ಅಬಕಾರಿ ನೀತಿ ಪ್ರಕರಣ: ಅರವಿಂದ ಕೇಜ್ರಿವಾಲ್‌ ಬಳಸಿದ್ದ ಮೊಬೈಲ್ ನಾಪತ್ತೆ ; ವರದಿ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅಬಕಾರಿ ನೀತಿ ರೂಪಿಸುವಾಗ ಬಳಸುತ್ತಿದ್ದರು ಎನ್ನಲಾದ ತಮ್ಮ ಮೊಬೈಲ್ ಫೋನ್ ಅನ್ನು ಎಲ್ಲಿ ಇರಿಸಿದ್ದಾರೆ ಎಂಬುದು ನೆನಪಿಲ್ಲ ಎಂದು ಜಾರಿ ನಿರ್ದೇಶನಾಲಯಕ್ಕೆ ವಿಚಾರಣೆಯ ಸಂದರ್ಭದಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೇ ಟಿವಿ ವರದಿ ಮಾಡಿವೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರನ್ನು ಇ.ಡಿ. ಗುರುವಾರ ಬಂಧಿಸಿದೆ ಮತ್ತು ಪ್ರಸ್ತುತ ಮಾರ್ಚ್ 28 ರವರೆಗೆ ಅವರ ಕಸ್ಟಡಿಯಲ್ಲಿದ್ದಾರೆ.
ಮೂಲಗಳ ಪ್ರಕಾರ, ಮದ್ಯ ನೀತಿ ಪ್ರಕರಣದ ಮತ್ತೊಬ್ಬ ಆರೋಪಿ ಸಮೀರ ಮಹೇಂದ್ರು ಅವರೊಂದಿಗೆ ಕೇಜ್ರಿವಾಲ್ ಮಾತನಾಡುತ್ತಿದ್ದರು ಎನ್ನಲಾದ ಫೋನ್‌ನಿಂದ ಕೆಲವು ಡೇಟಾವನ್ನು ಹೊರತೆಗೆಯಲು ಜಾರಿ ನಿರ್ದೇಶನಾಲಯ ಬಯಸಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿ ಹೇಳಿದೆ.

ಅಬಕಾರಿ ನೀತಿ ಪ್ರಕರಣ: ಅರವಿಂದ ಕೇಜ್ರಿವಾಲ್‌ ಬಳಸಿದ್ದ ಮೊಬೈಲ್ ನಾಪತ್ತೆ ; ವರದಿಎಎಪಿಯ ಮಾಧ್ಯಮ ಉಸ್ತುವಾರಿಯಾಗಿದ್ದ ವಿಜಯ ನಾಯರ್ ಅವರು ‘ಸೌತ್ ಗ್ರೂಪ್’ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಇಡಿ ಆರೋಪಪಟ್ಟಿ ಆರೋಪಿಸಿದೆ.
ಕೇಂದ್ರ ತನಿಖಾ ಸಂಸ್ಥೆಯು ಶುಕ್ರವಾರ ದೆಹಲಿ ನ್ಯಾಯಾಲಯದ ಮುಂದೆ ತನ್ನ ರಿಮಾಂಡ್ ಅರ್ಜಿಯಲ್ಲಿ, ಕೇಜ್ರಿವಾಲ್ “ದೆಹಲಿ ಅಬಕಾರಿ ನೀತಿ ಹಗರಣದ ಪ್ರಮುಖ ಸಂಚುಕೋರ ಮತ್ತು ಕಿಂಗ್‌ಪಿನ್” ಎಂದು ಆರೋಪಿಸಿದೆ. ಅವರು ನೀತಿಯನ್ನು ರೂಪಿಸುವಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದಾರೆ, ಕಿಕ್‌ಬ್ಯಾಕ್‌ಗಳನ್ನು ಕೋರುತ್ತಾರೆ ಮತ್ತು ಅಪರಾಧದ ಆದಾಯವನ್ನು ನಿರ್ವಹಿಸುವಲ್ಲಿಯೂ ಸಹ ತೊಡಗಿಸಿಕೊಂಡಿದ್ದಾರೆ ಎಂದು ಅದು ಹೇಳಿದೆ.
ಆದಾಗ್ಯೂ, ಕೇಜ್ರಿವಾಲ್ ಆರೋಪಗಳನ್ನು ನಿರಾಕರಿಸಿದ್ದಾರೆ. ಈಗ ರದ್ದಾದ ನೀತಿಯಲ್ಲಿ ಆಪಾದಿತ ಹಗರಣಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಆಘಾತಕಾರಿ...| ಗಂಡನ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿ ಇರಿಸಿಕೊಂಡ ಬ್ಯಾಂಕ್‌ ; ಹಣದ ಕಂತು ಕೊಟ್ಟ ಬಳಿಕವೇ ಮಹಿಳೆಯ ಬಿಡುಗಡೆ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement