ಪಶ್ಚಿಮ ಬಂಗಾಳ ಪಂಚಾಯತ ಚುನಾವಣೆಯಲ್ಲಿ ಮತದಾನದ ವೇಳೆ ಹಿಂಸಾಚಾರ : 9 ಮಂದಿ ಸಾವು

ಕೋಲ್ಕತ್ತಾ: ಮೂರು ಹಂತದ ಪಂಚಾಯತಿ ಚುನಾವಣೆಗೆ ಇಂದು, ಶನಿವಾರ ಗ್ರಾಮೀಣ ಪಶ್ಚಿಮ ಬಂಗಾಳದ ಮತದಾನದ ವೇಳೆ ಕನಿಷ್ಠ ಒಂಬತ್ತು ಜನರು ಸಾವಿಗೀಡಾಗಿದ್ದಾರೆ.
ಹತ್ಯೆಯಾದವರಲ್ಲಿ ಐವರು ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಬಿಜೆಪಿ, ಎಡ ಮತ್ತು ಕಾಂಗ್ರೆಸ್‌ನ ತಲಾ ಒಬ್ಬ ಕಾರ್ಯಕರ್ತ ಮತ್ತು ಒಬ್ಬ ಸ್ವತಂತ್ರ ಅಭ್ಯರ್ಥಿಯ ಬೆಂಬಲಿಗರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌, ಭದ್ರತೆಗೆ ನಿಯೋಜಿಸಲಾದ ಕೇಂದ್ರ ಪಡೆಗಳ ಕಡೆಯಿಂದ “ದೊಡ್ಡ ವೈಫಲ್ಯ” ಎಂದು ಆರೋಪಿಸಿದೆ. ಹಿಂಸಾತ್ಮಕ ಘರ್ಷಣೆಗಳ ಜೊತೆಗೆ ಹಲವಾರು ಜನರು ಗಾಯಗೊಂಡಿದ್ದಾರೆ, ಕನಿಷ್ಠ ಎರಡು ಮತಗಟ್ಟೆಗಳಲ್ಲಿ ಮತಪೆಟ್ಟಿಗೆಗಳನ್ನು ನಾಶಪಡಿಸಲಾಗಿದೆ ಎಂದು ವರದಿಯಾಗಿದೆ.
22 ಜಿಲ್ಲಾ ಪರಿಷತ್‌ಗಳು, 9,730 ಪಂಚಾಯತ ಸಮಿತಿಗಳು ಮತ್ತು 63,229 ಗ್ರಾಮ ಪಂಚಾಯತ ಸ್ಥಾನಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸುಮಾರು 5.67 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ.
ಜೂನ್ 8 ರಂದು ಚುನಾವಣೆ ಘೋಷಣೆಯಾದ ದಿನದಿಂದ, ಬಂಗಾಳದಾದ್ಯಂತ ವ್ಯಾಪಕ ಹಿಂಸಾಚಾರ ವರದಿಯಾಗಿದೆ. ಚುನಾವಣಾ ಹಿಂಸಾಚಾರದಲ್ಲಿ ಈವರೆಗೆ 15 ಜನರು ಸಾವಿಗೀಡಾಗಿದ್ದಾರೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್‌ನ ಪ್ರಚಾರದ ನೇತೃತ್ವ ವಹಿಸಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್, ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ ಘೋಷ್, ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಬಿಜೆಪಿಯ ಪ್ರಚಾರದ ನೇತೃತ್ವ ವಹಿಸಿದ್ದರು; ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಮತ್ತು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ತಮ್ಮ ಪಕ್ಷಗಳನ್ನು ಮುನ್ನಡೆಸಿದರು.
ಮೊದಲ ಬಾರಿಗೆ, ರಾಜಭವನವು ಚುನಾವಣಾ ಹಿಂಸಾಚಾರದ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸಿತು, ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಜನರ ದೂರುಗಳನ್ನು ಪರಿಹರಿಸಲು ತಮ್ಮ ಅಧಿಕೃತ ನಿವಾಸದಲ್ಲಿ “ಶಾಂತಿ ಮನೆ” ತೆರೆದರು.
70 ರ ದಶಕದ ಉತ್ತರಾರ್ಧದಲ್ಲಿ ಬಂಗಾಳದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯು ಪ್ರಾರಂಭವಾದಾಗಿನಿಂದ ಗ್ರಾಮ ಸಭೆಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಚುನಾವಣೆಯು ಎರಡನೇ ಬಾರಿಗೆ ಕೇಂದ್ರ ಪಡೆಗಳ ಕಣ್ಗಾವಲು ಅಡಿಯಲ್ಲಿ ನಡೆಯಲಿದೆ. ಇಂದು ಬಂಗಾಳದಾದ್ಯಂತ ಸುಮಾರು 65,000 ಕೇಂದ್ರ ಪೊಲೀಸ್ ಸಿಬ್ಬಂದಿ ಮತ್ತು 70,000 ರಾಜ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಪ್ರಮುಖ ಸುದ್ದಿ :-   ಪವಿತ್ರಾ ಜಯರಾಮ ಸಾವಿನ ಬೆನ್ನಲ್ಲೇ ಗೆಳೆಯ-ಕಿರುತೆರೆ ನಟ ಚಂದು ಆತ್ಮಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement