ವಿದೇಶಿ ಮಹಿಳೆಯಿಂದ 4.90 ಲಕ್ಷ ರೂ. ಕಳೆದುಕೊಂಡ ಗುಣವಂತೆ ವ್ಯಕ್ತಿ..!

ಕಾರವಾರ:ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ವಿದೇಶಿ ಮಹಿಳೆಯಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆಯ ವ್ಯಕ್ತಿಯೊಬ್ಬ 4.90 ಲಕ್ಷ ರೂ. ಕಳೆದುಕೊಂಡಿದ್ದು ಈ ಬಗ್ಗೆ ಆತ ಕಾರವಾರದ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪೋರ್ಚುಗಲ್ ದೇಶದ ಮಹಿಳೆಯಿಂದ 4.90 ಲಕ್ಷ ರೂ.ಗಳು ಮೋಸವಾಗಿದೆ ಎಂದು ಶ್ರೀಪಾದ ಹೆಗಡೆ ಎನ್ನುವವರು ದೂರು ದಾಖಲಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪೋರ್ಚುಗಲ್ ದೇಶದ ಲಿಂಡಾ ಎನ್ನುವ ಮಹಿಳೆ ನಂತರದಲ್ಲಿ ವಾಟ್ಸ್ ಆ್ಯಪ್ ಮೂಲಕ ಸಂಪರ್ಕದಲ್ಲಿದ್ದಳು. ಮಹಿಳೆ ತಾನು ವಿದೇಶದಲ್ಲಿದ್ದು ಭಾರತ ದೇಶದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಣ ಹೂಡಿಕೆ ಮಾಡಬೇಕು ಹಾಗೂ ಭಾರತದಲ್ಲಿ ಒಬ್ಬರು ನಂಬಿಕೆ ಉಳ್ಳವರು ಬೇಕಾಗಿದ್ದಾರೆ, ನಿಮ್ಮ ಮೇಲೆ ತನಗೆ ನಂಬಿಕೆ ಎಂದು ಮಹಿಳೆ ಶ್ರೀಪಾದ ಹೆಗಡೆ ಅವರು ನಂಬುವಂತೆ ಮಾಡಿದ್ದಾಳೆ.
ನಾನು ಭಾರತ ದೇಶಕ್ಕೆ ಬಂದ ಮೇಲೆ ಹಣ ಹೂಡಿಕೆಯ ಬಗ್ಗೆ ವಿವರವಾಗಿ ಮಾಹಿತಿ ನೀಡುತ್ತೇನೆ. ಈ ನನ್ನ ಪ್ರತಿನಿಧಿ ನಮ್ಮ ದೇಶದಿಂದ ವಿಲಿಯಂ ಜೆ. ಮಿಲ್ಸ್ ಎನ್ನುವ ವ್ಯಕ್ತಿಯು ಭಾರತಕ್ಕೆ ಬರುತ್ತಿದ್ದು ಅವರ ಜೊತೆ ನಾನು ಉಡುಗೊರೆಯಾಗಿ ಬಟ್ಟೆ, ಶೂ, ವಾಚ್, ಮೊಬೈಲ್ ಹಾಗೂ ಎರಡು ಲಕ್ಷ ಡಾಲರ್ ಕಳುಹಿಸಿಕೊಡುವುದಾಗಿ ನಂಬಿಸಿದ್ದಾಳೆ. ಬಳಿಕ ಜೂ.10ರಂದು ವಿಲಿಯಂ ಜೆ. ಮಿಲ್ಸ್, ಶ್ರೀಪಾದ ಹೆಗಡೆ ಅವರಿಗೆ ಸಂಪರ್ಕಿಸಿ ಲಿಂಡಾ ಅವರ ತಾನು ಪ್ರತಿನಿಧಿಯಾಗಿದ್ದು ಭಾರತಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾನೆ.
ವಿಮಾನಯಾನದ ವೆಚ್ಚ, ಕೋವಿಡ್ ಸರ್ಟಿಫಿಕೆಟ್ ಖರ್ಚು, ಏರ್ ಪೋರ್ಟ್ ಪಾರ್ಸಲ್ ವೆಚ್ಚ ಪಾರ್ಸಲ್ ತೆಗೆದುಕೊಳ್ಳಲು ಹಾಗೂ ಅಲ್ಲಿನ ತನಿಖಾಧಿಕಾರಿಗಳಿಗೆ ನೀಡಬೇಕಾದ ಹಣ, ಪೊಲೀಸ್ ವೆರಿಫಿಕೇಶನ್ ಸ್ಟ್ಯಾಂಪ್ ಡ್ಯೂಟಿ ಚಾರ್ಜ್ ತುಂಬುವಂತೆ ವಿಲಿಯಂ, ಶ್ರೀಪಾದ ಹೆಗಡೆಗೆ ತಿಳಿಸಿದ್ದಾನೆ. ಮಾತು ನಂಬಿ ಶ್ರೀಪಾದ ಹೆಗಡೆ ವಿಲಿಯಂ ನೀಡಿದ ವಿವಿಧ ಖಾತೆಗೆ ಜೂ.10ರಿಂದ 26ರವರೆಗೆ ಒಟ್ಟೂ 4,90,350 ರೂ. ವರ್ಗಾವಣೆ ಮಾಡಿದ್ದಾರೆ. ಆದರೂ ಯಾವುದೇ ಪಾರ್ಸೆಲ್ ಬರಲಿಲ್ಲ. ಇದರಿಂದ ಇದರಿಂದ ತನಗೆ ಮೋಸವಾಗಿದೆ ಎಂದು ಅರಿತು ಕಾರವಾರದ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಶ್ರೀಪಾದ ಹೆಗಡೆ ದೂರು ದಾಖಲಿಸಿದ್ದಾರೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಅಂಜಲಿ ಹತ್ಯೆ ಆರೋಪಿ ಬಂಧನ ; ಈತನ ಬಂಧನವಾಗಿದ್ದೇ ರೋಚಕ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement