ಗಾಯಗೊಂಡಿದ್ದ ತನ್ನನ್ನು ರಕ್ಷಿಸಿದ ವ್ಯಕ್ತಿಯನ್ನು ಕಂಡಾಕ್ಷಣವೇ ಮೃಗಾಲಯದಲ್ಲಿಯೇ ಕುಣಿದು ಕುಪ್ಪಳಿಸಿದ ಕ್ರೇನ್‌ ಪಕ್ಷಿ: ಹೃದಯಸ್ಪರ್ಷಿ ವೀಡಿಯೊ ನೋಡಿ

ಉತ್ತರ ಪ್ರದೇಶದ ವ್ಯಕ್ತಿ ಮತ್ತು ಸರಸ್ ಕ್ರೇನ್ ಹಕ್ಕಿಯ ನಡುವಿನ ಅನನ್ಯ ಸ್ನೇಹವು ಕೆಲವು ವಾರಗಳ ಹಿಂದೆ ಭಾರೀ ಸುದ್ದಿ ಮಾಡಿತ್ತು. ಅಮೇಥಿಯ ವ್ಯಕ್ತಿ ಮೊಹಮ್ಮದ್ ಆರಿಫ್ ಅವರು ಹೊಲದಲ್ಲಿ ಗಾಯಗೊಂಡು ಬಿದ್ದಿದ್ದ ಅಳಿವಿನಂಚಿನಲ್ಲಿರುವ ಪಕ್ಷಿಯನ್ನು ರಕ್ಷಿಸಿದ್ದರು ಹಾಗೂ ಕೆಲವು ತಿಂಗಳುಗಳ ಕಾಲ ಅದನ್ನು ಆರೈಕೆ ಮಾಡಿದ್ದರು. ನಂತರ ಅದನ್ನು ಸಾಕಿದ್ದರು. ಕ್ರೇನ್ ಶೀಘ್ರದಲ್ಲೇ ಆರಿಫ್ ಇರುವ ಪಟ್ಟಣದಾದ್ಯಂತ ಅವರು ಹೋದೆಲ್ಲಲ್ಲ ಅವರನ್ನು ಹಿಂಬಾಲಿಸಲು ಪ್ರಾರಂಭಿಸಿತು, ಅವರು ಬೈಕ್‌ನಲ್ಲಿ ಹೋದರೂ ಹಾರುತ್ತ ಅವರನ್ನು ಹಿಂಬಾಲಿಸುತ್ತಿತ್ತು. ಮತ್ತು ಅವರ ವೀಡಿಯೊಗಳು ವೈರಲ್ ಆದವು.
ಈ ವಿಷಯ ತಿಳಿದ ಅರಣ್ಯ ಇಲಾಖೆ ಆರೀಫ್‌ನಿಂದ ಪಕ್ಷಿಯನ್ನು ಬೇರ್ಪಡಿಸಿ ಕಾನ್ಪುರ ಮೃಗಾಲಯಕ್ಕೆ ಕಳುಹಿಸಿತು ಹಾಗೂ ಆರಿಫ್‌ ಅವರಿಗೆ ನೋಟಿಸ್ ಕೂಡ ಕಳುಹಿಸಿದೆ. ಆದರೆ ಅವರ ಸ್ನೇಹದ ಸುತ್ತಲಿನ ಝೇಂಕಾರ ಮಾತ್ರ ಸಾಯಲಿಲ್ಲ ಮತ್ತು ಕೆಲವರು ಆರಿಫ್ ಮತ್ತು ಕ್ರೇನ್ ಅನ್ನು ಮತ್ತೆ ಒಂದಾಗಿಸಲು ಏನಾದರೂ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದ್ದರು.ಇದೀಗ, ಹದಿನೈದು ದಿನಗಳ ನಂತರ ಆರಿಫ್ ಅವರನ್ನು ನೋಡಿದ ಹಕ್ಕಿಯ ಪ್ರತಿಕ್ರಿಯೆಯ ಹೃದಯಸ್ಪರ್ಶಿ ವೀಡಿಯೊ ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮತ್ತೆ ವೈರಲ್‌ ಆಗಿದೆ. ಕಾನ್ಪುರ್ ಮೃಗಾಲಯಕ್ಕೆ ಆರಿಫ್ ಭೇಟಿ ನೀಡಿದ ಸಂದರ್ಭದಲ್ಲಿ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿದ್ದು, ಕ್ರೇನ್ ಅನ್ನು ಪಂಜರದಲ್ಲಿ ಇರಿಸಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

ಕೈಲಾಶನಾಥ ಯಾದವ್ ಎಂಬವರು ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಇಂದು, ಮತ್ತೊಮ್ಮೆ, ಮೂಕಪಕ್ಷಿ ಕ್ರೇನ್ ತನಗೆ ಜೀವನ ನೀಡಿದ ತನ್ನ ಸ್ನೇಹಿತ ಆರಿಫ್‌ ಅವರನ್ನು ನೋಡಿ ಚಿಲಿಪಿಲಿ ಮಾಡಿತು, ಆದರೆ ಇಬ್ಬರೂ ಅಸಹಾಯಕರಾಗಿದ್ದರು ಮತ್ತು ಒಬ್ಬರನ್ನೊಬ್ಬರು ಮುಟ್ಟಲು ಸಾಧ್ಯವಾಗಲಿಲ್ಲ ಎಂದು ಯಾದವ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಎಸ್‌ಪಿ ಶಾಸಕ ಅಮಿತಾಭ್ ವಾಜಪೇಯಿ ಎಂದು ಬಳಕೆದಾರರು ಹೇಳಿಕೊಂಡ ವ್ಯಕ್ತಿಯೊಂದಿಗೆ ಆರಿಫ್ ಪಕ್ಷಿಯ ಆವರಣದ ಹೊರಗೆ ನಿಂತಿರುವುದನ್ನು ವೀಡಿಯೊ ತೋರಿಸುತ್ತದೆ. ಆರಿಫ್‌ ಅವರನ್ನು ನೀಡಿದ ತಕ್ಷಣವೇ ಸರಸ್‌ ಕ್ರೇನ್‌ ಸಂಭ್ರಮದಿಂದ ಕುಣಿಯುತ್ತಿರುವುದನ್ನು ಕಾಣಬಹುದು. ಹಕ್ಕಿ ತನ್ನ ರೆಕ್ಕೆಗಳನ್ನು ಸಹ ಹರಡುತ್ತದೆ ಮತ್ತು ಆರಿಫ್‌ ಬಳಿ ಬರಲು ದಾರಿ ಹುಡುಕಲು ಪ್ರಯತ್ನಿಸುವುದನ್ನು ನೋಡಬಹುದು.
ಟ್ವಿಟ್ಟರ್ ಬಳಕೆದಾರರು ಈ ವೀಡಿಯೊವನ್ನು ನೋಡಿ ಭಾವುಕರಾದರು ಮತ್ತು ಕ್ರೇನ್‌ ಅನ್ನು ಮೃಗಾಲಯದಿಂದ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.

ಕ್ರೇನ್ ಅನ್ನು ಆರಿಫ್‌ಗೆ ಹಿಂತಿರುಗಿಸಲು ವಿನಂತಿಸುತ್ತೇನೆ. ಅವರು ಅದನ್ನು ತೆರೆದ ಸ್ಥಳದಲ್ಲಿ ಮುಕ್ತವಾಗಿ ಇರಿಸಿದ್ದರು ಮತ್ತು ಪಕ್ಷಿಗೆ ಯಾವುದೇ ಹಾನಿ ಮಾಡಲಿಲ್ಲ” ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ. “ಹಕ್ಕಿ ತೋರಿಸುತ್ತಿರುವ ಪ್ರೀತಿಯನ್ನು ನೋಡಿ” ಎಂದು ಮತ್ತೊಬ್ಬರು ಹೇಳಿದರು.

ಪ್ರಮುಖ ಸುದ್ದಿ :-   ದಕ್ಷಿಣ ಭಾರತದಲ್ಲಿ ತೀವ್ರ ನೀರಿನ ಬಿಕ್ಕಟ್ಟು : 42 ಜಲಾಶಯದಲ್ಲಿ ಕೇವಲ 17%ರಷ್ಟು ನೀರಿನ ಸಂಗ್ರಹ ಮಾತ್ರ ಬಾಕಿ

ಕಳೆದ ಫೆಬ್ರವರಿಯಲ್ಲಿ ಆರಿಫ್ ಗಾಯಗೊಂಡಿದ್ದ ಹಕ್ಕಿಯನ್ನು ತಮ್ಮ ಹೊಲದಲ್ಲಿ ಕಂಡು ಒಂದು ವರ್ಷ ಆರೈಕೆ ಮಾಡಿದ್ದರು. ಅವರ ಬಳಿಯಿದ್ದ ಸರಸ್ ಕ್ರೇನ್ ಅನ್ನು ಅರಣ್ಯಾಧಿಕಾರಿಗಳು ಕಾನ್ಪುರ ಮೃಗಾಲಯಕ್ಕೆ ಸ್ಥಳಾಂತರಿಸಿದ ಕೆಲವೇ ದಿನಗಳಲ್ಲಿ, ಪಕ್ಷಿ ಸರಿಯಾಗಿ ಆಹಾರವನ್ನು ತಿನ್ನುತ್ತಿಲ್ಲ ಎಂಬ ವರದಿಗಳು ಹೊರಬಂದವು.
ಆದಾಗ್ಯೂ, ಮೃಗಾಲಯದ ಅಧಿಕಾರಿಗಳು ಪರಿಸ್ಥಿತಿ ಸುಧಾರಿಸುತ್ತದೆ ಎಂದು ಹೇಳಿದ್ದಾರೆ ಮತ್ತು ಅಂತಿಮವಾಗಿ ಅದನ್ನು ಕಾಡಿನಲ್ಲಿ ಬಿಡುವುದು ತಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement