ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಇಳಿಕೆ ಮಾಡಿ ಕೇಂದ್ರ

ನವ ದೆಹಲಿ: ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಇಳಿಕೆ ಮಾಡಿ ಕೇಂದ್ರ ಸರ್ಕಾರವು ಬುಧವಾರ ಆದೇಶ ಹೊರಡಿಸಿದೆ.
ಈ ಆದೇಶದಿಂದಾಗಿ ಬ್ಯಾಂಕುಗಳು ತನ್ನ ಠೇವಣಿ ದರಗಳನ್ನು ಇಳಿಸಲು ಸಹಕಾರಿಯಾಗಲಿದೆ. ಕಳೆದ ಮೂರು ತ್ರೈಮಾಸಿಕದಲ್ಲಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಈಗ ಪರಿಷ್ಕೃತ ಬಡ್ಡಿದರ ಏಪ್ರಿಲ್ 1, 2021ರಿಂದ ಜಾರಿಗೆ ಬರಲಿದೆ.
ಪಿಪಿಎಫ್, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(NSC), ಹಿರಿಯ ನಾಗರಿಕ ಉಳಿತಾಯ ಯೋಜನೆಗಳು(SCSS), ಸುಕನ್ಯಾ ಸಮೃದ್ಧಿ ಯೋಜನೆ(SSY) ಸೇರಿದಂತೆ ಇತರೆ ಯೋಜನೆಗಳ ಬಡ್ಡಿ ದರವನ್ನು ಇಳಿಸಿ ಮಾರ್ಚ್ 31ರಂದು ಆದೇಶ ಹೊರಡಿಸಿದೆ. ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರಗಳನ್ನು ಹಣಕಾಸು ಸಚಿವಾಲಯವು ತ್ರೈಮಾಸಿಕ ಆಧಾರದ ಮೇಲೆ ಪ್ರಕಟಿಸುತ್ತದೆ.
ಬಡ್ಡಿದರ ಪ್ರಮಾಣ ಶೇ. 4 ರಿಂದ ಶೇ 3.5ರಷ್ಟು ಇಳಿಕೆಯಾಗಿದೆ. 2021ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಏಪ್ರಿಲ್ 1ರಿಂದ ಜಾರಿಯಾಗಲಿದೆ. ಹೀಗಾಗಿ 1 ರಿಂದ 5 ವರ್ಷದ ಸೀಮಿತ ಅವಧಿ ಹೂಡಿಕೆ ಮೇಲೆ ಶೇ 4.4 ರಿಂದ ಶೇ 5.8ರಷ್ಟು ಬಡ್ಡಿದರ ನಿರೀಕ್ಷಿಸಬಹುದು. ಸುಮಾರು 46 ವರ್ಷಗಳ ಬಳಿಕ ಪಿಪಿಎಫ್ ದರ ಶೇ 7ಕ್ಕಿಂತ ಕಡಿಮೆ ದರಕ್ಕಿಳಿದಿದೆ.
ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್) ದರ ಶೇ 7.1ರಿಂದ ಶೇ 6.4ಕ್ಕಿಳಿದಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ(ಎನ್‌ಎಸ್‌ಸಿ) ಶೇ 6.8ರಿಂದ ಶೇ 5.9ಕ್ಕಿಳಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನಾ (ಎಸ್‌ಎಸ್‌ವೈ) ಶೇ 7.6 ರಿಂದ ಶೇ 6.9ಕ್ಕಿಳಿಸಲಾಗಿದೆ.
ಅಂಚೆ ಕಚೇರಿ ಹೂಡಿಕೆ ವಿವಿಧ ಅವಧಿಗೆ ಶೇ 1.1%ರಿಂದ0.40 ಕ್ಕೆ ಇಳಿಸಲಾಗಿದ್ದು, ಶೇ 4.4-5.3% ಬಡ್ಡಿ ನಿರೀಕ್ಷಿಸಬಹುದಾಗಿದೆ.

ಪ್ರಮುಖ ಸುದ್ದಿ :-   ಭಾರತದ ಆಪರೇಷನ್ ಸಿಂಧೂರ ದಾಳಿಯಲ್ಲಿ ಈ ಐವರು ನೊಟೊರಿಯಸ್‌ ಭಯೋತ್ಪಾದಕರ ಹತ್ಯೆ ; ಆದ್ರೆ ಅಂತ್ಯಕ್ರಿಯೆ ವೇಳೆ ಸರ್ಕಾರಿ ಗೌರವ ನೀಡಿದ ಪಾಕ್‌..!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement