ಕುಮಟಾ: ಕೊರೊನಾ ಸೋಂಕಿಗೆ ಚಿಕಿತ್ದೆ ಪಡೆದು ಆಸ್ಪತ್ರೆಯಿಂದ ಮನೆಗೆ ತೆರಳಿದವರಿಗೆ ಆಮ್ಲಜನಕದ ಅವಶ್ಯಕತೆ ಇದ್ದರೆ ಅಂಥವರಿಗೆ ಇಲ್ಲಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್) ಸಂಘಟನೆ ಉಚಿತವಾಗಿ ಪೂರೈಸಲಿದೆ ಎಂದು ಡಾ. ಹರ್ಷ ಹೆಗಡೆ ತಿಳಿಸಿದ್ದಾರೆ.
ಕುಮಟಾದಲ್ಲಿ ಸೋಂಕು ಹೆಚ್ಚಿದ್ದು ಜನರಿಗೆ ಅನುಕೂಲವಾಗಲೆಂದು ಸಂಘಟನೆ ಮೂಲಕ ಈ ಕಾರ್ಯ ಆರಂಭಿಸಲಾಗಿದೆ. ಕೆಲವರು ಬಾಡಿಗೆಗೆ ಆಮ್ಲಜನಕ ಪೂರೈಸಿತ್ತಿದ್ದು, ದಿನವೊಂದಕ್ಕೆ 500ರೂ.ಗಳಿಂದ ಸಾವಿರದ ತನಕ ಬಾಡಿಗೆ ನೀಡಲಾಗುತ್ತಿದೆ.ಜೊತೆಗೆ ಆಮ್ಲಜನಕ ಕೊರತೆಯೊಂದಿಗೆ ಖಾಸಗಿಯಾಗಿ ಅನೇಕರಿಗೆ ಪೂರೈಸಿಕೊಳ್ಳಲು ಅಸಾಧ್ಯವಾಗುತ್ತಿದೆ. ಇದೆಲ್ಲವನ್ನೂ ಮನಗಂಡು ಆರ್ ಎಸ್ಎಸ್ ಸೇವಾಭಾರತಿ ವಿಭಾಗ ತಮ್ಮ ಕಾರ್ಯ ಕರ್ತರ ಮೂಲಕ ಈ ರೀತಿ ಸಾಮಾಜಿಕ ಕಾರ್ಯದಲ್ಲಿ ತೊಡಗಿದೆ. 5 ಲೀಟರ್ ಸಾಮರ್ಥ್ಯದ ಕಾನ್ಸಂಟ್ರೇಟರ್ ಇರುತ್ತದೆ. ಆಮ್ಲಜನಕದ ಅಗತ್ಯ ಇರುವವರು ವೈದ್ಯರ ದೃಢೀಕರಣ ಪತ್ರದೊಂದಿಗೆ ಸಂಘಟನೆಯ ವೈದ್ಯರಾದ ಡಾ. ಹರ್ಷ ಹೆಗಡೆ (9542988266) ಡಾ. ಸಂಕೇತ್ ನಾಯಕ (8495091583)ಇವರನ್ನು ತುರ್ತುಅಗತ್ಯ ಇರುವವರು ಸಂಪರ್ಕಿಸ ಬಹುದು ಎಂದು ತಿಳಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ