ತನ್ನ ಯಶಸ್ಸಿಗೆ ತನ್ನ ಹೆತ್ತವರು ಮತ್ತು ತನ್ನ ಅಕಾಡೆಮಿ ಕಾರಣವೆಂದು ಹೇಳಿದ್ದಾರೆ. ಮೊದಲ ಪ್ರಯತ್ನದಲ್ಲಿ ಸೀಟು ಪಡೆಯಲು ನನಗೆ ಸಾಧ್ಯವಾಗಲಿಲ್ಲ ಆದರೆ ನನ್ನ ಎರಡನೇ ಪ್ರಯತ್ನದಲ್ಲಿ ನಾನು ಸೀಟು ಪಡೆದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಅವರ ತಾಯಿ ತಬಸ್ಸುಮ್ ಮಿರ್ಜಾ ಅವರು ನಮ್ಮ ಮಗಳು ತನ್ನ ಸಾಧನೆಯಿಂದ ಇಡೀ ಗ್ರಾಮಕ್ಕೆ ಹೆಮ್ಮೆ ತಂದಿದ್ದಾಳೆ ಎಂದು ತಿಳಿಸಿದ್ದಾರೆ.
ಮಿರ್ಜಾ ಅವರು ತಮ್ಮ ಹಳ್ಳಿಯಲ್ಲೇ ಪಂಡಿತ್ ಚಿಂತಾಮಣಿ ದುಬೆ ಇಂಟರ್ ಕಾಲೇಜಿನಲ್ಲಿ ಪ್ರಾಥಮಿಕದಿಂದ 10ನೇ ತರಗತಿ ವರೆಗೆ ಓದಿದ್ದಾರೆ. ಬಳಿಕ ನಗರದ ಗುರುನಾನಕ್ ಬಾಲಕಿಯರ ಇಂಟರ್ ಕಾಲೇಜಿಗೆ ಹೋದಳು. ಅವರು ಉತ್ತರ ಪ್ರದೇಶದ 12 ನೇ ತರಗತಿ ಬೋರ್ಡ್‌ ಪರೀಕ್ಷೆಯಲ್ಲಿ ಜಿಲ್ಲಾ ಟಾಪರ್ ಆಗಿದ್ದರು.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ 2022 ರ ಪರೀಕ್ಷೆಯಲ್ಲಿ ಪುರುಷ ಮತ್ತು ಮಹಿಳೆ ಸೇರಿದಂತೆ ಒಟ್ಟು 400 ಸೀಟುಗಳಿದ್ದವು. ಇದರಲ್ಲಿ ಮಹಿಳೆಯರಿಗೆ 19 ಸೀಟುಗಳಿದ್ದು, ಫೈಟರ್ ಪೈಲಟ್‌ಗಳಿಗೆ ಎರಡು ಸೀಟುಗಳನ್ನು ಮೀಸಲಿಡಲಾಗಿತ್ತು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಚುನಾವಣಾ ಆಯೋಗದಿಂದ 8,889 ಕೋಟಿ ರೂ.ಮೌಲ್ಯದ ವಸ್ತುಗಳ ವಶ

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement