ಈಶಾನ್ಯದ ಫಲಿತಾಂಶದ ನಂತರ ಬಿಜೆಪಿಗೆ 3ಕ್ಕೆ 3…! : ನಾಗಾಲ್ಯಾಂಡ್‌, ತ್ರಿಪುರದಲ್ಲಿ ಬಹುಮತ, ಮೇಘಾಲಯದಲ್ಲಿ ಮತ್ತೆ ಎನ್‌ಪಿಪಿ ಜೊತೆ ಸಖ್ಯ

ನವದೆಹಲಿ: ಮೂರು ಈಶಾನ್ಯ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪರಿಪೂರ್ಣ ಮೂರು ಅಂಕಗಳನ್ನು ಗಳಿಸಿದೆ. ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟ ನಿಚ್ಚಳ ಬಹುಮತ ಪಡೆದರೆ ಮೇಘಾಲಯದಲ್ಲಿ ಕಾನ್ರಾಡ್ ಸಂಗ್ಮಾ ಜೊತೆಗಿನ ತನ್ನ ಸಂಬಂಧವನ್ನು ಮರುಸ್ಥಾಪಿಸಿದ ನಂತರ ಮೇಘಾಲಯದಲ್ಲಿ ಸರ್ಕಾರವನ್ನು ರಚಿಸಲು ಪ್ರಯತ್ನಗಳು ನಡೆಯುತ್ತಿವೆ.
ತ್ರಿಪುರಾದಲ್ಲಿ ಬಿಜೆಪಿ-ಐಪಿಎಫ್‌ಟಿ (ಇಂಡಿಜಿನಸ್ ಪ್ರೊಗ್ರೆಸ್ಸಿವ್ ಫ್ರಂಟ್ ಆಫ್ ತ್ರಿಪುರ) ಮೈತ್ರಿಕೂಟವು ರಾಜ್ಯದ 60 ಸ್ಥಾನಗಳಲ್ಲಿ 33 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಮರಳಿತು. ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, “ಡಬಲ್ ಇಂಜಿನ್ ಸರ್ಕಾರವು ರಾಜ್ಯದ ಪ್ರಗತಿಗೆ ಶ್ರಮಿಸುತ್ತದೆ. ಈ ಫಲಿತಾಂಶವನ್ನು ಖಚಿತಪಡಿಸಿದ ನಮ್ಮ ಪಕ್ಷದ ಕಾರ್ಯಕರ್ತರ ಪರಿಶ್ರಮಕ್ಕಾಗಿ ನಾನು ಶ್ಲಾಘಿಸುತ್ತೇನೆ” ಎಂದು ಹೇಳಿದ್ದಾರೆ.
ಮೈತ್ರಿಕೂಟದ ಸಂಖ್ಯೆ 2018ಕ್ಕೆ ಹೋಲಿಸಿದರೆ 11 ರಷ್ಟು ಕಡಿಮೆಯಾಗಿದೆ, 2018ರಲ್ಲಿ ಬಿಜೆಪಿ ಏಕಾಂಗಿಯಾಗಿ 36 ಸ್ಥಾನಗಳನ್ನು ಮತ್ತು ಐಪಿಎಫ್‌ಟಿ ಎಂಟು ಸ್ಥಾನಗಳನ್ನು ಗೆದ್ದಿತ್ತು. ತ್ರಿಪುರದಲ್ಲಿ 35 ವರ್ಷಗಳ ಕಾಲ ರಾಜ್ಯವನ್ನು ಆಳಿದ ಎಡಪಕ್ಷಗಳು ಮತ್ತು ಅದರ ಹೊಸ ಮಿತ್ರ ಪಕ್ಷ ಕಾಂಗ್ರೆಸ್ 14 ಸ್ಥಾನಗಳನ್ನು ಗೆದ್ದವು, ಇದು ಕಳೆದ ಚುನಾವಣೆಗೆ ಹೋಲಿಸಿದರೆ ಎರಡು ಸ್ಥಾನಗಳು ಕಡಿಮೆಯಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಪಾದಾರ್ಪಣೆ ಮಾಡಿದ ಹಿಂದಿನ ರಾಜಮನೆತನದ ಪ್ರದ್ಯೋತ್ ಕಿಶೋರ್ ದೇವ್‌ವರ್ಮಾ ಅವರ ತಿಪ್ರಾ ಮೋಥಾ ಪಕ್ಷವು 13 ಸ್ಥಾನಗಳನ್ನು ಗೆದ್ದಿದೆ. ಗ್ರೇಟರ್ ತ್ರಿಪುರಕ್ಕಾಗಿ ಒತ್ತಾಯಿಸುತ್ತಿರುವ ಪಕ್ಷವು ಐಪಿಎಫ್‌ಟಿಯ ಬುಡಕಟ್ಟು ಬೆಂಬಲವನ್ನು ಬಾಚಿಕೊಂಡಿದೆ.

ಮೇಘಾಲಯದಲ್ಲಿ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ 26 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಮೇಘಾಲಯವು ಅತಂತ್ರ ವಿದಾನಸಭೆಯಲ್ಲಿ ಚುನಾವಣಾ ಫಲಿತಾಂಶವು ಕೊನೆಗೊಂಡಿತು. ಆದರೆ ಈ ಮೊದಲಿದ್ದ ಬಿಜೆಪಿಯೊಂದಿಗಿನ ಅದರ ಮೈತ್ರಿಯು ಮತ್ತೆ ನವೀಕೃತಗೊಂಡ ನಂತರ ಅದರ ಸಂಖ್ಯೆಯನ್ನು 29ಕ್ಕೆ ಒಯ್ದಿತು. 60 ಸದಸ್ಯರ ವಿಧಾನಸಭೆಯಲ್ಲಿ ಬಹುಮತಕ್ಕೆ 31ಸ್ಥಾನಗಳು ಬೇಕು.
ಸಂಗ್ಮಾ ಅವರು ಬಿಜೆಪಿಯ ಮುಖ್ಯ ತಂತ್ರಗಾರ ಅಮಿತ್ ಶಾ ಅವರಿಗೆ ಕರೆ ಮಾಡಿದರು. ಸಂಗ್ಮಾ ಅವರ ಎನ್‌ಪಿಪಿ ವಿರುದ್ಧದ ಭ್ರಷ್ಟಾಚಾರ ಆರೋಪದ ನಂತರ ಎನ್‌ಪಿಪಿ ಹಾಗೂ ಬಿಜೆಪಿ ನಡುವೆ ಬಿರುಕು ಕಾಣಿಸಿಕೊಂಡ ನಂತರ ಎರಡು ಪಕ್ಷಗಳು ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದವು.
ರಾಜ್ಯ ಚುನಾವಣೆಯಲ್ಲಿ ತಮ್ಮ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಬಹುಮತದ ಕೊರತೆಯ ನಂತರ ಸರ್ಕಾರ ರಚಿಸಲು ಬಿಜೆಪಿಯ ಬೆಂಬಲ ಕೋರಿದ್ದಾರೆ. ಬಿಜೆಪಿ ಅವರ ಅವರ ಕೋರಿಕೆಗೆ ಮನ್ನಣೆ ನೀಡಿದೆ.
ಗುರುವಾರ ಬಿಗಿ ಭದ್ರತೆಯ ನಡುವೆ ಮತ ಎಣಿಕೆ ನಡೆದಾಗ ಮೇಘಾಲಯದ ಚುನಾವಣಾ ಫಲಿತಾಂಶಗಳು ಹೊರಬಿದ್ದಾಗ ಎಕ್ಸಿಟ್ ಪೋಲ್‌ಗಳು ಹೇಳಿದಂತೆಯೇ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿಲ್ಲ.
ಸಂಗ್ಮಾ ಅವರ ಪಕ್ಷವು 26 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ವಿಧಾನಸಭೆಯಲ್ಲಿ 60 ಸ್ಥಾನಗಳನ್ನು ಹೊಂದಿರುವ ಮೇಘಾಲಯದಲ್ಲಿ ಬಹುಮತಕ್ಕೆ 31 ಸ್ಥಾನಗಳು ಬೇಕು. ಒಂದು ಸ್ಥಾನದ ಮತದಾನ ರದ್ದುಗೊಳಿಸಲಾಗಿದೆ ಮತ್ತು ನಂತರ ನಡೆಯಲಿದೆ.
ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (ಯುಡಿಪಿ) 11 ಸ್ಥಾನಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ತಲಾ ಐದು ಮತ್ತು ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದಿದೆ.

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಈಶಾನ್ಯ ಬಿಜೆಪಿಯ ಪ್ರಮುಖ ಸಮಸ್ಯೆ ನಿವಾರಣೆಗೆ ಕಾನ್ರಾಡ್‌ ಸಂಗ್ಮಾ ಅವರನ್ನು ಬೆಂಬಲಿಸುವ ಪಕ್ಷದ ನಿರ್ಧಾರವನ್ನು ಘೋಷಿಸಿದರು. ಆದಾಗ್ಯೂ, ಮ್ಯಾಜಿಕ್ ಸಂಖ್ಯೆಯನ್ನು ದಾಟಲು ಮೈತ್ರಿಕೂಟಕ್ಕೆ ಇನ್ನೂ ಒಂದೆರಡು ಸ್ಥಾನಗಳು ಬೇಕಾಗಬಹುದು. ಕೊನ್ರಾಡ್ ಸಂಗ್ಮಾ ಅವರು ಬಿಜೆಪಿಯೊಂದಿಗಿನ ತಮ್ಮ ಮೈತ್ರಿಯನ್ನು ಚುನಾವಣೆಗೆ ಮುಂಚೆ ರದ್ದುಗೊಳಿಸಿದ್ದರು.
ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಕರೆ ಮಾಡಿದರು ಮತ್ತು ಹೊಸ ಸರ್ಕಾರವನ್ನು ರಚಿಸುವಲ್ಲಿ ಅವರ ಬೆಂಬಲ ಕೋರಿದರು ಎಂದು ಅಸ್ಸಾಂ ಮುಖ್ಯಮಂತ್ರಿ ಮತ್ತು ಈಶಾನ್ಯ ರಾಜ್ಯಗಳ ಬಿಜೆಪಿಯ ಪ್ರಮುಖ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ. ಸಂಗ್ಮಾ ಮತ್ತು ಶರ್ಮಾ ಬುಧವಾರ ಗುವಾಹತಿಯಲ್ಲಿ ಸಭೆ ನಡೆಸಿದರು, ಅಲ್ಲಿ ಮೈತ್ರಿ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಾಗಾಲ್ಯಾಂಡ್‌ನಲ್ಲಿ, ಬಿಜೆಪಿ ಮತ್ತು ಅದರ ಮಿತ್ರಪಕ್ಷ ಎನ್‌ಡಿಪಿಪಿ (ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ) 37 ಸ್ಥಾನಗಳನ್ನು ಗೆದ್ದಿದೆ – ಕಳೆದ ಬಾರಿಗಿಂತ ಏಳು ಸ್ಥಾನಗಳನ್ನು ಹೆಚ್ಚು ಗೆದ್ದಿದೆ. ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಮಹಿಳಾ ಶಾಸಕಿ ಸಿಕ್ಕಿದ್ದಾರೆ.

ಪ್ರಮುಖ ಸುದ್ದಿ :-   ದಕ್ಷಿಣ ಭಾರತದಲ್ಲಿ ತೀವ್ರ ನೀರಿನ ಬಿಕ್ಕಟ್ಟು : 42 ಜಲಾಶಯದಲ್ಲಿ ಕೇವಲ 17%ರಷ್ಟು ನೀರಿನ ಸಂಗ್ರಹ ಮಾತ್ರ ಬಾಕಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement