ಹಾಸನ | ಬಟ್ಟೆಗಳ ಮೇಲೆ ಭಾರೀ ಆಫರ್‌ ; ಮುಗಿಬಿದ್ದ ಜನರ ನಿಯಂತ್ರಣಕ್ಕೆ ಲಾಠಿ ಚಾರ್ಜ್‌…!

ಹಾಸನ: ಶರ್ಟ್‌ ಗಳಿಗೆ ಭಾರೀ ಆಫರ್‌ ನೀಡಿದ್ದರಿಂದ ಬಟ್ಟೆ ಖರೀದಿಗೆ ಸಾವಿರಾರು ಜನ ಮುಗಿಬಿದ್ದ ಘಟನೆ ಹಾಸನದಲ್ಲಿ ನಡೆದಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಾರೆ.
ನಗರದ ಉದಯಗಿರಿ ಬಡಾವಣೆಯಲ್ಲಿ ಇದು ನಡೆದಿದ್ದು, ಲಕ್ಷಿ ಬ್ಯಾಡ್ಮಿಂಟನ್ ಅಕಾಡೆಮಿ ಕಟ್ಟಡದ ಅಂಗಡಿಯಲ್ಲಿ ಬಟ್ಟೆ ಖರೀದಿಗೆ ಆಫರ್ ನೀಡಲಾಗಿತ್ತು. ಈ ಹಿನ್ನೆಲೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಶರ್ಟ್‌ ಖರೀದಿಗೆ ಬಂದಿದ್ದರು. ನಂತರ ನೂಕುನುಗ್ಗಲು ಹೆಚ್ಚಾದ ಹಿನ್ನೆಲೆಯಲ್ಲಿ ಜನರನ್ನು ಜನರನ್ನು ನಿಯಂತ್ರಿಸಲು ಪೊಲೀಸರಿಂದ ಲಾಠಿ ಪ್ರಹಾರ ನಡೆಸಬೇಕಾಯಿತು.

ನಗರದ ಉದಯಗಿರಿ ಬಡಾವಣೆಯಲ್ಲಿನ ಬಟ್ಟೆ ಅಂಗಡಿಯೊಂದರಲ್ಲಿ (Mens Wear) ಆಕರ್ಷಕ ಆಫರ್‌ ನೀಡಲಾಗಿತ್ತು. 1 ಸಾವಿರ ರೂ.ಗಳಿಗೆ 20 ಶರ್ಟ್‌ ಆಫರ್‌ ನೀಡಲಾಗಿತ್ತು. ಹೀಗಾಗಿ ಐವತ್ತು ರೂಪಾಯಿಗೆ ಒಂದು ಶರ್ಟ್ ಖರೀದಿಗೆ ಆಸೆಯಿಂದ ಸಹಸ್ರ ಸಂಖ್ಯೆಯಲ್ಲಿ ಜನರು ಖರೀದಿಗೆ ಮುಗಿಬಿದ್ದರು.
ಭಾರೀ ಸಂಖ್ಯೆಯಲ್ಲಿ ಜನರು ಅಂಗಡಿ ಮುಂದೆ ಸೇರಿದ್ದರಿಂದ ನೂಕುನುಗ್ಗಲಿನ ಪರಿಸ್ಥಿತಿ ನಿರ್ಮಾಣವಾಯಿತು. ಪೊಲೀಸರಿಗೆ ಜನರನ್ನು ನಿಯಂತ್ರಿಸುವುದು ಕಷ್ಟವಾಯಿತು. ಹೀಗಾಗಿ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಆಗ ಜನರು ಸ್ಥಳದಿಂದ ಚೆಲ್ಲಾಪಿಲ್ಲಿಯಾದರು.

ಪ್ರಮುಖ ಸುದ್ದಿ :-   ರಾಜ್ಯಸಭಾ ಚುನಾವಣೆ : ಕರ್ನಾಟಕದಿಂದ ಮೂವರು ಸೇರಿ 7 ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಕಾಂಗ್ರೆಸ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement