ದೇಶದಲ್ಲಿ ಮೇ ತಿಂಗಳಲ್ಲಿ 2.01 ಲಕ್ಷ ಕೋಟಿ ರೂ. ಜಿಎಸ್‌ ಟಿ ಸಂಗ್ರಹ ; ಕಳೆದ ವರ್ಷ ಮೇ ತಿಂಗಳಿಗೆ ಹೋಲಿಸಿದರೆ 16.4% ಹೆಚ್ಚಳ

ನವದೆಹಲಿ: ಹಣಕಾಸು ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 2025ರ ಮೇ ತಿಂಗಳಲ್ಲಿ ಭಾರತದ ಒಟ್ಟು ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವು 2.01 ಲಕ್ಷ ಕೋಟಿ ರೂ.ಗಳನ್ನು ತಲುಪಿದ್ದು, ಇದು 2024 ರ ಮೇ ತಿಂಗಳಲ್ಲಿ ಸಂಗ್ರಹಿಸಲಾದ 1.72 ಲಕ್ಷ ಕೋಟಿ ರೂ.ಗಳಿಗಿಂತ ಶೇ. 16.4 ರಷ್ಟು ಹೆಚ್ಚಾಗಿದೆ.
ಏಪ್ರಿಲ್ 2025 ರಲ್ಲಿ, ಭಾರತದ ಜಿಎಸ್‌ಟಿ (GST) ಸಂಗ್ರಹವು ಶೇ. 12.6 ರಷ್ಟು ಹೆಚ್ಚಾಗಿ ಸಾರ್ವಕಾಲಿಕ ಗರಿಷ್ಠ 2.37 ಲಕ್ಷ ಕೋಟಿ ರೂ.ಗಳಿಗೆ ತಲುಪಿತ್ತು.
ಆಮದುಗಳಿಂದ ಸಂಗ್ರಹಿಸಲಾದ ಜಿಎಸ್‌ಟಿಯಲ್ಲಿ ಶೇ. 25.2 ರಷ್ಟು ಹೆಚ್ಚಳ ಮತ್ತು ದೇಶೀಯ ವಹಿವಾಟುಗಳಿಂದ ಶೇ. 13.7 ರಷ್ಟು ಹೆಚ್ಚಳದಿಂದ ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಕಂಡುಬಂದಿದೆ. ಆಮದುಗಳಿಂದ ಸಂಗ್ರಹವಾದ ಒಟ್ಟು ಜಿಎಸ್‌ಟಿ ಆದಾಯವು 51,266 ಕೋಟಿ ರೂ.ಗಳಾಗಿದ್ದರೆ, ದೇಶೀಯ ಮೂಲಗಳು 1,49,785 ಕೋಟಿ ರೂ.ಗಳ ಆದಾಯ ನೀಡಿವೆ.

ದೇಶಾದ್ಯಂತ ನಿರಂತರ ಆರ್ಥಿಕ ವೇಗ ಮತ್ತು ಸುಧಾರಿತ ತೆರಿಗೆ ಅನುಸರಣೆ ಕಾಯ್ದುಕೊಂಡಿದ್ದರಿಂದ ಮೇ ತಿಂಗಳಿನಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿನ ಬೆಳವಣಿಗೆಯು ಏಪ್ರಿಲ್ 2025 ರಲ್ಲಿ ಸಂಗ್ರಹಿಸಿದ ದಾಖಲೆಯ ಆದಾಯಕ್ಕಿಂತ ಸ್ವಲ್ಪ ಕುಸಿತ ಕಂಡಿದೆ, ಆದರೆ ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗಮನಾರ್ಹವಾಗಿ ಹೆಚ್ಚಾಗಿದೆ, ಇದು ಜಿಎಸ್‌ಟಿ (GST) ಆದಾಯದಲ್ಲಿ ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಸೂಚಿಸುತ್ತದೆ.
ಮೇ ತಿಂಗಳಲ್ಲಿ, ಒಟ್ಟು (gross) ಜಿಎಸ್‌ಟಿ ಆದಾಯವು 4.37 ಲಕ್ಷ ಕೋಟಿ ರೂ.ಗಳನ್ನು ತಲುಪಿದೆ, ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಸಂಗ್ರಹಿಸಲಾದ 3.83 ಲಕ್ಷ ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ. 14.3 ರಷ್ಟು ಹೆಚ್ಚಳವಾಗಿದೆ.
ಮರುಪಾವತಿಗಳ ನಂತರ, ಮೇ ತಿಂಗಳ ನಿವ್ವಳ ಜಿಎಸ್‌ಟಿ ಆದಾಯ 1,73,841 ಕೋಟಿ ರೂ.ಗಳಾಗಿದ್ದು, ಇದು 2024 ರ ಮೇ ತಿಂಗಳಲ್ಲಿ ಸಂಗ್ರಹಿಸಲಾದ 1,44,381 ಕೋಟಿ ರೂ. ಗಳಿಗಿಂತ ಶೇ. 20.4 ರಷ್ಟು ಏರಿಕೆಯಾಗಿದೆ. ಈ ತಿಂಗಳ ಒಟ್ಟು ಮರುಪಾವತಿ 27,210 ಕೋಟಿ ರೂ.ಗಳಾಗಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ. 4 ರಷ್ಟು ಕಡಿಮೆಯಾಗಿದೆ.

ಪ್ರಮುಖ ಸುದ್ದಿ :-   254 ಕೆಜಿ ತೂಕದ ಭಾರಿ ಬೊಜ್ಜಿನ ವ್ಯಕ್ತಿಗೆ ತೂಕ ಕಡಿಮೆ ಮಾಡಲು ಹೈ ರಿಸ್ಕ್‌ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದ ಏಮ್ಸ್ ವೈದ್ಯರು...! ಏನಿದು ಸರ್ಜರಿ..?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement