ಮಹಾರಾಷ್ಟ್ರ ಅರಣ್ಯದಲ್ಲಿ ಹುಲಿಯ ಹಿಂದೆ ಓಡಿದ ಕೆರಳಿದ ಕರಡಿ.. ಮುಂದೇನಾಯ್ತು ನೋಡಿ

ಕರಡಿ ಮತ್ತು ಹುಲಿ ಇತ್ತೀಚೆಗೆ ನಿಜ ಜೀವನದಲ್ಲಿ ಇದೇ ರೀತಿಯ ಮುಖಾಮುಖಿಯಾಗಿ ಕಾಣಿಸಿಕೊಂಡಿವೆ. ನಂತರ ಕರಡಿ ದಾಳಿ ಮಾಡಲು ಮುಂದಾದಾಗ ಹುಲಿ ಹೆದರಿ ಓಡಿದೆ..!

ಈ ವೀಡಿಯೋ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯನ್ನು ಮಹಾರಾಷ್ಟ್ರದ ಚಂದ್ರಾಪುರದಲ್ಲಿರುವ ತಡೋಬಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರವಾಸಿಗರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ತಡೋಬಾದ T19 ಹೆಸರಿನ ಹುಲಿಯು ಕರಡಿಯನ್ನು ದಾರಿಯಲ್ಲಿ ತಡೆದು ನಿಲ್ಲಿಸಿದೆ. ಇದು ಕರಡಿಯನ್ನು ಕೆರಳಿಸಿದೆ. ಕರಡಿಯ ಮುಂದೆ ಹುಲಿ ನಿಂತು ಅದರ ಕರಡಿಯನ್ನು ತಡೆಯುತ್ತಿರುವುದನ್ನು ವೀಡಿಯೋದಲ್ಲಿ ತೋರಿಸಲಾಗಿದೆ. ನಂತರ ಕರಡಿ ಕೋಪಗೊಂಡು ಹುಲಿಯ ಮೇಲೆ ದಾಳಿ ಮಾಡಲು ಮುಂದಾಗಿದೆ.

ಕರಡಿ ದಾಳಿಗೆ ಹುಲಿ ಹೆದರಿ ಕರಡಿಯಿಂದ ದೂರ ಓಡಿಹೋಗಲು ಪ್ರಾರಂಭಿಸುತ್ತದೆ. ಕೆರಳಿದ ಕರಡಿಯು ಹುಲಿಯನ್ನು ಹಿಂಬಾಲಿಸುತ್ತದೆ. ಆದಾಗ್ಯೂ, ಕರಡಿಯ ಕೋಪವು ಎಷ್ಟು ಮಾರಣಾಂತಿಕವಾಗಿದೆ ಎಂದು ಹುಲಿಗೆ ತಿಳಿದಿದೆ ಮತ್ತು ಮತ್ತು ಅದು ತಪ್ಪಿಸಿಕೊಂಡಿದೆ.

ಪ್ರಮುಖ ಸುದ್ದಿ :-   ವಿಜಯಪುರ : 27 ವರ್ಷಗಳಿಂದ ತಲೆಮರೆಸಿಕೊಂಡಿದ್ದ 58 ಮಂದಿ ಸಾವಿಗೀಡಾಗಿದ್ದ ಕೊಯಮತ್ತೂರು ಸ್ಫೋಟದ ಆರೋಪಿ ಬಂಧನ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement