ಕೆನಡಾ ಮೂಲದ ಪರಾರಿಯಾಗಿರುವ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಬಾಲಿವುಡ್ ನಟ ಸಲ್ಮಾನ್ ಖಾನ್ “ನಮ್ಮ ಟಾರ್ಗೆಟ್” ಎಂದು ಜೀವ ಬೆದರಿಕೆ ಹಾಕಿದ್ದಾನೆ.
ಸಲ್ಮಾನ್ ಖಾನ್ ಕ್ಷಮೆಯಾಚಿಸಿದರೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ “ಕರುಣೆ ತೋರಿಸಬಹುದು ಎಂದು ಆತ ಹೇಳಿದ್ದಾನೆ. ಇಂಡಿಯಾ ಟುಡೇ ಜೊತೆಗಿನ ಸಂದರ್ಶನದಲ್ಲಿ ಬ್ರಾರ್ ಈ ರೀತಿ ಹೇಳಿದ್ದಾನೆ. ” ಸಲ್ಮಾನ್ ಖಾನ್ ಖಂಡಿತವಾಗಿಯೂ ನಮ್ಮ ಟಾರ್ಗೆಟ್ ಲಿಸ್ಟ್‌ನಲ್ಲಿದ್ದಾನೆ. ಭಾಯ್ ಸಾಹೇಬ್ (ಲಾರೆನ್ಸ್) ಕರುಣೆ ತೋರಿಸುವುದಿಲ್ಲ ಎಂದು ಹೇಳಿದ್ದಾನೆ ಅಗತ್ಯ ಎನಿಸಿದಾಗ ಕರುಣೆ ತೋರುತ್ತಾನೆ ಎಂದು ಬ್ರಾರ್ ಹೇಳಿದ್ದಾನೆ.
1998 ರಲ್ಲಿ, ‘ದಬಾಂಗ್’ ನಟ ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯ ಪವಿತ್ರವೆಂದು ಪರಿಗಣಿಸಲ್ಪಟ್ಟ ಕೃಷ್ಣಮೃಗವನ್ನು ಕೊಂದಿದ್ದರು. ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವುದರಿಂದ ಲಾರೆನ್ಸ್ ಬಿಶ್ಣೋಯ್ ನಟನನ್ನು ಕೊಲ್ಲುವುದಾಗಿ ಹೇಳಿದ್ದಾನೆ. “ನಾವು ಮೊದಲೇ ಹೇಳಿದಂತೆ, ಇದು ಸಲ್ಮಾನ್ ಖಾನ್ ಬಗ್ಗೆ ಮಾತ್ರವಲ್ಲ. ನಾವು ಜೀವಂತವಾಗಿರುವವರೆಗೂ ನಮ್ಮ ಎಲ್ಲಾ ಶತ್ರುಗಳ ವಿರುದ್ಧ ನಮ್ಮ ಪ್ರಯತ್ನಗಳನ್ನು ನಾವು ಮುಂದುವರಿಸುತ್ತೇವೆ. ಸಲ್ಮಾನ್ ಖಾನ್ ನಮ್ಮ ಟಾರ್ಗೆಟ್, ನಾವು ಪ್ರಯತ್ನಿಸುತ್ತಲೇ ಇರುತ್ತೇವೆ ಮತ್ತು ನಾವು ಯಶಸ್ವಿಯಾದಾಗ ಅದು ನಿಮಗೆ ತಿಳಿಯುತ್ತದೆ” ಎಂದು ಗೋಲ್ಡಿ ಬ್ರಾರ್ ಹೇಳಿದ್ದಾನೆ.
ಬಾಲಿವುಡ್ ಸಲ್ಮಾನ್ ಖಾನಗೆ ಇ ಮೇಲ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಪತ್ರ ಬಂದ ನಂತರ, ಸಲ್ಮಾನ್ ಖಾನ್‌ಗೆ ಮುಂಬೈ ಪೊಲೀಸರು Y+ ವರ್ಗದ ಭದ್ರತೆಯನ್ನು ಒದಗಿಸಿದ್ದಾರೆ. ಪ್ರಸ್ತುತ ಲಾರೆನ್ಸ್ ಬಿಷ್ಣೋಯ್ ದೆಹಲಿಯ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ನಿಮ್ಮ ಕಾಮೆಂಟ್ ಬರೆಯಿರಿ