ಉಮಾಕಾಂತ ಭಟ್, ವಾಸುದೇವ ರಾವ್, ವಿಶ್ವೇಶ್ವರ ಭಟ್ಟರಿಗೆ ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ

 

ಉಡುಪಿ: ಉಡುಪಿಯ ಯಕ್ಷಗಾನ ಕಲಾರಂಗವು ಪೆರ್ಲ ಕೃಷ್ಣ ಭಟ್ ಮತ್ತು ಮಟ್ಟಿ ಮುರಲೀಧರ ರಾವ್ ನೆನಪಿನಲ್ಲಿ ತಾಳಮದ್ದಲೆ ಅರ್ಥಧಾರಿ ಗಳಿಗೆ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ವಿದ್ವಾನ್ ಉಮಕಾಂತ ಭಟ್ಟ ಮತ್ತು ಸುರತ್ಕಲ್ ವಾಸುದೇವ ರಾವ್ ಆಯ್ಕೆಯಾಗಿದ್ದಾರೆ.
ಉಮಾಕಾಂತ್ ಭಟ್ಟ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರಾಗಿದ್ದು ಪ್ರಸಿದ್ಧ ಅರ್ಥಧಾರಿಯಾಗಿ ಹೆಸರುವಾಸಿಯಾಗಿದ್ದಾರೆ. ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿಶೇಷ ಪಾಂಡಿತ್ಯ ಇರುವ ಇವರು ಪ್ರವಚನಕಾರರಾಗಿಯು ಹೆಸರುಗಳಿಸಿದ್ದಾರೆ.
ನಿವೃತ್ತ ಅಧ್ಯಾಪಕರಾದ ಸುರತ್ಕಲ್ ವಾಸುದೇವ ರಾವ್ ಅರ್ಥಧಾರಿಯಾಗಿ, ಯಕ್ಷಗಾನ ನಿರ್ದೇಶಕರಾಗಿ ಖ್ಯಾತಿ ಪಡೆದವರು. ಮಹಿಳಾ ತಾಳಮದ್ದಲೆ ಸಂಘಟನೆಯ ಸ್ಥಾಪಕರಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಪ್ರಶಸ್ತಿಯು ಪ್ರಶಸ್ತಿ ಪತ್ರ ಮತ್ತು ತಲಾ 20,000 ರೂ. ನಗದನ್ನು ಒಳಗೊಂಡಿದೆ.
ಕರ್ಗಲ್ಲು ವಿಶ್ವೇಶ್ವರ ಭಟ್‌ಗೆ ತಲ್ಲೂರು ಪ್ರಶಸ್ತಿ: ಯಕ್ಷಗಾನದಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಾಧಕರಿಗೆ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ಯಕ್ಷಗಾನ ಗುರು ಕರ್ಗಲ್ಲು ವಿಶ್ವೇಶ್ವರ ಭಟ್ಟ ಆಯ್ಕೆಯಾಗಿದ್ದಾರೆ. ತೆಂಕು ತಿಟ್ಟಿನ ಕುಣಿತದ ಸೂಕ್ಷ್ಮವನ್ನು ಶಿಷ್ಯರಿಗೆ ಧಾರೆಯೆರೆಯುತ್ತಿರುವ ಇವರದ್ದು ವಿಶೇಷ ಪ್ರತಿಭೆ. 1986ರಿಂದ ಯಕ್ಷಗಾನ ಅಧ್ಯಯನ ಅಧ್ಯಾಪನಕ್ಕಾಗಿ ಸಮರ್ಪಿಸಿಕೊಂಡವರು. ಪ್ರಶಸ್ತಿಯು ಪ್ರಶಸ್ತಿ ಪತ್ರ ಮತ್ತು 40,000ರೂ. ನಗದನ್ನು ಒಳಗೊಂಡಿರುತ್ತದೆ.
ಪ್ರಶಸ್ತಿ ಪ್ರದಾನ ಸಮಾರಂಭ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಸೆ.26ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ ಎಂದು   ಪ್ರಕಟಣೆ ತಿಳಿಸಿದೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement