ಮಹಾ ಸಿಎಂ ಉದ್ಧವಗೆ ಕಪಾಳಮೋಕ್ಷ ಕಾಮೆಂಟ್‌: ಮುಂಬೈನಲ್ಲಿ ಬಿಜೆಪಿ-ಶಿವಸೇನಾ ಕಾರ್ಯಕರ್ತರ ಘರ್ಷಣೆ

ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಬಗ್ಗೆ ಕೇಂದ್ರ ಸಚಿವ ನಾರಾಯಣ್ ರಾಣೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಮಂಗಳವಾರ ಮುಂಬೈನಲ್ಲಿ ಆಕ್ರೋಶಗೊಂಡ ಶಿವಸೇನಾ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ  ನಡೆದಿದೆ.ಪೊಲೀಸರು ಜನರನ್ನು ಚದುರಿಸಲು ಲಾಠಿ ಬೀಸಿದ್ದಾರೆ.
ಸೇನಾ ಕಾರ್ಯಕರ್ತರು ಮುಂಬೈನ ಕೇಂದ್ರ ಸಚಿವರ ಮನೆಗೆ ತೆರಳುತ್ತಿದ್ದಾಗ ಘರ್ಷಣೆ ನಡೆಯಿತು. ದೊಡ್ಡ ಪ್ರಮಾಣದಲ್ಲಿ ಗೊಂಪುಸೇರಿ ಘರ್ಷಣೆಗೆ ಇಳಿದಿದ್ದರಿಂದ ಪೊಲೀಸರು ಲಾಠಿ ಬೀಸಬೇಕಾಯಿತು.
ನಾರಾಯಣ್ ರಾಣೆ ಅವರು “ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಅವರ ಭಾಷಣದ ಸಮಯದಲ್ಲಿ ಅವರು ವರ್ಷಗಳ ಲೆಕ್ಕವನ್ನು ಕೇಳಬೇಕಿತ್ತು ಮತ್ತು ನಾನು ಅಲ್ಲಿದ್ದರೆ, ನಾನು ಅವರಿಗೆ ಕಪಾಳಮೋಕ್ಷ ಮಾಡುತ್ತಿದ್ದೆ ಎಂದು ಹೇಳಿದ್ದರು.
ನಾಸಿಕ್ ಪೊಲೀಸ್ ತಂಡವು ಕೇಂದ್ರ ಸಚಿವ ನಾರಾಯಣ್ ರಾಣೆ ಅವರ ವಿವಾದಾತ್ಮಕ ಹೇಳಿಕೆಯಿಂದ ಅವರನ್ನು ಬಂಧಿಸಲು ಹೊರಟಿದೆ. ನಾರಾಯಣ್ ರಾಣೆ ಪ್ರಸ್ತುತ ಕೊಂಕಣ ಪ್ರದೇಶದಲ್ಲಿ ತಮ್ಮ ಜನಾಶೀರ್ವಾದ ಯಾತ್ರೆಯಲ್ಲಿದ್ದಾರೆ.
ನಾರಾಯಣ್ ರಾಣೆ ಸೋಮವಾರದ ಹೇಳಿಕೆಗಳು ಶಿವಸೇನಾ ಕಾರ್ಯಕರ್ತರನ್ನು ಕೆರಳಿಸಿತು. ಈ ಹೇಳಿಕೆಯ ನಂತರ ನಾರಾಯಣ್ ರಾಣೆ ವಿರುದ್ಧ ನಾಲ್ಕು ಎಫ್ಐಆರ್ ದಾಖಲಾಗಿದೆ. ಒಂದು ಎಫ್‌ಐಆರ್ ಅನ್ನು ಪುಣೆಯಲ್ಲಿ ದಾಖಲಿಸಲಾಗಿದೆ, ಒಂದು ನಾಸಿಕ್‌ನಲ್ಲಿ ಮತ್ತು ಎರಡು ರಾಯಗಡ ಜಿಲ್ಲೆಯ ಮಹದ್ ಪ್ರದೇಶದಲ್ಲಿ ದಾಖಲಾಗಿದೆ.
ಇದೇ ವೇಳೆ ಶಿವಸೇನಾ ಕಾರ್ಯಕರ್ತರ ಗುಂಪು ನಾಸಿಕ್‌ನ ಬಿಜೆಪಿ ಕಚೇರಿಯ ಮೇಲೆ ಕಲ್ಲು ತೂರಾಟ ನಡೆಸಿ ನಾರಾಯಣ್ ರಾಣೆ ವಿರುದ್ಧ ಘೋಷಣೆಗಳನ್ನು ಕೂಗಿತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement