ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿ ಮೇಲೆ ಕೊಲ್ಲಾಪುರ ಜೈಲಿನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ

ಮುಂಬೈ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಕೊಲ್ಲಾಪುರದ ಕಲಾಂಬಾ ಸೆಂಟ್ರಲ್ ಜೈಲಿನಲ್ಲಿ ಭಾನುವಾರ ಐವರು ಕೈದಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯಂತೆ, ಜೈಲಿನ ಸ್ನಾನಗೃಹದಲ್ಲಿ ಸ್ನಾನ ಮಾಡುವಾಗ ಇತರ ಕೈದಿಗಳೊಂದಿಗೆ ವಾದ ವಿವಾದ ವಿಕೋಪಕ್ಕೆ ಹೋಗಿ 59 ವರ್ಷದ ಮುನ್ನಾ ಅಲಿಯಾಸ್ ಮೊಹಮ್ಮದ್ ಅಲಿ ಖಾನ್ ಅಲಿಯಾಸ್ ಮನೋಜಕುಮಾರ ಭವರ್ಲಾಲ್ ಗುಪ್ತಾ ಎಂಬಾತನ ಮೇಲೆ ಮೇಲೆ ಹಲ್ಲೆಗೆ ಕಾರಣವಾಯಿತು.
ಮೊಹಮ್ಮದ್ ಖಾನ್ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. “ವಾದ-ವಿವಾದದ ನಂತರ ಅದು ವಿಕೋಪಕ್ಕೆ ಹೋಗಿ ಕೆಲವು ವಿಚಾರಣಾಧೀನ ಕೈದಿಗಳು ಒಳಚರಂಡಿಯ ಸ್ಲ್ಯಾಬ್‌ ತೆಗೆದುಕೊಂಡು ತೆಗೆದು ಖಾನ್ ತಲೆಗೆ ಹೊಡೆದಿದ್ದಾರೆ.

ಆತ ನೆಲಕ್ಕೆ ಕುಸಿದು ಬಿದ್ದಿದ್ದಾನೆ, ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು ಅಲ್ಲಿ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು ಎಂದು ಪೊಲೀಸ್ ಅಧಿಕಾರಿ ಹೇಳಿದರು.
ದಾಳಿಕೋರರನ್ನು ಪ್ರತೀಕ್ ಅಲಿಯಾಸ್ ಪಿಲ್ಯ ಸುರೇಶ್ ಪಾಟೀಲ, ದೀಪಕ ನೇತಾಜಿ ಖೋತ್‌, ಸಂದೀಪ ಶಂಕರ ಚವಾಭ, ಋತುರಾಜ ಇನಾಮದಾರ್ ಮತ್ತು ಸೌರಭ ವಿಕಾಸ ಎಂದು ಗುರುತಿಸಲಾಗಿದೆ. ಕೊಲ್ಲಾಪುರ ಪೊಲೀಸರು ಐವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಮಾರ್ಚ್ 12, 1993 ರಂದು ಮುಂಬೈನಲ್ಲಿ ನಡೆದ ಒಂದೇ ದಿನದ ಸರಣಿ ಬಾಂಬ್ ಸ್ಫೋಟದಲ್ಲಿ 257 ಜನ ಮೃತಪಟ್ಟಿದ್ದರು ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಪ್ರಮುಖ ಸುದ್ದಿ :-   ಏಷ್ಯಾದ ಕೆಲವು ದೇಶಗಳಲ್ಲಿ ಕೋವಿಡ್-19 ಸೋಂಕು ಮತ್ತೆ ಹೆಚ್ಚಳ ; JN.1 ರೂಪಾಂತರ ಎಷ್ಟು ಅಪಾಯಕಾರಿ..?

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement